ಖಾಂಡ್ವಾ (ಮಧ್ಯಪ್ರದೇಶ): ಇಂದು ಬೆಳಗ್ಗೆ ಸ್ನಾನಕ್ಕೆಂದು ತೆರಳಿದ ಆಶ್ರಮವೊಂದರ ಬಾಲಕಿಯರು ಹರಿಯುವ ನೀರಿನ ವೇಗಕ್ಕೆ ಸಿಲುಕಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಲ್ಲಿನ ಓಂಕಾರೇಶ್ವರ ಪ್ರದೇಶದ ಕೋಠಿ ಗ್ರಾಮದಲ್ಲಿ ಸಾಧ್ವಿ ಋತಂಬರ ಪೀತಾಂಬರೇಶ್ವರ ಆಶ್ರಮವಿದ್ದು, ಅದರ ಬಳಿಯೇ ಅಣೆಕಟ್ಟಿನ ಕಾಲುವೆ ಹಾದು ಹೋಗಿದೆ. ಇಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Mask mandatory in Delhi : ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ : ಎಂಟ್ರಿ ನೀಡಿದೆಯಾ 4ನೇ ಅಲೆ!


ರೇಲಿಂಗ್​ಗೆ ಕಟ್ಟಿದ್ದ ಚೈನ್ ಹಿಡಿದುಕೊಂಡು ಎಲ್ಲರೂ ಸ್ನಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹುಡುಗಿಯೊಬ್ಬಳು ಕೈ ಜಾರಿ  ಹರಿಯುವ ನೀರಿನ ವೇಗಕ್ಕೆ ಸಿಲುಕಿದ್ದಾಳೆ. ಆಕೆಯನ್ನು ನೋಡಿದ ಸ್ನೇಹಿತೆ ಕಾಪಾಡಲೆಂದು ಕಾಲುವೆಗೆ ಹಾರಿದ್ದಾಳೆ.  ರಕ್ಷಿಸಲು ಪ್ರಯತ್ನಿಸುವ ಭರದಲ್ಲಿ ಒಬ್ಬರಂತೆ ಒಬ್ಬರು ಕಾಲುವೆ ಹಾರಿದ್ದು, ದುರಾದೃಷ್ಟವಶಾತ್‌ ನಾಲ್ವರು ನೀರುಪಾಲಾಗಿದ್ದಾರೆ. 


ಬಾಲಕಿಯರು ನೀರಿನಲ್ಲಿ ಮುಳುಗುವುದನ್ನು ಕಂಡ ಸ್ಥಳೀಯರು ಕೂಡಲೇ ರಕ್ಷಿಸಲು ನೀರಿಗೆ ಹಾರಿದ್ದಾರೆ. ಆದರೆ ಅದಾಗಲೇ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಹೇಳಲಾಗಿದೆ. 


ಸುದ್ದಿ ತಿಳಿದ ಕೂಡಲೇ ಮಾಂಧಾಟ ಮತ್ತು ಮೋರ್ಟಕ್ಕ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ  ಗ್ರಾಮಸ್ಥರು ಮತ್ತು ಮುಳುಗುಗಾರರ ಸಹಾಯದಿಂದ ಒಂದು ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಕಾಯಾಚರಣೆಯಲ್ಲಿ ಇಬ್ಬರು ಹುಡುಗಿಯರನ್ನು ಸುರಕ್ಷಿತವಾಗಿ ಕಾಲುವೆಯಿಂದ ರಕ್ಷಿಸಲಾಗಿದೆ. ಆದರೆ ಆ ನಾಲ್ವರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಮೃತರನ್ನು ಬಡಿಯಾ ಗ್ರಾಮದ ವೈಶಾಲಿ (12), ಸೋಮವಾಡ ಗ್ರಾಮದ ಕಾಂಚನಾ ರಮೇಶ್ (11), ದಭಡ್ ಗ್ರಾಮದ ಪ್ರತೀಕ್ಷಾ ಛಾನಿಯಾ (12), ಇಂದ್ರಾಪುರ ರಹಾತಿಯಾ ಗ್ರಾಮದ ದಿವ್ಯಾನ್ಸಿ ಚೇತಕ್ (10) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಓಂಕಾರೇಶ್ವರ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಡಿಒಪಿ ರಾಕೇಶ್ ಪೇಂದ್ರ ತಿಳಿಸಿದ್ದಾರೆ. 


ಇದನ್ನು ಓದಿ: PM Kisan ರೈತರು ಪ್ರತಿ ವರ್ಷ ₹6000 ಜೊತೆಗೆ ₹36000 ಕೂಡ ಸಿಗಲಿದೆ : ಹೇಗೆ ಇಲ್ಲಿದೆ


ಋತಂಭರಾ ಓರ್ವ ಸಾಧ್ವಿ, ರಾಜಕಾರಣಿ ಮತ್ತು ಧಾರ್ಮಿಕ ಕಥೆಗಾರ್ತಿ. 1992ರಲ್ಲಿ ಬಾಬರಿ ಮಸೀದಿ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಇಲ್ಲಿನ ಜನ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೂ ಆಗಿದ್ದಾರೆ. ಸದ್ಯ ದೇಶದ ಅನೇಕ ಸ್ಥಳಗಳಲ್ಲಿ ಆಶ್ರಮಗಳನ್ನು ಹೊಂದಿದ್ದು, ಖಾಂಡ್ವಾ ಬಳಿಯ ಓಂಕಾರೇಶ್ವರದಲ್ಲಿ ಸಹ ಆಶ್ರಮವನ್ನೂ ಹೊಂದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.