Illegal Liquor Destroyed: ಕಲ್ಪತರು ನಾಡು ತುಮಕೂರು ಜಿಲ್ಲೆಯ ಗಡಿಭಾಗದ ತಾಲೂಕು ಪಾವಗಡದಲ್ಲಿ ಅಬಕಾರಿ ಇಲಾಖೆ, ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಅಕ್ರಮ ಮದ್ಯ ದಾಸ್ತಾನನ್ನು ನಾಶ ಪಡಿಸಲಾಯಿತು. 


COMMERCIAL BREAK
SCROLL TO CONTINUE READING

ಅಕ್ರಮ ಮದ್ಯ ಸಾಗಾಣಿಕೆ,  ಶೇಖರಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಮದ್ಯದ ದಾಸ್ತಾನನ್ನು ಪಾವಗಡ ಪಟ್ಟಣದ ಹೊರ ವಲಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಾಶ ಪಡಿಸಿದರು. 


ಇದನ್ನೂ ಓದಿ- ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ


ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮಾರಾಟಕ್ಕೆ ಮುಂದಾಗಿದ್ದ ಒಟ್ಟು 812 ಲೀಟರ್ ನಷ್ಟು ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ನಾಶಪಡಿಸಿದರು. ಅದರಲ್ಲಿ  711 ಲೀ ಮದ್ಯ, 54 ಲೀ ಬಿಯರ್, 16 ಲೀ ಸೇಂದಿ, 5 ಲೀಟರ್ ಕಳ್ಳಭಟ್ಟಿ, 23 ಲೀಟರ್ ಬೆಲ್ಲದ ಕೊಳೆ ಸೇರಿದಂತೆ ಒಟ್ಟು 812 ಲೀ ನಷ್ಟು ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು  ನಾಶಪಡಿಸಲಾಯಿತು. 


ಇದನ್ನೂ ಓದಿ- ಹೆಂಡತಿಗೆ ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಭೂಪ!


ಈ ವೇಳೆ  ಮಧುಗಿರಿ ಅಬಕಾರಿ ಉಪ ಅಧೀಕ್ಷಕರು ವಿ ಚಂದ್ರಪ್ಪ ಮಾತನಾಡಿ  ಸುಮಾರು 810 ಲೀಟರ್ ನಷ್ಟು ರಷ್ಟು ಅಕ್ರಮ ಮದ್ಯ ಸಂಗ್ರಹಿಸಿದ್ದನ್ನ ನಮ್ಮ ಪಾವಗಡ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದರು. ಸರ್ಕಾರದ ಆದೇಶದಂತೆ ಇಂದು ಇವುಗಳನ್ನು ನಾಶಪಡಿಸಲಾಗಿದೆ ಎಂದರು. ಈ ವೇಳೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಸಹ ಮದ್ಯ ನಾಶಕ್ಕೆ ಸಾಥ್ ನೀಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ