Fetus gender detected in Maharashtra, abortion in Karnataka: ಭ್ರೂಣ ಲಿಂಗ ಪತ್ತೆ  (Fetal Sex Detection) ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಕೂಡ ಇತ್ತೀಚಿಗೆ ಬೆಂಗಳೂರು, ವಿಜಯಪುರ , ಮೈಸೂರು , ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹತ್ಯೆ ನಡೆದಿತ್ತು. ಈ ಜಿಲ್ಲೆಗಳಲ್ಲಿನ ಪ್ರಕರಣಗಳು ಮಾಸುವ ಮುನ್ನವೇ ಮಹಾರಾಷ್ಟ್ರ-ಕರ್ನಾಟಕ ಗಡಿ ಜಿಲ್ಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು,  ಆಘಾತಕಾರಿ ಪ್ರಕರಣವನ್ನು ಮಹಾರಾಷ್ಟ್ರ ಪೊಲಿಸರು ಪತ್ತೆ ಹಚ್ಚಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಮಹಾರಾಷ್ಟ್ರ ಪೊಲೀಸರು ಭ್ರೂಣ ಲಿಂಗ ಪತ್ತೆ ಜಾಲವನ್ನು (Fetal Gender Detection Network) ಪತ್ತೆ ಹಚ್ಚಿದ್ದು  ಕರ್ನಾಟಕದ ಗಡಿಯಲ್ಲಿ ಶಿಶುಗಳ ಮಾರಣಹೋಮ ಗ್ಯಾಂಗ್ ಒಂದನ್ನು ಪತ್ತೆ ಹಚ್ಚಿದ್ದಾರೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿರುವುದು ಬಯಲಾಗಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಐದು ಜನ ಬಾಗಲಕೋಟೆ ಜಿಲ್ಲೆಯಲ್ಲಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 


ಇದನ್ನೂ ಓದಿ- ಸಣ್ಣ ವಿಚಾರಕ್ಕೆ ಮನಸ್ಥಾಪ: ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ನೇಣಿಗೆ ಶರಣು


ಮಹಾರಾಷ್ಟ್ರದ (Maharashtra) ಕೊಲ್ಲಾಪುರ ಮೂಲದ ಸೋನಾಲಿ (33) ಎಂಬುವರು ಮಹಾರಾಷ್ಟ್ರದ ಮಿರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಒಳಗಾಗಿದ್ದು ಈ ವೇಳೆ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಖಚಿತವಾಗಿದೆ.  ಸೋನಾಲಿ ದಂಪತಿಗೆ ಈಗಾಗಲೆ ಇಬ್ಬರು ಹೆಣ್ಣುಮಕ್ಕಳಿದ್ದು ಮೂರನೆಯದ್ದೂ ಹೆಣ್ಣು ಮಗು ಅಂತ ಗೊತ್ತಾಗುತ್ತಿದ್ದಂತೆ, ಸೋನಾಲಿ ಕುಟುಂಬಸ್ಥರು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದಾರೆ. ಆಗ, ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿದ್ದ ಆರೋಪಿ ಕವಿತಾ ಎಂಬುವರನ್ನು ಸಂಪರ್ಕಿಸಿ, ಸೋನಾಲಿ ಅವರನ್ನು ಕರೆದುಕೊಂಡು ಸೋಮವಾರ (ಮೇ 27)ರ ಮಹಾಲಿಂಪೂರ ಬರುತ್ತಾರೆ. ಇಲ್ಲಿ ಗರ್ಭಪಾತ (Abortion) ಬಳಿಕ ರಕ್ತಸ್ರಾವವಾಗಿ ಸೋನಾಲಿ ಅವರು ಪ್ರಜ್ಞಾ ಹೀನರಾಗುತ್ತಾರೆ. ಆಗ ಕವಿತಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾರೆ. ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಮಾರ್ಗಮಧ್ಯೆ ಸೋನಾಲಿ ನಿಧನರಾಗಿದ್ದಾರೆ. 


ಮೃತ ಸೋನಾಲಿ ದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ, ಗಡಿಯಲ್ಲಿ ಮೀರಜ್ ಪೊಲಿಸರು ಕಾರು ತಪಾಸಣೆ ಮಾಡಿದಾಗ, ಮೃತ ದೇಹ ಪತ್ತೆಯಾಗಿದೆ. ಪೋಲಿಸರು ಶಂಕೆ ಬಂದು ವಿಚಾರಣೆ ಮಾಡಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೂಡಲೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಾರಾಷ್ಟ್ರ ಉಪ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಸಾಹೇಬ್ ಜಾಧವ್‌ ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ- ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ನಡೆಯಿತು ಮತ್ತೊಂದು ಕೊಲೆ : ಮನೆ ಮಂದಿ ಕಣ್ಣೆದುರೇ ಯುವತಿ ಹತ್ಯೆ


ಒಟ್ಟಾರೆಯಾಗಿ ಆರೋಪಿ ಕವಿತಾ ಮಹಾಲಿಂಗಪುರ ಪಟ್ಟಣದಲ್ಲಿನ ಆಸ್ಪತ್ರೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡಿದ್ದಳು. ಈಕೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಗರ್ಭಪಾತ ಹೇಗೆ ಮಾಡುತ್ತಾರೆ ಎಂದು ನೋಡಿಕೊಂಡಿದ್ದಳು. ನಂತರ ಕವಿತಾ ಗರ್ಭಪಾತ ಮಾಡಲು ಆರಂಭಿಸಿದ್ದಾಳೆ, ಆದರೆ ಹಣದಾಸೆಗೆ ಮಹಿಳೆಯನ್ನು ಬಲೆ ಪಡೆದುಕೊಂಡು ಇಬ್ಬರು ಹೆಣ್ಣು ಮಕ್ಕಳು ಮಕ್ಕಳನ್ನು ತಬ್ಬಲಿ ಮಾಡಿದ್ದು ಪಾಪಿ ಕವಿತಾಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.