ಬೆಂಗಳೂರು : ನಿನ್ನ ಗಂಡನಿಗೆ ಗಂಡಾಂತರ ಇದೆ.. 9 ದಿನದಲ್ಲೇ ಮರಣ ಹೊಂದುತ್ತಾನೆ.. ಪೂಜೆ ಮಾಡಿದ್ರೆ ಸರಿಯಾಗುತ್ತೆ ಎಂದು ಮಹಿಳೆಯೊಬ್ಬರಿಗೆ ಬೆದರಿಸಿ ಪೂಜೆ ನೆಪದಲ್ಲಿ 4 ಗ್ರಾಂ ಚಿನ್ನದ ಕಿವಿಯೋಲೆ ಎಗರಿಸಿರುವ ಘಟನೆ ಭಾನುವಾರ ಬೆಳಿಗ್ಗೆ ಕೊತ್ತನೂರಿನ ಜನತಾ ಕಾಲೋನಿಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಶಕುಂತಲಾ ಎಂಬ ಗೃಹಿಣಿಯ ಮನೆಗೆ ಬುಡುಬುಡಿಕೆಯವ ವೇಶದಲ್ಲಿ ಬಂದ ವಂಚಕನೊಬ್ಬ ಮೋಸ ಮಾಡಿ ಪರಾರಿಯಾಗಿದ್ದಾನೆ. 


ಇದನ್ನೂ ಓದಿ- ಸೂರ್ಯ, ರಮ್ಯಕೃಷ್ಣ ಸಿನಿಮಾ ನೋಡಿ ಸುಲಿಗೆ: ನಕಲಿ ಲೋಕಾಯುಕ್ತ ಅಧಿಕಾರಿ ಅಂದರ್


ನಿನ್ನ ಗಂಡನಿಗೆ ಗಂಡಾಂತರ ಇದೆ ಅಂತಾ ಪೂಜೆ ಮಾಡಿಸಿ ಚಿನ್ನ ಕದ್ದು ಎಸ್ಕೇಪ್..!
ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಕುಂತಲಾರ ಮನೆಗೆ ಬುಡುಬುಡಿಕೆಯವನ ಸೋಗಿನಲ್ಲಿ ಬಂದಿದ್ದ ಆರೋಪಿ, 'ನಿನ್ನ ಗಂಡನಿಗೆ ಗಂಡಾಂತರವಿದೆ, ಪೂಜೆ ಮಾಡದಿದ್ದರೆ ಇನ್ನು 9 ದಿನಗಳಲ್ಲಿ ಮರಣ ಹೊಂದುತ್ತಾನೆ' ಎಂದು ಹೆದರಿಸಿದ್ದ. ಇದದಿಂದ ಗಾಬರಿಯಾದ ಮಹಿಳೆ ಪರಿಹಾರ ಹೇಳಿ ಎಂದಾಗ ಬಳಿಕ ಒಂದು ಸಣ್ಣ ಮಡಿಕೆ ಕೊಟ್ಟು, ಅದಕ್ಕೆ ಅರಿಶಿನ‌ - ಕುಂಕುಮ, ಅಕ್ಕಿ ಹಾಕಿ ಕಿವಿಯೋಲೆ ಬಿಚ್ಚಿಡುವಂತೆ ತಿಳಿಸಿದ್ದ. ನಂತರ ಮಡಿಕೆ ಸುತ್ತಲೂ ದಾರ ಕಟ್ಟಿ 'ಪೂಜೆ ಮುಗಿದಿದೆ ನಿನ್ನ ಗಂಡ ಮನೆಗೆ ಬಂದ ಬಳಿಕ ತೆಗೆದು ನೋಡು' ಅಂತಾ ಹೇಳಿದ್ದ. ಸಂಜೆ 4 ಗಂಟೆ ಸುಮಾರಿಗೆ ಗಂಡ ಬಂದ ನಂತರ ಮಡಿಕೆ ತೆರೆದು ನೋಡಿದಾಗ ಚಿನ್ನದ ಕಿವಿಯೋಲೆಗಳು ಇಲ್ಲದಿರುವುದು ಗೊತ್ತಾಗಿದೆ. 


ಇದನ್ನೂ ಓದಿ- ಬಿಹಾರದಲ್ಲಿ ಲ್ಯಾಂಡ್‌ ಮಾಫಿಯಾ: ರಾತ್ರೋ ರಾತ್ರಿ ಮಾಯವಾಗಿಯೇ ಬಿಡ್ತು ಕೆರೆ...


ಘಟನೆ ಸಂಬಂಧಿಸಿದಂತೆ ಕೊತ್ತನೂರು ಠಾಣೆಗೆ ಶಕುಂತಲಾ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.