ಥಾಣೆ(ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಮನಸ್ಥಾಪಗಳು ಮೂಡಿ, ಅಂತಹ ಕಲಹಗಳು ತಾರಕಕ್ಕೇರಿರುವ ಪ್ರಕರಣಗಳು ಕಂಡುಬರುತ್ತಿದೆ. ಇನ್ನೂ ಕೆಲವೆಡೆ ಪ್ರಕರಣಗಳು ಕೊಲೆಯಲ್ಲಿ ಅಂತ್ಯವಾಗಿರುವುದೂ ಉಂಟು. ಇಂತಹದ್ದೇ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆಯ ಭಾಯಂದರ್ ಟೌನ್​ಶಿಪ್​ನಲ್ಲಿ ನಡೆದಿದ್ದು, ಬೆಳಗಿನ ಉಪಹಾರದಲ್ಲಿ  ಉಪ್ಪು ಹೆಚ್ಚಾಗಿದೆ ಎಂದು ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಊಬರ್ ಕ್ಯಾಬ್ ಬುಕ್ ಮಾಡಿ ಖತರ್ನಾಕ್ ಗ್ಯಾಂಗ್ ಮಾಡಿದ್ದೇನು ಗೊತ್ತಾ..!?


ಆಶ್ಚರ್ಯವಾದರೂ ಇದು ಸತ್ಯ. ನಿಲೇಶ್ ಘಾಘ್ (46) ಎಂಬಾತ ಪತ್ನಿಯನ್ನು ಕೊಲೆ ಮಾಡಿದ ವ್ಯಕ್ತಿ. 40 ವರ್ಷದ ಪತ್ನಿ ನಿರ್ಮಲಾ ಕೊಲೆಯಾದ ಮಹಿಳೆ. ಇಂದು ಬೆಳಗ್ಗೆ ಉಪಹಾರಕ್ಕಾಗಿ ನಿರ್ಮಲಾ ಖಿಚಡಿಯನ್ನು ತಯಾರಿಸಿದ್ದಳು. ಆದರೆ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿದೆ ಎಂದು ಗಂಡ ಹೆಂಡತಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡಿರುವ ನಿಲೇಶ್‌, ಪತ್ನಿ ನಿರ್ಮಲಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 


ನಿಲೇಶ್ ಘಾಘ್ ಮತ್ತು ನಿರ್ಮಲಾ ಥಾಣೆಯ ಭಾಯಂದರ್ ಟೌನ್​ಶಿಪ್​ನಲ್ಲಿ ವಾಸವಾಗಿದ್ದರು. ಸದ್ಯ ಪೊಲೀಸರು ಈಗಾಗಲೇ ಆರೋಪಿಯನ್ನ ಬಂಧಿಸಿದ್ದಾರೆ ಎಂದು ಅಲ್ಲಿನ ಕಮಿಷನರೇಟ್​​ ತಿಳಿಸಿದೆ. ಸದ್ಯ ಮಹಿಳೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಐಪಿಸಿ ಸೆಕ್ಷನ್ 302 ಅಡಿ ದೂರು ದಾಖಲಾಗಿದೆ. 


ಇದನ್ನು ಓದಿ: ಮಳೆಹಾನಿ ಆದ ಪ್ರದೇಶಗಳ ಮನೆಗಳಿಗೆ ಬಿಬಿಎಂಪಿ ಪರಿಹಾರ- ತಾತ್ಕಾಲಿಕ ಕಂಟ್ರೋಲ್ ರೂಂಗಳ ರಚನೆ


ಕಳೆದ ದಿನವಷ್ಟೇ ಚಹಾದ ಜೊತೆಗೆ ಉಪಹಾರ ನೀಡಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ವ್ಯಕ್ತಿಯೋರ್ವ ತನ್ನ ಸೊಸೆಯನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಮಹಾರಾಷ್ಟ್ರ ರಾಬೋಡಿಯಲ್ಲಿ ನಡೆದಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.