ಅನ್ಯಕೋಮಿನ ಹುಡುಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಗೆ ಪುಂಡರ ಕಿರಿಕ್

 ಸೆಪ್ಟೆಂಬರ್  25ರ ಮಧ್ಯಾಹ್ನ  1:30 ಸಮಯದಲ್ಲಿ ಬೈಕ್ ನಲ್ಲಿ ಹುಡುಗ ಹುಡುಗಿ ಜೊತೆಯಲ್ಲಿ ತೆರಳುತ್ತಿದ್ದರು. ಇದೇ ವೇಳೆ ನಗರದ ಇಸ್ಲಾಂಪುರ‌ ನಿವಾಸಿ ಹುಜೂರು ಮತ್ತು ತಂಡದವರು ಈ ಜೋದುಯನ್ನು ತಡೆದು ನಿಲ್ಲಿಸಿ ಪುಂಡಾಟ ಮಾಡಿದ್ದಾರೆ. 

Written by - Zee Kannada News Desk | Last Updated : Sep 29, 2022, 04:50 PM IST
  • ಯುವಕ ಯುವತಿಯನ್ನು ತಡೆದು ನಿಲ್ಲಿಸಿದ ಯುವಕರ ಗುಂಪು
  • ಮನೆಯವರ ನಂಬರ್ ನೀಡುವಂತೆ ಯುವತಿಗೆ ಕಿರಿಕ್
  • ಯುವತಿ ಮೇಲೆ ಹಲ್ಲೆ ನಡೆಸಿರುವ್ ಆರೋಪ
 ಅನ್ಯಕೋಮಿನ ಹುಡುಗನೊಂದಿಗೆ  ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಗೆ ಪುಂಡರ ಕಿರಿಕ್ title=

ದೊಡ್ಡಬಳ್ಳಾಪುರ :  ಹಿಂದೂ ಯುವಕನ ಜತೆ ಅನ್ಯಕೋಮಿನ ಯುವತಿ ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ನೈತಿಕ ಪೊಲೀಸ್​ಗಿರಿ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಪ್ರಕರಣ ನಡೆದಿದೆ.

ಸೆಪ್ಟೆಂಬರ್  25ರ ಮಧ್ಯಾಹ್ನ  1:30 ಸಮಯದಲ್ಲಿ ಬೈಕ್ ನಲ್ಲಿ ಹುಡುಗ ಹುಡುಗಿ ಜೊತೆಯಲ್ಲಿ ತೆರಳುತ್ತಿದ್ದರು. ಇದೇ ವೇಳೆ ನಗರದ ಇಸ್ಲಾಂಪುರ‌ ನಿವಾಸಿ ಹುಜೂರು ಮತ್ತು ತಂಡದವರು ಈ ಜೋದುಯನ್ನು ತಡೆದು ನಿಲ್ಲಿಸಿ ಪುಂಡಾಟ ಮಾಡಿದ್ದಾರೆ.  ಮನೆಯವರ ಫೋನ್ ನಂಬರ್ ನೀಡುವಂತೆ ಯುವತಿಯನ್ನು ಒತ್ತಾಯಿಸಿದ್ದಾರೆ. ದೊಡ್ಡಬಳ್ಳಾಪುರದ  ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಣರಮಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಘಟನೆ ನಡೆದಿದೆ. 

ಇದನ್ನೂ ಓದಿ : ʼಭಾರತ್ ಜೋಡೋ ಮಾಡಿದ್ಯಾರು, ತೋಡೋ ಮಾಡಿದ್ಯಾರು ಎಂದು ತಿಳಿದಿದೆʼ

 ಆದರೆ ಯುವತಿ ಈ ಯುವಕರ ಗುಂಪಿನ ವರ್ತನೆಯನ್ನು ವಿರೋಧಿಸಿದ್ದಾಳೆ. ಮೊಬೈಲ್​ ನಂಬರ್​ ಯಾಕೆ ಕೊಡಬೇಕು ಎಂದು ಯುವತಿ ಪ್ರಶ್ನೆ ಮಾಡಿದ್ದಾಳೆ.ಯುವತಿ ಈ ಪ್ರಶ್ನೆ ಮಾಡಿರುವುದರಿಂದ ಕುಪಿತಗೊಂಡ ಯುವಕ ಗುಂಪು, ಯುವತಿ ಮೇಲೆ ಹಲ್ಲೆ, ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ.  ಅಲ್ಲದೆ,  ಯುವಕರು ಮಾಡಿರುವಂತಹ ದಬ್ಬಾಳಿಕೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಟೌನ್​ ಠಾಣೆಯಲ್ಲಿ ದೂರು ದಾಖಲಾಗಿದೆ..

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಭರ್ಜರಿ ತಯಾರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News