Weight loss Diet: ತೂಕ ಇಳಿಸಿಕೊಳ್ಳಲು ಜನರು ಏನೆಲ್ಲಾ ಕಸರತ್ತು ಮಾಡುವುದನ್ನು ನೀವು ನೋಡಿರಬಹುದು. ಆದರೆ, ಜನರು ವ್ಯಾಯಾಮದ ಹೊರತಾಗಿ ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು ಆಗ ಮಾತ್ರ ಅವರು ತಮ್ಮ ನಿಗದಿತ ಉದ್ದೇಶವನ್ನು ಸಾಧಿಸಬಹುದು. ಕೇವಲ ವ್ಯಾಯಾಮ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ, ಇದಕ್ಕಾಗಿ ನೀವು ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಬೇಕು. ನೀವು ತಿನ್ನುವ ಆಹಾರ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಜನರು ಯಾವುದೇ ಯೋಚನೆ ಇಲ್ಲದೆ ಏನು ಬೇಕಾದರೂ ಸೇವಿಸುತ್ತಾರೆ, ಇದರಿಂದಾಗಿ ಅವರ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಹಾಗಾದರೆ ತೂಕ ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಏನೆಲ್ಲಾ ವಿಷಯಗಳನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ,
1. ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥಗಳಿಂದ ದೂರವಿರಿ
ಸಿಹಿತಿಂಡಿಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸದಿರಲು ಪ್ರಯತ್ನಿಸಿ. ಏಕೆಂದರೆ ಅದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು. ಸಕ್ಕರೆ ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ರಕ್ತದಲ್ಲಿನ ಸಕ್ಕರೆಯನ್ನು ಮಟ್ಟವನ್ನು ಕೂಡ ಹೆಚ್ಚಿಸುವ ಸಾಧ್ಯತೆಯಿದೆ.
2. ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ
ನಿಮ್ಮ ಆಹಾರದಲ್ಲಿ ನೀವು ಹಸಿರು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ಎಲ್ಲರಿಗೂ ತಿಳಿದಿದೆ, ಏಕೆಂದರೆ ಇದು ನಿಮ್ಮನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ ನಿಮ್ಮ ತೂಕವನ್ನು ಹೆಚ್ಚಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆಹಾರದಲ್ಲಿ ಪಾಲಕ್, ಕ್ಯಾರೆಟ್ ಮತ್ತು ಸೋರೆಕಾಯಿಯಂತಹ ತರಕಾರಿಗಳನ್ನು ಶಾಮೀಲುಗೊಳಿಸಿ.
3. ಆರೋಗ್ಯಕರ ಉಪಹಾರವನ್ನು ಹೊಂದಿರಿ
ಬೆಳಗ್ಗೆ ನೀವು ಸೇವಿಸುವ ತಿಂಡಿ ಆರೋಗ್ಯಕರವಾಗಿರಲಿ. ಹೀಗಾಗಿ ನೀವು ಉಪಹಾರದಲ್ಲಿ ಓಟ್ಸ್ ಅಥವಾ ಮೊಟ್ಟೆಗಳನ್ನು ಸಹ ಸೇರಿಸಿಕೊಳ್ಳಬಹುದು. ಇದರೊಂದಿಗೆ, ನೀವು ಬೆಳಗಿನ ಉಪಾಹಾರದಲ್ಲಿ ಹಣ್ಣು ಅಥವಾ ಜ್ಯೂಸ್ ಅನ್ನು ಸೇರಿಸಬೇಕು. ಇದು ನಿಮ್ಮನ್ನು ಮತ್ತಷ್ಟು ಫಿಟ್ ಆಗಿರಿಸುತ್ತದೆ.
ಇದನ್ನೂ ಓದಿ-Diabetes: ಮಾವಿನಿಂದ ಅಲ್ಲ, ಮಾವಿನ ಎಲೆಗಳಿಂದ ದೂರಾಗುತ್ತದೆ ಈ ಕಾಯಿಲೆ
4. ಫೈಬರ್ ಭರಿತ ಆಹಾರಗಳನ್ನು ಸೇವಿಸಿ
ಫೈಬರ್ ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಇದರಿಂದ ನಿಮ್ಮ ದೇಹವು ಅಗತ್ಯವಾದ ಜೀವಸತ್ವಗಳನ್ನು ಪಡೆಯುತ್ತದೆ. ಈ ಆಹಾರಗಳಲ್ಲಿ ಬಾದಾಮಿ, ಬ್ರೊಕೊಲಿ ಕೂಡ ಶಾಮೀಲಾಗಿವೆ. ಅಂದರೆ, ನೀವು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಈ ಎರಡೂ ವಿಷಯಗಳನ್ನು ಸೇರಿಸಿಕೊಳ್ಳಬಹುದು.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಥಿಕರಿಸುವುದಿಲ್ಲ)
ಇದನ್ನೂ ನೋಡಿ-