Facebookನಲ್ಲಿ ಫೇಸ್ ನೋಡದೆ ಲವ್ ಮಾಡಿದ ಯುವಕನಿಗೆ ಮದುವೆ ವೇಳೆ ಗೊತ್ತಾಯ್ತು ಶಾಕಿಂಗ್ ಸತ್ಯ!
ಫೇಸ್‌ಬುಕ್‌ನಲ್ಲಿ ಕಮಲಾ ಎಂಬ ಪ್ರೊಫೈಲ್‌ನಿಂದ ಮಂಡ್ಯದ ಯುವಕನಿಗೆ ರಿಕ್ವೆಸ್ಟ್ ಬಂದಿದೆ. ಅದನ್ನು ಆಕ್ಸೆಪ್ಟ್ ಮಾಡಿಕೊಂಡ ಯುವಕ ಚಾಟಿಂಗ್ ಶುರು ಮಾಡಿದ್ದಾನೆ. ಆ ಕಡೆಯಿಂದಲೂ ಅದಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಇನ್ನು ದಿನ ಕಳೆದಂತೆ ಇಬ್ಬರೂ ಸಹ ಫೇಸ್‌ಬುಕ್ ಮೂಲಕ ಲವ್ ಮಾಡಲು ಶುರು ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದ ಮೂಲಕ ಪ್ರೇಮವಾಗಿ ಬಳಿಕ ಆ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನೇಕ ನಿದರ್ಶನಗಳು ಕಣ್ಣಮುಂದಿವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಮೋಸ ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅದೆಷ್ಟೋ ಪ್ರಕರಣಗಳೂ ಇವೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ಫೇಸ್‌ಬುಕ್‌ನಲ್ಲಿ ಮುಖ ನೋಡದೆ ಪ್ರೀತಿಸಿದ ಯುವಕನೋರ್ವ ಮೋಸ ಹೋಗಿದ್ದಾನೆ. ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದ ವೇಳೆ ಆಕೆ ಯುವತಿಯಲ್ಲ, ಆಂಟಿ ಎಂಬ ಸತ್ಯ ಆತನಿಗೆ ತಿಳಿದಿದೆ.
ಇದನ್ನು ಓದಿ: Weight Loss Diet: ತೂಕ ಇಳಿಕೆಗೆ ಡಯಟ್ ಹೇಗಿರಬೇಕು? ಈ 4 ಸಂಗತಿಗಳನ್ನು ನೆನೆಪಿನಲ್ಲಿಡಿ
ಏನಿದು ಘಟನೆ:
ಫೇಸ್‌ಬುಕ್‌ನಲ್ಲಿ ಕಮಲಾ ಎಂಬ ಪ್ರೊಫೈಲ್‌ನಿಂದ ಮಂಡ್ಯದ ಯುವಕನಿಗೆ ರಿಕ್ವೆಸ್ಟ್ ಬಂದಿದೆ. ಅದನ್ನು ಆಕ್ಸೆಪ್ಟ್ ಮಾಡಿಕೊಂಡ ಯುವಕ ಚಾಟಿಂಗ್ ಶುರು ಮಾಡಿದ್ದಾನೆ. ಆ ಕಡೆಯಿಂದಲೂ ಅದಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಇನ್ನು ದಿನ ಕಳೆದಂತೆ ಇಬ್ಬರೂ ಸಹ ಫೇಸ್‌ಬುಕ್ ಮೂಲಕ ಲವ್ ಮಾಡಲು ಶುರು ಮಾಡಿದ್ದಾರೆ. ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ತನಗೆ ಕಷ್ಟ ಇದೆ ಎಂದು ಹೇಳಿದ ಮಹಿಳೆ ಯುವಕನಿಂದ ಸುಮಾರು 3.5 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಸ್ವಲ್ಪ ದಿನಗಳ ಕಳೆದ ನಂತರ ಮದುವೆ ಪ್ರಸ್ತಾಪವನ್ನು ಸಹ ಆತನ ಮುಂದಿಟ್ಟಿದ್ದಾಳೆ.
ಮದುವೆ ಪ್ರಸ್ತಾಪವನ್ನು ಯುವಕ ಮುಂದಿಟ್ಟಾಗ, ಆ ಮಹಿಳೆ ತಾನು ಆಕೆಯ ದೊಡ್ಡಮ್ಮ ಎಂಬಂತೆ ನಟಿಸಿ ಹುಡುಗನ ಜೊತೆ ಮಾತನಾಡಿದ್ದಾಳೆ. "ಈ ಮದುವೆಯನ್ನು ನಾನೇ ಮಾಡ್ಬೇಕು. ಆಕೆಗೆ ತಂದೆ-ತಾಯಿ ಇಲ್ಲ" ಎಂದು ಹೇಳಿದ್ದಾಳೆ. ಇನ್ನು ಯುವಕನ ಮನೆಗೆ ಹೋಗಿ ಮದುವೆ ಮಾತುಕತೆಯನ್ನು ಸಹ ನಡೆಸಿದ್ದಾಳೆ. ಇನ್ನೇನು ಯುವಕನ ಮನೆಯವರು ಲಗ್ನಪತ್ರಿಕೆಯನ್ನು ಹಂಚಿ, ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳ 20ರಂದು ಕಲ್ಯಾಣ ಮಂಟಪವೊಂದರಲ್ಲಿ ಮದುವೆ ನಡೆಯುವುದಿತ್ತು.
ಆದರೆ ಮದುವೆ ಮನೆಯಲ್ಲಿ ಹೈಡ್ರಾಮ ನಡೆಸಿದ ಆಕೆ, "ನನಗೆ ಹುಷಾರಿಲ್ಲದಿದ್ದಾಗ ಯುವತಿಯನ್ನು ಆಕೆಯ ಮಾವ ಬಂದು ಎಳೆದುಕೊಂಡು ಹೋದ" ಎಂದು ಕಥೆ ಕಟ್ಟಿದ್ದಾಳೆ. ಒಂದೇ ಕಥೆಯಲ್ಲಿ ಲವ್ವರ್ ಆಗಿ, ದೊಡ್ಡಮ್ಮನಾಗಿ ಮಹಿಳೆ ನಾಟಕವಾಡುತ್ತಿದ್ದಾಳೆ ಎಂದು ಯುವಕನ ಮನೆಯವರಿಗೆ ಅನುಮಾನ ಬಂದಿದೆ. ಹೀಗಾಗಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವಿಚಾರಣೆ ನಡೆಸಿದಾಗ ನಡೆದಿದ್ದ ಘಟನೆಯನ್ನು ಇಂಚಿಂಚಾಗಿ ಬಿಚ್ಚಿಟ್ಟಾಳೆ. ಅಷ್ಟೇ ಅಲ್ಲದೆ, ಆಕೆಗೆ 50 ವರ್ಷ ವಯಸ್ಸಾಗಿತ್ತು ಎಂಬ ಶಾಕಿಂಗ್ ಸತ್ಯ ಯುವಕನಿಗೆ ಆ ಸಂದರ್ಭದಲ್ಲಿ ತಿಳಿದುಬಂದಿದೆ.
ಇದನ್ನು ಓದಿ: ವರದಕ್ಷಿಣೆ ಪಡೆದಿದ್ರಾ ದಕ್ಷಿಣ ಭಾರತದ ಈ ಖ್ಯಾತ ನಟ: ಅಳಿಯನ ಬಗ್ಗೆ ಮಾವ ಹೇಳಿದ್ದೇನು?
ಸದ್ಯ ಮಹಿಳೆಯಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು ಆಕೆಯನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.