Mask mandatory in Delhi : ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ : ಎಂಟ್ರಿ ಕೊಡ್ತಾ 4ನೇ ಅಲೆ!

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದಲ್ಲಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. 

Written by - Channabasava A Kashinakunti | Last Updated : Apr 20, 2022, 05:48 PM IST
  • ಶಾಲೆಗಳು ಬಂದ್ ಶಾಲೆಗಳು ಬಂದ್
  • ವೇಗವಾಗಿ ಹೆಚ್ಚುತ್ತಿವೆ ಕರೋನಾ ಪ್ರಕರಣಗಳು
  • ಮಾಸ್ಕ್‌ ಕಡ್ಡಾಯಗೊಳಿಸಿ ನಿಯಮ ಜಾರಿ ಮಾಡಲಾಗಿದೆ.
Mask mandatory in Delhi : ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ : ಎಂಟ್ರಿ ಕೊಡ್ತಾ 4ನೇ ಅಲೆ! title=

ನವದೆಹಲಿ : ದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ, ಮತ್ತೊಮ್ಮೆ ಕಟ್ಟುನಿಟ್ಟಾದ ಕೋವಿಡ್ ನಿಯಮಗಳನ್ನು ಜಾರಿ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದಲ್ಲಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. 

ಶಾಲೆಗಳು ಬಂದ್

ದಿನೆ ದಿನೆ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ, ಹೊಸ SOP ಯನ್ನು ಸಹ ಜಾರಿಗೊಳಿಸಲಾಗಿದೆ, ಇದರಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಇದಲ್ಲದೇ ಸದ್ಯಕ್ಕೆ ಶಾಲೆಗಳನ್ನು ಬಂದ್ ಮಾಡಲು ಡಿಡಿಎಂಎ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ

ದೆಹಲಿಯಲ್ಲಿ ಕರೋನಾ ಪ್ರಕರಣಗಳು ಕಡಿಮೆಯಾದ ನಂತರ, ಮಾಸ್ಕ್ ಧರಿಸದಿದ್ದಕ್ಕೆ ವಿಧಿಸಲಾಗುತ್ತಿದ್ದ ದಂಡದ ನಿಯವನ್ನು ಹಿಂಪಡೆಯಲಾಗಿತ್ತು, ಆದರೂ ಸ್ವಲ್ಪ ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದರು. ಪ್ರಸ್ತುತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ನಿಯಮ ಜಾರಿ ಮಾಡಲಾಗಿದೆ. 

ವೇಗವಾಗಿ ಹೆಚ್ಚುತ್ತಿವೆ ಕರೋನಾ ಪ್ರಕರಣಗಳು 

ರಾಷ್ಟ್ರರಾಜಧಾನಿಯಲ್ಲಿ ಇತ್ತೀಚಿಗೆ ಕರೋನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿತ್ತು. ಈಗ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿವೆ. ಏಪ್ರಿಲ್ 11-18 ರ ನಡುವೆ, ದೆಹಲಿಯಲ್ಲಿ ಸೋಂಕಿನ ಪ್ರಮಾಣ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅಂದಿನಿಂದ ಡಿಡಿಎಂಎ ಸಭೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಮಂಗಳವಾರ, ದೆಹಲಿಯಲ್ಲಿ 632 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು, ಇದರ ಜೊತೆ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1900 ಮೀರಿದೆ. ಸೋಂಕಿನ ಪ್ರಮಾಣವೂ ಏರಿಳಿತವಾಗುತ್ತಿದೆ ಮತ್ತು ಸೋಮವಾರ ಪಾಸಿಟಿವ್ ಪ್ರಮಾಣವು ಶೇ.7.5 ರಷ್ಟು ದಾಟಿದೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಗುಡ್ ನ್ಯೂಸ್! ಈಗ DA ಶೇ.13ರಷ್ಟು ಹೆಚ್ಚಳ, ಕೈಗೆ ಸಿಗಲಿದೆ 3 ತಿಂಗಳ ಬಾಕಿ ಮೊತ್ತ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News