ICSE 10ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ.. Result ನೋಡಲು ಹೀಗೆ ಮಾಡಿ
ICSE 10th Results TODAY: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) 10 ನೇ ತರಗತಿಯ ಫಲಿತಾಂಶವನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಲಿದೆ.
ICSE 10th Results TODAY: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) 10 ನೇ ತರಗತಿಯ ಫಲಿತಾಂಶವನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಲಿದೆ. ICSE 10ನೇ ತರಗತಿಯ ಫಲಿತಾಂಶಗಳನ್ನು cisce.org, results.cisce.org ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ: ಇಂದು ನೀಟ್ ಪರೀಕ್ಷೆ: ಕೇಂದ್ರಕ್ಕೆ ತೆರಳುವ ಮುನ್ನ ಈ ನಿಯಮ ಪಾಲಿಸಿ
ಐಸಿಎಸ್ಇ 10ನೇ ತರಗತಿಯ ಫಲಿತಾಂಶ ಇಂದು, ಜುಲೈ 17 ಭಾನುವಾರದಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಐಸಿಎಸ್ಇ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಈ ಬಗ್ಗೆ ಶನಿವಾರ ಮಾಹಿತಿ ನೀಡಿದ್ದಾರೆ. ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳನ್ನು ಜುಲೈ 17 ರಂದು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಂತಿಮ ಅಂಕಗಳ ನೀಡಿಕೆಯಲ್ಲಿ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಅಂಕಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಸೆಮಿಸ್ಟರ್ 1 ಅಥವಾ ಸೆಮಿಸ್ಟರ್ 2 ಪರೀಕ್ಷೆಗಳಿಗೆ ಹಾಜರಾಗದ ಅಭ್ಯರ್ಥಿಗಳನ್ನು ಗೈರುಹಾಜರೆಂದು ಗುರುತಿಸಲಾಗುತ್ತದೆ. ಅವರ ಫಲಿತಾಂಶಗಳನ್ನು ಪ್ರಕಟಿಸಲಾಗುವುದಿಲ್ಲ ಎಂದು ಗೆರ್ರಿ ಅರಾಥೂನ್ ಮಾಹಿತಿ ನೀಡಿದ್ದಾರೆ.
ಐಎಸ್‌ಸಿಇ (ICSE) 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 25 ರಿಂದ ಮೇ 23, ರವರೆಗೆ ನಡೆಸಲಾಗಿತ್ತು. ಐಎಸ್‌ಸಿ (ISC) 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ಜೂನ್ 13, 2022 ರವರೆಗೆ ನಡೆದಿದ್ದವು.
Result ನೋಡಲು ಹೀಗೆ ಮಾಡಿ:
www.cisce.org ನಲ್ಲಿ CISCE ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಮುಖಪುಟದಲ್ಲಿ, ಲಿಂಕ್ ಅನ್ನು ಕ್ಲಿಕ್ ಮಾಡಿ - ISC ತರಗತಿ 12 ಫಲಿತಾಂಶ ಅಥವಾ ICSE ತರಗತಿ 10 ಫಲಿತಾಂಶ 2022
ವಿಶಿಷ್ಟ ಗುರುತಿನ ಸಂಖ್ಯೆ, ಹುಟ್ಟಿದ ದಿನಾಂಕದಂತಹ ಲಾಗಿನ್ ರುಜುವಾತುಗಳನ್ನು ನಮೂದಿಸಿ
Submit ಕ್ಲಿಕ್ ಮಾಡಿ, ನಿಮ್ಮ ICSE ಕ್ಲಾಸ್ 10 ಮತ್ತು ISC ಕ್ಲಾಸ್ 12 ಮಾರ್ಕ್‌ಶೀಟ್ ಪರದೆಯ ಮೇಲೆ ಬರುತ್ತದೆ
ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಇದನ್ನೂ ಓದಿ: Social Mediaದಲ್ಲಿ ʻಹಿಂದೂ ವಿರೋಧಿʼ ಅಭಿಯಾನ.. ಆಘಾತಕಾರಿ ಸಂಗತಿ ಬಯಲು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.