Bengaluru Crime News: ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸ ಹಾಕಿಕೊಂಡಿದ್ದ ವ್ಯಕ್ತಿಯ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ‌ ನಡೆದಿದೆ. ಮೊಬೈಲ್ ಅಂಗಡಿಯೊಂದರ ಸ್ಪೀಕರ್ ನಲ್ಲಿ ಹಾಕಲಾಗಿದ್ದ ಹಾಡನ್ನ ನಿಲ್ಲಿಸದಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಪುಂಡರ ಗುಂಪು ಹಲ್ಲೆ ಮಾಡಿದ್ದಾರೆ.  


COMMERCIAL BREAK
SCROLL TO CONTINUE READING

ನಗರ್ತಪೇಟೆಯಲ್ಲಿ‌ ಕೃಷ್ಣ ಟೆಲಿಕಾಂ ಮಾಲೀಕರಾಗಿರುವ ಮುಖೇಶ್ ಹಲ್ಲೆಗೊಳಗಾಗಿದ್ದು, ಈತ ನೀಡಿದ ದೂರಿನ‌ ಮೇರೆಗೆ ಸುಲೇಮಾನ್, ಶನವಾಜ್, ರೋಹಿತ್, ದ್ಯಾನೀಶ್ ಹಾಗೂ ತರುಣ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 506, 504 , 149 , 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಿಸಲಾಗಿದೆ. 


ಇದನ್ನೂ ಓದಿ- ಗಡಿ ಜಿಲ್ಲೆಯಲ್ಲಿ ಅಕ್ರಮ ಕೊಡಗು ವೈನ್ ಮಾರಾಟ: 285 ಲೀ. ವೈನ್ ಜೊತೆ ವ್ಯಕ್ತಿ ಬಂಧನ


ಹಲ್ಲೆಗೊಳಗಾಗಿರುವ ಮುಖೇಶ್ ಕೆಲ ವರ್ಷಗಳಿಂದ ನಗರ್ತಪೇಟೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅಂಗಡಿ ಸಮೀಪದಲ್ಲೇ ಜುಮ್ಮ ಮಸೀದಿಯಿದ್ದು, ನಿನ್ನೆ ಸಂಜೆ 6.30 ಸುಮಾರಿಗೆ ಅಂಗಡಿಗೆ ಬಂದ ಯುವಕರು ಹನುಮಾನ್ ಚಾಲೀಸ ಬಂದ್ ಮಾಡು. ನಮಾಜ್ ಮಾಡಲು ತೊಂದರೆಯಾಗುತ್ತಿದೆ, ಕೂಡಲೇ ಸ್ಪಿಕರ್ ಆಫ್ ಮಾಡು ಎಂದು  ಒತ್ತಾಯಿಸಿದ್ದಾರೆ.  ಈ ವೇಳೆ ಅಂಗಡಿ ಮಾಲೀಕನಿಗೂ ಆರೋಪಿಗಳಿಗೂ ಕೆಲಕ್ಷಣ ಮಾತಿನ ಚಕಮಕಿ ನಡೆದಿದೆ. ನೋಡು ನೋಡುತ್ತಿದ್ದಂತೆ ಆರೋಪಿಗಳ ಗುಂಪಿನಲ್ಲಿದ್ದ ಓರ್ವ ಯುವಕ ಮುಖೇಶ್ ಮೇಲೆ‌ ಹಲ್ಲೆ ಮಾಡಿದ್ದಾನೆ. ಇದಕ್ಕೆ ಮುಖೇಶ್ ಸಹ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. 


ಈ ವೇಳೆ ಅಂಗಡಿಯಿಂದ ಹೊರಬಂದ ಮಾಲೀಕನ ಮೇಲೆ ಆರೋಪಿಗಳು ಮನಬಂದಂತೆ ಹಲ್ಲೆ‌ ನಡೆಸಿ ಚಾಕುವಿನಿಂದ ಚುಚ್ಚಿದ್ದಾರೆ‌. ಹಲ್ಲೆ ಮಾಡಿರುವ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ- ಚಿನ್ನ ಖರೀದಿಸಿ ಫೇಕ್ ಪೇಮೆಂಟ್ : ಆನ್‌ಲೈನ್‌ನಲ್ಲಿ ಕರಾಮತ್ತು ತೋರಿದ್ದ ಜೋಡಿ ಅಂದರ್


ಈ ಸಂಬಂಧ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿರುವ ಮುಕೇಶ್, ಸೌಂಡ್ ಯಾಕೆ ಜಾಸ್ತಿ ಮಾಡ್ತೀಯಾ ಎಂದು ಪ್ರಶ್ನಿಸಿ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.