Breaking News : ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ನಿಧನ!
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.
ಮುಂಬೈ : ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.
ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿಯ ಚರೋತಿ ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಿಸ್ತ್ರಿ ತಮ್ಮ ಮರ್ಸಿಡಿಸ್ ಕಾರಿನಲ್ಲಿ ಗುಜರಾತ್‌ನಿಂದ ಮುಂಬೈಗೆ ಹಿಂತಿರುಗುತ್ತಿದ್ದರು. ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : Watch Viral Video: 'ಹಿಟ್ಟು 40 ರೂ. ಪ್ರತಿ ಲೀಟರ್' ಎಂದ ರಾಹುಲ್ ಗಾಂಧಿ, ಟ್ರೋಲರ್ ಗಳು ಸುಮ್ನಿರ್ತಾರಾ?
ಕಾರಿನಲ್ಲಿ ಅವರ ಜೊತೆ ಇನ್ನೂ ಮೂವರು ಹೋಗುತ್ತಿದ್ದರು. ಅವರಲ್ಲಿ ಒಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಧ್ಯ ಇಬ್ಬರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೈರಸ್ ಮಿಸ್ಟರಿ ಯಾರು?
ಟಾಟಾ ಸನ್ಸ್‌ನ ಆರನೇ ಅಧ್ಯಕ್ಷರಾಗಿದ್ದ ಮಿಸ್ತ್ರಿ ಅವರನ್ನು ಅಕ್ಟೋಬರ್ 2016 ರಲ್ಲಿ ಸ್ಥಾನದಿಂದ ಹೊರಹಾಕಲಾಯಿತು. ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ ಸೈರಸ್ ಮಿಸ್ತ್ರಿ ಅವರು ಡಿಸೆಂಬರ್ 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎನ್ ಚಂದ್ರಶೇಖರನ್ ನಂತರ ಟಾಟಾ ಸನ್ಸ್ ನ ಕಾರ್ಯಕಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಟಾಟಾ ಸನ್ಸ್‌ನ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ಟಾಟಾ ಸಮೂಹದ ನಿರ್ಧಾರವನ್ನು ಎತ್ತಿಹಿಡಿದ 2021 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಪೂರ್ಜಿ ಪಲ್ಲೊಂಜಿ (ಎಸ್‌ಪಿ) ಗುಂಪಿನ ಮನವಿಯನ್ನು ಸುಪ್ರೀಂ ಕೋರ್ಟ್ ಮೇ ತಿಂಗಳಲ್ಲಿ ವಜಾಗೊಳಿಸಿತ್ತು.
ಇದನ್ನೂ ಓದಿ : Viral Video: ಎಕ್ಸ್‌ಪ್ರೆಸ್ ರೈಲಿಗೆ ಕೈ ಅಡ್ಡಹಾಕಿ ನಿಲ್ಲಿಸಿದ ತಾತ, ದಂಗಾದ ನೆಟ್ಟಿಗರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.