ಬೆಂಗಳೂರು : ಹಿಂದೂ ಯುವಕನಿಗೆ ಮತಾಂತರ ಮಾಡಿ  ಕತ್ನಾ ಆರೋಪದಡಿ ಹುಬ್ಬಳ್ಳಿಯಿಂದ ಬನಶಂಕರಿ ಠಾಣೆಯಿಂದ ವರ್ಗಾವಣೆಯಾಗಿದ್ದ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಬನಶಂಕರಿ ವಾರ್ಡ್ ಮಾಜಿ ಕಾರ್ಪೋರೇಟರ್ ಅನ್ಸರ್ ಪಾಷಾ, ನಯಾಜ್ ಖಾನ್ ಹಾಗೂ ಅಜೀಸಾಬ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ.  ತಲೆಮರೆಸಿಕೊಂಡಿರುವ ಏಳು ಮಂದಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ.


ಇದನ್ನೂ ಓದಿ : Karva Chauth 2022: ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ!


ಹಣಕಾಸಿನ ನೆರವಿನ ನೆಪದಲ್ಲಿ ಪ್ರಕರಣದ ಮೊದಲ ಆರೋಪಿ ಅತ್ತಾವರ್ ರೆಹಮಾನ್ ಕಳೆದ ಒಂದು ವರ್ಷದ ಹಿಂದೆ ಬನಶಂಕರಿ‌ ಮಸೀದಿಗೆ ಸಂತ್ರಸ್ತ ಶ್ರೀಧರ್ ನನ್ನ‌ ಕರೆತಂದು‌ ಎಲ್ಲಾ‌ ಆರೋಪಿಗಳನ್ನು ಪರಿಚಯಿಸಿದ್ದ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಮಾತನಾಡಿ ಹಂತ-ಹಂತವಾಗಿ ಇಸ್ಲಾಂ ಧರ್ಮಕ್ಕೆ‌ ಮತಾಂತರವಾಗಲು  ಒತ್ತಡ ಹೇರಿದ್ದರು. ಅಕ್ರಮವಾಗಿ ಬಂಧನದಲ್ಲಿರಿಸಿ ಬಲವಂತವಾಗಿ ಇಸ್ಲಾಂ ಧರ್ಮದಂತೆ ಕತ್ನಾ ಮಾಡಿಸಿದ್ದರು.


ಬಲವಂತದ ಮತಾಂತರ, ಕತ್ನಾ ಪ್ರಕರಣದಲ್ಲಿ ಕಾರ್ಪೋರೇಟರ್ ಅನ್ಸರ್ ಪಾಷಾ ಕೂಡ ಆರೋಪಿಯಾಗಿದ್ದು ಅನ್ಸರ್ ಪಾಷಾನ ಸಂಬಂಧಿ  ಖಬರಿಸ್ತಾನ್ ಮಸೀದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಬಂಧಿತ ನಯಾಜ್ ಪಾಷಾ ಇಸ್ಲಾಂ ಧರ್ಮದ ಭೋದನೆ ಮಾಡಿ ಮರ್ಮಾಂಗದ 'ಕತ್ನಾ'ಮಾಡಿದಲ್ಲದೆ ಗೋ ಮಾಂಸವನ್ನು ಬಲವಂತವಾಗಿ ತಿನ್ನಿಸಿರುವ ಆರೋಪ ಕೇಳಿ ಬಂದಿದೆ‌. ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಬಾಂಡ್ ಪೇಪರ್ ಬರೆಸಿಕೊಂಡಿದ್ದರು. ನಂತರ ಬನಶಂಕರಿಯ ಮಸೀದಿಯಲ್ಲಿಟ್ಟಗಾ ಶ್ರೀಧರ್ ಪ್ರತಿರೋಧ ತೋರಿದ್ದ. 


ಹೀಗಾಗಿ ವಿಡಿಯೋ ಮಾಡಿ ಭಯೋತ್ಪಾದಕ ಎಂದು ಬಿಂಬಿಸುವುದಾಗಿ ಬೆದರಿಸಿದ್ದರು. ನಂತರ ಮತಾಂತರದ ಬಗ್ಗೆ ಬರೆಸಿಕೊಂಡು ಇದರ ಬಗ್ಗೆ ಏನಾದರು ಹೊರಗಡೆ ತಿಳಿದರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನು ಹರಿಬಿಡೋದಾಗಿ ಬೆದರಿಕೆ ಹಾಕಿದ್ದರು.ಜೊತೆಗೆ ವರ್ಷಕ್ಕೆ ಮೂರು ಜನರನ್ನ ಕರೆ ತಂದು ಮತಾಂತರ ಮಾಡಿಸಬೇಕೆಂದು ಒತ್ತಾಯಿಸಿದ್ದರು‌. ಈಗ ಶ್ರೀಧರ್ ದೂರಿನಲ್ಲಿ ಉಲ್ಲೇಖಿಸಿ ಅಂಶ ಆಧರಿಸಿ ಸದ್ಯ ಐವರನ್ನು ಬಂಧಿಸಲಾಗಿದೆ.


ಇದನ್ನೂ ಓದಿ : Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್‌ ಆಗ್ತೀರಾ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.