ಬೆಂಗಳೂರು: ಹುಡುಗಿ ಹಿಂದೆ ಬಿದ್ದು ಅದೇ ಹುಡುಗಿ ನೀಡಿದ್ದ ದೂರಿನ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಹೋರ ಬಂದ ಪಾಗಲ್ ಪ್ರೇಮಿಯೊಬ್ಬ ಮತ್ತೆ ಅವಳೇ ಬೇಕು ಅಂತಾ ಹಿಂದೆ  ಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ‌.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜಧಾನಿಯಲ್ಲಿ10 ಲಕ್ಷಕ್ಕೂ ಅಧಿಕ ಡಿಜಿಟಲ್‌ ಮೀಟರ್‌ ಅಳವಡಿಕೆ : ಗ್ರಾಹಕರಿಗೆ ತಪ್ಪದ ಹೆಚ್ವಿನ ಹೊರೆ


ಮಾರಿಯಾಪ್ಪನ್ ಯುವತಿ ಹಿಂದೆ ಬಿದ್ದಿರುವ ಅಸಾಮಿ. ಪ್ರತಿಷ್ಠಿತ ಇಸ್ರೋದಲ್ಲಿ ಉತ್ತರ ಭಾರತ ಮೂಲದ ಯುವತಿ ಕೆಲ ವರ್ಷಗಳಿಂದ ಕೆಲಸ‌ ಮಾಡುತ್ತಿದ್ದಳು. ಹೀಗಿರಬೇಕಾದರೆ ಕಳೆದ ವರ್ಷ ಮಾರಿಯಪ್ಪನ್ ಎಂಬಾತನ  ಪರಿಚಯವಾಗಿತ್ತು‌. ಕೆಲ ದಿನಗಳ ನಂತರ ರೋಜ್ ಕೊಟ್ಟು ಲವ್ ಮಾಡು ಅಂತಾ ಮಾರಿಯಪ್ಪನ್ ಪ್ರಪೋಸ್ ಮಾಡಿದ್ದ. ಆದರೆ ಪ್ರೀತಿ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡಲು‌ ಆರಂಭಿಸಿದ್ದ‌‌.‌ ಈ ಸಂಬಂಧ‌ ಯುವತಿ ನೀಡಿದ್ದ ದೂರಿನ ಮೇರೆಗೆ ‌ಪೊಲೀಸರು ಬಂಧಿಸಿದ್ದರು.


ಇದನ್ನೂ ಓದಿ:ಪರಿಸರ ಸ್ನೇಹಿ ವೇದಿಕೆ ಪರಿಕಲ್ಪನೆ; ವಿಲೇವಾರಿ ಮಾಡಬಹುದಾದ ರೂ.14 ಲಕ್ಷ ಮೊತ್ತದ ಪ್ಲಾಸ್ಟಿಕ್ ವಸ್ತುಗಳ ಬಳಕೆ


ಇದರಿಂದ ಬುದ್ದಿ ಕಲಿಯದ ಮಾರಿಯಪ್ಪನ್ ಜೈಲಿಂದ ಹೊರಬಂದು ಐ ಲವ್ ಯು, ಮ್ಯಾರಿ ಮಿ ಎಂದು ಮತ್ತೆ  ಒತ್ತಾಯಿಸಿದ್ದಾನೆ.‌ ಅಲ್ಲದೆ, ಕೆಲಸದಿಂದ ಬರುವಾಗ ಯುವತಿ ಸ್ಕೂಟಿ ಅಡ್ಡಗಟ್ಟಿ ಲವ್ ಮಾಡು ಅಂತಾ ಪೀಡಿಸಿದ್ದಾನೆ.ಒಪ್ಪದಿದ್ದಾಗ ಸ್ಕೂಟಿಯನ್ನು ಎಳೆದಾಡಿ ಆಕೆ ಹಿಂದೆ ದುಂಬಾಲು ಬಿದ್ದಿದ್ದಾನೆ.‌ ಇದರಿಂದ ನೊಂದ ಯುವತಿ ಮಾನಸಿಕ‌ ಕಿರುಕುಳ‌ ನೀಡುತ್ತಿರುವುದಾಗಿ ಆರೋಪಿಸಿ ಮತ್ತೆ ಜೀವನ್ ಭೀಮಾನಗರ ಪ್ರಕರಣ ದಾಖಲಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.