ಆಗಿದ್ದು ಲವ್ ಮ್ಯಾರೇಜ್; 2ನೇ ಹೆಂಡತಿ ಅಂತಾ ಗೊತ್ತಾಗಿ ಗೃಹಿಣಿ ಸೂಸೈಡ್!
ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು 2ನೇ ಪತ್ನಿ ಅಂತಾ ಗೊತ್ತಾಗಿ ನವವಧು ನೇಣಿಗೆ ಶರಣಾಗಿದ್ದಾಳೆ.
ಬೆಂಗಳೂರು: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು 2ನೇ ಪತ್ನಿ ಅಂತಾ ಗೊತ್ತಾಗಿ ನವವಧು ನೇಣಿಗೆ ಶರಣಾಗಿದ್ದಾಳೆ. ಮಾರತ್‌ಹಳ್ಳಿಯ ಕಾವೇರಿ ಲೇಔಟ್‍ನಲ್ಲಿ ಈ ಘಟನೆ ನಡೆದಿದ್ದು, ಗೌತಮಿ (24) ಮೃತ ದುರ್ದೈವಿಯಾಗಿದ್ದಾಳೆ. ಇದೇ ಮಂಗಳವಾರ ಘಟನೆ ನಡೆದಿದ್ದು, ರಾತ್ರಿ ಪತಿ ಪ್ರಸಾದ್ ರೆಡ್ಡಿ ಗಾಢ ನಿದ್ರೆಯಲ್ಲಿದ್ದಾಗ ಗೌತಮಿ ಕೋಣೆಯಲ್ಲಿದ್ದ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾರೆ.
ಬೆಳಗಿನ ಜಾವ ಪತಿ ಪ್ರಸಾದ್ ಅವರು ಗೌತಮಿ ಶವ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ನೋಡಿ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನೂ ಮಗಳು ಆತ್ಮಹತ್ಯೆ ಸಂಬಂಧ ಗೌತಮಿ ತಂದೆ ನೀಡಿದ ದೂರಿನನ್ವಯ ಮಾರತ್‌ಹಳ್ಳಿ ಠಾಣೆ ಪೊಲೀಸರು ಪತಿ ಪ್ರಸಾದ್ ಹಾಗೂ ಆತನ ಮೊದಲ ಪತ್ನಿ ಆಯಿಷಾ ಬಾನು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅನ್ಯಕೋಮಿನ ಹುಡುಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಗೆ ಪುಂಡರ ಕಿರಿಕ್
ಮೃತ ಗೌತಮಿ ಬಿಕಾಂ ಪದವೀಧರೆ. ಆಂಧ್ರಪ್ರದೇಶದ ಪುಂಗನೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದರು. ಈಕೆಗೆ ಹೇಗೋ ಪ್ರಸಾದ್ ಪರಿಚಯವಾಗಿ ಆತನ ಮೇಲೆ ಲವ್ ಆಗಿದೆ. ಪರಿಣಾಮ ಮನೆಯವರ ಮಾತು ಮೀರಿ ಪ್ರಸಾದ್ ಜೊತೆ ಓಡಿ ಬಂದಿದ್ದಳು. ಬಳಿಕ 2022ರ ಮಾರ್ಚ್ 19ರಂದು ಇಬ್ಬರೂ ಮದುವೆಯಾಗಿದ್ದರು. ಇತ್ತ ಮಗಳು ಓಡಿ ಹೋದ ವೇಳೆ ಗೌತಮಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಗೌತಮಿ ಪೊಲೀಸರ ಮುಂದೆ ಹಾಜರಾಗಿ ತಾನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು. ನಂತರ ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆದರೆ ಪ್ರಸಾದ್‌ಗೆ ಈ ಮುಂಚೆಯೇ ಮುದವೆಯಾಗಿದ್ದು, ಓರ್ವ ಮಗಳಿರುವ ವಿಷಯ ಗೌತಮಿಗೆ ಗೊತ್ತಾಗಿದೆ.
ಮಂಗಳವಾರ ತಂದೆ ಬಾಬುಗೆ ಕರೆ ಮಾಡಿದ್ದ ಗೌತಮಿ, ಪ್ರಸಾದ್ ಮೊದಲ ಪತ್ನಿ ಬಾನು ಮನೆಗೆ ಬಂದಿದ್ದಾಳೆ. ನೀನು ಏಕೆ ನಮ್ಮ ಮನೆಗೆ ಬರುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಪ್ರಸಾದ್ ಹಾಗೂ ಬಾನು ಸೇರಿ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ ಕಿರುಕುಳ ನೀಡಿದ್ದಾರೆ ಅಂತಾ ಗೌತಮಿ ಹೇಳಿಕೊಂಡಿರುವುದಾಗಿ ಬಾಬು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು
ಸದ್ಯ ಪೊಲೀಸರು ಗೌತಮಿ ಪತಿ ಪ್ರಸಾದ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಬಾಳಿ ಬದುಕಬೇಕಿದ್ದ ಗೌತಮಿ ಈ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಂಡು ಸಾವಿನ ಮನೆ ಸೇರಿರುವುದು ದುರಂತವೇ ಸರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.