Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್‌ ಆಗ್ತೀರಾ!

Delivery Boy Video Viral : ಝೊಮಾಟೊ ಡೆಲಿವರಿ ಏಜೆಂಟ್ ರಾತ್ರಿ ಹೊತ್ತು ನಡುರಸ್ತೆಯಲ್ಲಿ ಮಾಡಿದ ಒಂದು ಕೆಲಸ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Oct 13, 2022, 03:53 PM IST
  • ಈ Zomato ಬಾಯ್ ಹೀಗೆಲ್ಲಾ ಮಾಡೋದಾ?
  • ರಸ್ತೆ ಮಧ್ಯೆ ಕುಣಿಯಲು ಆರಂಭಿಸಿದ ಯುವಕ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್‌ ಆಗ್ತೀರಾ! title=
ಝೊಮಾಟೊ ಡೆಲಿವರಿ ಏಜೆಂಟ್

Delivery Boy Video Viral : ನವರಾತ್ರಿಯ ಹಬ್ಬ ಕಳೆದಿರಬಹುದು ಆದರೆ ಅದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನವರಾತ್ರಿಯಲ್ಲಿ, ಜನರು ನೃತ್ಯ ಮಾಡಲು ಇಷ್ಟಪಡುತ್ತಾರೆ. ಜನರು ಸಂಜೆ ಗರ್ಬಾ ಸಂಗೀತವನ್ನು ಕೇಳಿದ ತಕ್ಷಣ, ಕುಣಿಯಲು ಆರಂಭಿಸುತ್ತಾರೆ. ಇದೀಗ Zomato ಡೆಲಿವರಿ ಏಜೆಂಟ್ ನಡುರಸ್ತೆಯಲ್ಲಿ ನೃತ್ಯ ಮಾಡುವ ವಿಡಿಯೋ ವೈರಲ್‌ ಆಗಿದೆ. 

ಇದನ್ನೂ ಓದಿ : Peacock Dream : ಕನಸಿನಲ್ಲಿ ನವಿಲು ಕಂಡರೆ ನಿಜವಾಗಿಯೂ ಶ್ರೀಮಂತರಾಗ್ತಾರಾ?

ಮುಂಬೈನ ಆರ್ಕೇಡ್ ಅರ್ಥ್ ಹೌಸಿಂಗ್ ಸೊಸೈಟಿಯಿಂದ ಆಶಿಶ್ ಮುಲಾಯ್ ಅವರು Instagram ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಡೆಲಿವರಿ ಏಜೆಂಟ್ ದಾರಿ ಮಧ್ಯೆ ಹೋಗುತ್ತಿರುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಅವನ ಕಿವಿಯಲ್ಲಿ ಗಾರ್ಬಾ ಸಂಗೀತ ಕೇಳಿಸಿತು ಎನಿಸುತ್ತೆ. ಆತ ದಾರಿ ಮಧ್ಯೆಯೇ ನೃತ್ಯ ಮಾಡಲು ಆರಂಭಿಸಿದ. ನಂತರ ಗರ್ಬಾ ಡ್ಯಾನ್ಸ್‌ ಮಾಡಿದ. ಈ ವಿಡಿಯೋವನ್ನು ಹಂಚಿಕೊಂಡ ಆಶಿಶ್ ಮುಲಾಯ್ ಅವರು ಶೀರ್ಷಿಕೆಯಲ್ಲಿ, "ಗರ್ಬಾ ನೈಟ್ಸ್‌ಗಾಗಿ ತಯಾರಿ ನಡೆಸುತ್ತೀರಾ? ಚಿಂತಿಸಬೇಡಿ, ಜೀವನದ ಪ್ರತಿ ಕ್ಷಣವನ್ನು ಆನಂದಿಸಿ" ಎಂದು  ಬರೆದಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by AshIsh MuLe (@iamparalkar)

 

ಝೊಮಾಟೊ ಡೆಲಿವರಿ ಬಾಯ್ ಡ್ಯಾನ್ಸ್ ಮಾಡಿರುವ ಈ ಕ್ಲಿಪ್ ಗೆ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಈ ವ್ಯಕ್ತಿಯ ಸಂತೋಷವು ನೆಟಿಜನ್‌ಗಳ ಹೃದಯವನ್ನು ಗೆದ್ದಿದೆ. ಹಬ್ಬಗಳು ಸಮಾಜದ ಮೂಲೆ ಮೂಲೆಯ ಜನರನ್ನು ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅನೇಕರು ಬರೆದಿದ್ದಾರೆ.

ಇದನ್ನೂ ಓದಿ : WATCH: ಹುಲಿಯ ಜೊತೆ ನಾಯಿಯ ಕಾದಾಟ.. ಇದನ್ನು ಕಂಡು ಹೆದರಿ ನಿಂತ ಸಿಂಹ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News