Bangalore: ಹೊಸ ವರ್ಷ ಆರಂಭಕ್ಕೂ ಮುನ್ನವೇ ಬೆಂಗಳೂರು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಅರ್ಪಾಟ್‌ಮೆಂಟ್ ಮೇಲಿನಿಂದ ಕೆಳಗೆ ಬಿದ್ದು ಟೆಕ್ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಪೂರ್ವದ ಕೆಆರ್ ಪುರ ಸಮೀಪದ ಭಟ್ಟರಹಳ್ಳಿಯ ಫ್ಲ್ಯಾಟ್‌ನಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು ಮೃತನನ್ನು ದಿವ್ಯಾಂಶು ಶರ್ಮಾ ಎಂದು ಗುರುತಿಸಲಾಗಿದೆ. 27 ವರ್ಷದ ಈತ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್‌ಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನವೇ ಸಾಫ್ಟ್‌ವೇರ್ ಇಂಜಿನಿಯರ್ ದಿವ್ಯಾಂಶು ಶರ್ಮಾ 33ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಅವರು ಸಿಗರೇಟ್ ಸೇದುತ್ತಿರುವ ಸಮಯದಲ್ಲಿ ಬೂದಿಯನ್ನು ಉದುರಿಸುವ ವೇಳೆ ಜಾರಿಬಿದ್ದ ಕಾರಣ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹೊಸ ವರ್ಷದ ಆಚರಣೆಗೂ ಮುಂಚೆಯೇ ಈ ಘಟನೆ ಸಂಭವಿಸಿದ್ದು ಜನರಲ್ಲಿ ಸುರಕ್ಷತೆಯನ್ನ ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರುತ್ತಿದೆ.
ಇದನ್ನೂ ಓದಿ: 'ಮಹಿಳೆಯನ್ನು ಗರ್ಭಿಣಿಯಾಗಿಸಿ, ಮಗುವಾದರೆ 13 ಲಕ್ಷ-ಇಲ್ದಿದ್ರೆ 5 ಲಕ್ಷ ಬಹುಮಾನ', ಬಿಹಾರದಲ್ಲೊಂದು ವಿಚಿತ್ರ ಆಫರ್!
ಉತ್ತರ ಪ್ರದೇಶ ಮೂಲದ ಶರ್ಮಾ ಅವರ ತಂದೆ ಭಾರತೀಯ ವಾಯುಪಡೆಯ ನಿವೃತ್ತ ಉದ್ಯೋಗಿಯಾಗಿದ್ದು, ಇತರ ಕುಟುಂಬ ಸದಸ್ಯರೊಂದಿಗೆ ಹೊರಮಾವುನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವ್ಯಾಂಶು ಮತ್ತು ಮೂವರು ಸ್ನೇಹಿತರು ಗುರುವಾರ ರಾತ್ರಿ ಮೋನಿಕಾ ಅವರ ಫ್ಲಾಟ್‌ಗೆ ಭೇಟಿ ನೀಡಿದ್ದರು. ಅಲ್ಲದೇ ಅವರೆಲ್ಲರೂ ಮೂವಿ ನೋಡಲು ವೈಟ್‌ಫೀಲ್ಡ್‌ನಲ್ಲಿರುವ ಮಾಲ್‌ಗೆ ಹೋಗಿದ್ದು ಚಿತ್ರವು ಈಗಾಗಲೇ ಪ್ರಾರಂಭವಾಗಿದ್ದರಿಂದ, ಅವರು ಪಬ್‌ಗೆ ತೆರಳಿದರು. ಅಲ್ಲಿಂದ ಅವರು 2.30 ರ ಸುಮಾರಿಗೆ ಮನೆಗೆ ಮರಳಿದರು. ಅವರ ಸ್ನೇಹಿತರು ಬೆಡ್‌ರೂಮ್‌ನಲ್ಲಿ ಮಲಗಿದ್ದಾಗ, ದಿವ್ಯಾಂಶು ಲಿವಿಂಗ್ ರೂಮಿನಲ್ಲಿ ಮಲಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ 10 ವರ್ಷದ ಬಾಲಕಿ ಶವವಾಗಿ ಪತ್ತೆ
ಬೆಳಿಗ್ಗೆ ಸುಮಾರು 7 ಗಂಟೆಗೆ ಇತರರು ಮಲಗಿದ್ದಾಗ ದಿವ್ಯಾಂಶು ಕೋಣೆಯಯನ್ನು ಸ್ವಚ್ಚಗೊಳಿಸಿ ನಂತರ ಅದರ ಬೂದಿ ಎಸೆಯಲು ಬಾಲ್ಕನಿಯ ಬಳಿ ಬಂದಾಗ ತಾಜಾ ಗಾಳಿಗೆ ಹ್ಯಾಂಗೊವರ್‌ನಿಂದಾಗಿ ಅವರು ತಮ್ಮ ಸಮತೋಲನ ಕಳೆದು ಕೊಂಡಿರಬಹುದು ಎಂದು ಊಹಿಸಲಾಗಿದ್ದು, ಇನ್ನೂ ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಈ ಘಟನೆಯು ಸುರಕ್ಷತೆಯ ಪ್ರಾಮುಖ್ಯತೆಯನ್ನ ಎತ್ತಿ ತೋರುತ್ತಿದೆ, ವಿಶೇಷವಾಗಿ ಸಂಭ್ರಮಾಚರಣೆಯ ಕ್ಷಣಗಳಲ್ಲಿ ಮತ್ತು ತಡರಾತ್ರಿಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಹಬ್ಬ ಹರಿದಿನಗಳಲ್ಲಾದರೂ ಜಾಗೃತೆ ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.