ಬೆಂಗಳೂರು: ಯುವತಿಯರೇ ಯಾರಾದ್ರೂ ನಿಮಗೆ ಪರಿಚಯವಾಗಿ ನಂತರ ಆತ್ಮೀಯವಾಗಿದ್ದಾರೆ ಎಂದ ಮಾತ್ರಕ್ಕೆ ಅವರು ಉತ್ತಮರು ಎಂದುಕೊಂಡಿದ್ದರೆ ನೀವು ಈಗಲೇ ಎಚ್ಚರವಾಗಿರಿ. ಯಾಕೆಂದ್ರೆ ಕಾಲೇಜು ಯುವತಿಯರ ಸ್ನೇಹ ಬೆಳೆಸಿ ಆಕೆ ಏನೂ ಮಾಡ್ತಾಳೆ, ಎಲ್ಲಿಗೆ ಹೋಗ್ತಾಳೆ, ಯಾರ ಜೊತೆ ಆತ್ಮೀಯವಾಗಿರ್ತಾಳೆ ಎಂಬ ಸೀಕ್ರೆಟ್​ಗಳನ್ನು ತಿಳಿದುಕೊಂಡು ಬ್ಲಾಕ್ ಮೇಲ್ ಮಾಡುವವರು ಇರುತ್ತಾರೆ. 


COMMERCIAL BREAK
SCROLL TO CONTINUE READING

ಇದೇ ರೀತಿ ಬೆದರಿಸಿ ಚಿನ್ನ, ಹಣ ವಸೂಲಿ ಮಾಡಿದ್ದ ಆರೋಪಿ ತೇಜಸ್ (19) ಎಂಬಾತನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್ ಮಾಡಲಾಗಿದೆ. 


ಇದನ್ನೂ ಓದಿ- ನೈಸ್ ರಸ್ತೆ ಬಳಿಯ ಕೆರೆಯಲ್ಲಿ ನಾಪತ್ತೆಯಾಗಿದ್ದ ಪ್ರೇಮಿಗಳ ಶವ ಪತ್ತೆ!


ಆಗಿದ್ದಿಷ್ಟು!
ಆರೋಪಿ ತೇಜಸ್ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ. ನೀನು ಸ್ನೇಹಿತನ ಜೊತೆಗಿರುವ ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇನೆ. ನೀನು ಲವ್ ಮಾಡ್ತಿದ್ದೀಯಾ. ನೀನು ಕಾಲೇಜಿಗೆ ಹೋಗದಂತೆ ಮಾಡುತ್ತೇನೆ. ಈ ವಿಷಯ ಯಾರ ಬಳಿಯೂ ಹೇಳಬಾರದು ಎಂದರೆ ಹಣ, ಚಿನ್ನ ನೀಡುವಂತೆ ಬೆದರಿಕೆ ಹಾಕಿದ್ದ. ಪದೇ ಪದೇ ಕಾಲೇಜು ಹಾಗೂ ಮನೆ ಬಳಿ ಬಂದು ಯುವತಿಯನ್ನು ಬೆದರಿಸಿದ್ದ. ಇದರಿಂದ ಏನೂ ಮಾಡಬೇಕು ಎಂದು ತೋಚದ ಯುವತಿ  ಮನೆಯಲ್ಲಿದ್ದ ಚಿನ್ನವನ್ನು ತಂದು ತೇಜಸ್​ಗೆ ಕೊಟ್ಟಿದ್ದಳು. ಹೀಗೆಯೇ ಹಂತಹಂತವಾಗಿ ಆರೋಪಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಯುವತಿಯಿಂದ ಪಡೆದುಕೊಂಡಿದ್ದ.


ಇದನ್ನೂ ಓದಿ- ಇಳಿ ವಯಸ್ಸಿನಲ್ಲಿ ಗಾರೆ ಕೆಲಸ, ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುವ ಛಲ..! ಸಹಾಯ ಮಾಡಲು ಬಂದು ವೃದ್ಧ ಕೂಡಿಟ್ಟಿದ್ದ ಹಣ ದೋಚಿದ ಖದೀಮರು


ಇನ್ನು ಮನೆಯಲ್ಲಿ ಚಿನ್ನಾಭರಣ ಇಲ್ಲದಿರುವುದು ಯುವತಿ ತಾಯಿ ಗೊತ್ತಾಗಿ ಮಗಳನ್ನು ವಿಚಾರಿಸಿದಾಗ ತೇಜಸ್ ವಿಚಾರನ್ನು ಹೇಳಿದ್ದಾಳೆ. ವಿಷಯ ತಿಳಿದ ಕೂಡಲೇ ಯುವತಿ ತಾಯಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.