ಬೆಂಗಳೂರು: ಊಬರ್ ಕ್ಯಾಬ್ ಬುಕ್ ಮಾಡಿ ಚಾಲಕನನ್ನ ಕರೆಸಿಕೊಂಡು ಬಳಿಕ ಆತನನ್ನೇ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೃತಿಕ್ ಗೌಡ (20), ನಿತಿನ್ ಗೌಡ (21), ಸುಮಂತ್ (20) ಹಾಗೂ ದರ್ಶನ್ (20) ಬಂಧಿತರು. ಆರೋಪಿಗಳು ಐಶಾರಾಮಿ ಜೀವನ ನಡೆಸಲು ಇಂತಹ ಕೃತ್ಯಗಳನ್ನೇ ಮಾಡುತ್ತಿದ್ದರಂತೆ.
ಇದನ್ನು ಓದಿ: HD Kumaraswamy : ಈಶ್ವರಪ್ಪ ಪರ ಹೆಚ್‌ಡಿಕೆ ಬ್ಯಾಟಿಂಗ್!
ಏನಿದು ಘಟನೆ:
ಏಪ್ರಿಲ್ 1ರ ರಾತ್ರಿ 9:30ರ ಸುಮಾರಿಗೆ ಕಿಶನ್ ಎಂಬ ಹೆಸರಿನಿಂದ ಆರೋಪಿಗಳು ಸಂಪಿಗೆಹಳ್ಳಿಯ ಶಿವರಾಮಕಾರಂತ ನಗರ ಕ್ಲಬ್ ಬಳಿ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಚಾಲಕ ಅರುಳ್ ಚಂದ್ರನ್‌ನನ್ನ ಬೆದರಿಸಿ ಕ್ಯಾಬ್ ಕೀ ಕಿತ್ತುಕೊಂಡಿದ್ದರು. ಬಳಿಕ ಅದೇ ಕ್ಯಾಬ್‌ನಲ್ಲಿ ಚಾಲಕನನ್ನ ಕರೆದೊಯ್ದು ಆತನ ಬಳಿಯಿದ್ದ 800 ರೂ. ನಗದು, ಎಟಿಎಂನಿಂದ 200 ರೂ. ಬಲವಂತವಾಗಿ ವಿತ್ ಡ್ರಾ ಮಾಡಿಸಿಕೊಂಡು ಬಳಿಕ ಥಣಿಸಂದ್ರದ ಬಳಿ ನಿರ್ಜನ ಪ್ರದೇಶದಲ್ಲಿ ಆತನನ್ನ ಬಿಟ್ಟು ಕಾರು ಸಮೇತ ಪರಾರಿಯಾಗಿದ್ದರು.
ಚಾಲಕ ಅರುಳ್ ನೀಡಿದ್ದ ದೂರಿನನ್ವಯ ಕಾರ್ಯಪ್ರವೃತ್ತರಾದ ಸಂಪಿಗೆಹಳ್ಳಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, 5 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಡಿಜೈರ್ ಕಾರು, ಒಂದು ಬೈಕ್, ಒಂದು ಮೊಬೈಲ್ ಹಾಗೂ 18 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಬೆಳ್ಳಂದೂರು, ಹನುಮಂತ ನಗರ, ಹಾಸನದ ಕೊಣನೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳಿದ್ದು, ಸಂಪಿಗೆಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನು ಓದಿ: DKS: "ಆ ಮಹಾನಾಯಕರನ್ನು ತೋರಿಸಲಿ, ಯಾರು ಬೇಡ ಎಂದಿದ್ದಾರೆ?"
ಆರೋಪಿಗಳು ಊಬರ್ ಚಾಲಕರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.