ಬೆಂಗಳೂರು: ಕೇರಳ, ಗುಜರಾತ್, ರಾಜಸ್ಥಾನ ಮೂಲದ ಹದಿನಾಲ್ಕು ಆರೋಪಿಗಳನ್ನ ಬಂಧಿಸಲಾಗಿದ್ದು, ಅವರ ಖಾತೆಯಲ್ಲಿದ್ದ 25.47 ಲಕ್ಷ ರೂ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ವಶಕ್ಕೆ ಪಡೆಯಲಾಗಿದೆ.


COMMERCIAL BREAK
SCROLL TO CONTINUE READING

ಐವಿಆರ್ (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಮೂಲಕ ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡುತ್ತಿದ್ದ ಕಿಲಾಡಿಗಳು ನೀವು ಕಳಿಸಿರುವ ನಿಷೇಧಿತ ವಸ್ತುಗಳಿರುವ ಪಾರ್ಸಲನ್ನ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಬೆದರಿಸುತ್ತಿದ್ದರು. 


ಇದನ್ನೂ ಓದಿ-ರಾಜ್ಯದಲ್ಲಿ ದಿನೆ ದಿನೇ ಹಚ್ಚುತ್ತಿದೆ ಕೋವಿಡ್ ಉಪಟಳ


ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ನಂಬರ್ ನಿಂದ ಕರೆ ಮಾಡಿ 'ಮುಂಬೈ ಪೊಲೀಸ್ / ಎನ್.ಸಿ.ಬಿ / ಸಿಬಿಐ / ಇಡಿ ಅಥವಾ ಆರ್.ಬಿ.ಐ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಲಿದೆ. ಆದ್ದರಿಂದ ನಿಮ್ಮನ್ನು ವಿಚಾರಣೆಗೊಳಪಡಿಸಬೇಕಿದೆ ಎನ್ನುತ್ತಿದ್ದರು. ಕೆಲವೊಮ್ಮೆ ಹಣ ವರ್ಗಾಯಿಸಿಕೊಂಡರೆ, ಕೆಲವೊಮ್ಮೆ ಬ್ಯಾಂಕ್‌ ಖಾತೆಗಳು ಹಾಗೂ ವೈಯಕ್ತಿಕ ದಾಖಲೆಗಳನ್ನ ಪಡೆದು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದರು.


ಇದನ್ನೂ ಓದಿ-ಗದಗದಿಂದ ಯಶ್ ವಾಪಸ್ ಆಗುವಾಗ ಮತ್ತೊಂದು ಅವಘಡ


ಇಂತಹ ಹೆಚ್ಚಾಗುತ್ತಿದ್ದ ಹಿನ್ನೆಲೆ ಬೆಂಗಳೂರು ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಕಳೆದ ಒಂದು ವರ್ಷಗಳ ಅವಧಿಯಲ್ಲಿ ದಾಖಲಾಗಿದ್ದ ಸುಮಾರು 330 ಪ್ರಕರಣಗಳ ಸಮಗ್ರ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ರಾಜಸ್ಥಾನ ಮೂಲದ ಲಲಿತ್ ಕುಮಾರ್, ರಮೇಶ್ ಕುಮಾರ್, ದಿಲೀಪ್ ಸೋನಿ, ಗುಜರಾತ್ ಕಾಂಜಿ ಭಾಯಿ ರಬಾರಿ, ಕರ್ನಾಟಕದ ಭಟ್ಕಳ ಮೂಲದ ಅಸೀಂ ಅಪಂದಿ, ಮೊಹಮ್ಮದ್ ಸಲೀಂ ಸೈಫ್, ಕೇರಳ ಮೂಲದ ನೌಫೆಲ್.ಕೆ.ಪಿ, ರಿಯಾಜ್.ಕೆ.ಎಸ್, ನೌಫೇಲ್, ಅರ್ಷದ್ ಹಾಗೂ ಆಶಿಕ್ ಎಂ.ಪಿ ಸೇರಿ ಒಟ್ಟು ಹದಿನಾಲ್ಕು ಜನ ಆರೋಪಿಗಳನ್ನ ಬಂಧಿಸಿದೆ.


ಆರೋಪಿಗಳ ಬಂಧನದಿಂದ ಬೆಂಗಳೂರು ನಗರದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳು ಪತ್ತೆಯಾವೆ‌. ಪ್ರಕರಣದಲ್ಲಿ ಸುಮಾರು 2.10 ಕೋಟಿಯಷ್ಟು ವಂಚನೆಯಾಗಿರುವುದು ಗೊತ್ತಾಗಿದೆ. ಹಾಗೆಯೇ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಹೆಲ್ಪ್ ಲೈನ್‌ ಮೂಲಕ ವರದಿಯಾಗಿದ್ದ 546 ಪ್ರಕರಣಗಳಲ್ಲಿ ಆರೋಪಿಗಳ ಕೈವಾಡವಿರುವುದು ಬಯಲಾಗಿದೆ. ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಕೆಲ ಆರೋಪಿಗಳಿಗಾಗಿ ಪೊಲೀಸರು ಮತ್ತೆ ಬಲೆ ಬೀಸಿದ್ದಾರೆ.


ಫೆಡೆಕ್ಸ್‌ ಕಂಪನಿ ಈ ಕುರಿತು ಕೊಟ್ಟ ಸ್ಪಷ್ಟನೆ: 


ಗ್ರಾಹಕರಿಂದ ವಿನಂತಿಸಿದ ಹೊರತು, ಸರಕುಗಳನ್ನು ಸಾಗಿಸಲು ಅಥವಾ ಹಿಡಿದಿಟ್ಟುಕೊಳ್ಳಲು ಅಪೇಕ್ಷಿಸದ ಫೋನ್ ಕರೆಗಳು, ಮೇಲ್ ಅಥವಾ ಇಮೇಲ್ ಮೂಲಕ ವೈಯಕ್ತಿಕ ಮಾಹಿತಿಯನ್ನು FedEx ವಿನಂತಿಸುವುದಿಲ್ಲ. ಯಾವುದೇ ವ್ಯಕ್ತಿ ಯಾವುದೇ ಅನುಮಾನಾಸ್ಪದ ಫೋನ್ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ, ಅವರ ವೈಯಕ್ತಿಕ ಮಾಹಿತಿಯನ್ನು ನೀಡದಂತೆ  FedEx ಕಂಪನಿ ಮನವಿ ಮಾಡಿದೆ.. ಈ ರೀತಿಯ ಕರೆ ಅಥವಾ ಸಂದೇಶವನ್ನು ಸ್ವೀಕರಿಸಿದರೆ  ತಕ್ಷಣವೇ ಹತ್ತಿರದಲ್ಲಿರು ಸೈಬರ್‌ ಕ್ರೈಮ್‌ ವಿಭಾಗ ಅಥವಾ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕಂಪನಿ ತಿಳಿಸಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.