ಭೀಕರ ರಸ್ತೆ ಅಪಘಾತ: ಓರ್ವನ ಮೃತ್ಯು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೂರು ಮಂದಿ

Road Accident: ಈ ಘನಘೋರ ಅಪಘಾತಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ನಗರದ ದಾಸರಹಳ್ಳಿಯ ಹೆಸರಘಟ್ಟ ಮುಖ್ಯ ರಸ್ತೆ 8 ನೇ ಮೈಲಿ ಜಂಕ್ಷನ್. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ 22 ವರ್ಷದ ಪ್ರಕ್ಯಾತ್ ಚಿನ್ನಪ್ಪ ಸ್ಥಳದಲ್ಲೆ ಸಾವನ್ನಪ್ಪಿದ್ದು, ಈತನ ಸ್ನೇಹಿತರಾದ ನಟರಾಜ್, ಬಸವಗೌಡ, ರಿಕ್ಕಿತ್ ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Written by - Yashaswini V | Last Updated : Jun 19, 2023, 03:22 PM IST
  • ಕಣ್ಣು ಮುಚ್ಚಿ ಕಣ್ಣು ತೆರೆಯೋದರೊಳಗೆ ವೇಗವಾಗಿ ಬಂದ ಒಂದು ಹೊಂಡಾ ಸಿಟಿ ಕಾರ್ ಒಂದು ಬೈಕ್, ಎರಡು ಕಾರ್‌ಗಳಿಗೆ ಗುದ್ದಿದೆ.
  • ಕಾರು ಗುದ್ದಿದ ರಭಸಕ್ಕೆ ಬೀದಿ ಬದಿಯ ಲೈಟ್ ಕಂಬ ಕೂಡ ಹಾನಿಯಾಗುತ್ತೆ.
  • ಮಾರಾಟಕ್ಕೆಂದು ಅಂಗಡಿ ಮುಂದೆ ಇರಿಸಿದ್ದ ಫರ್ನಿಚರ್‌ಗಳು ನುಚ್ಚು ನೂರಾಗಿವೆ.
ಭೀಕರ ರಸ್ತೆ ಅಪಘಾತ: ಓರ್ವನ ಮೃತ್ಯು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೂರು ಮಂದಿ  title=

Terrible Road Accident: ಅವರೆಲ್ಲ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ಬಗ್ಗೆ ಅವರ ಅಪ್ಪ, ಅಮ್ಮ ನೂರಾರು ಆಸೆ ಕಟ್ಟಿಕೊಂಡಿದ್ರು, ಆದರೆ ಕಾಲೇಜು ಕಲಿಯೋದು ಬಿಟ್ಟು ಮೋಜು, ಮಸ್ತಿ ಅಂತ ತಡರಾತ್ರಿ ಕುಡಿದ ಮತ್ತಲ್ಲಿ ಎರ್ರಾಬಿರ್ರಿ ಕಾರ್‌ ಓಡಿಸಿಕೊಂಡು ಬಂದು ನಿಂತಿದ್ದ ಕಾರು ಬೈಕ್‌ಗೆ ಗುದ್ದಿ ಒಬ್ಬಾತ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ರೆ, 3 ಜನ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಾ ಇದ್ದಾರೆ.

ಹೌದು, ಕಣ್ಣು ಮುಚ್ಚಿ ಕಣ್ಣು ತೆರೆಯೋದರೊಳಗೆ ವೇಗವಾಗಿ ಬಂದ ಒಂದು ಹೊಂಡಾ ಸಿಟಿ ಕಾರ್ ಒಂದು ಬೈಕ್, ಎರಡು ಕಾರ್‌ಗಳಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಬೀದಿ ಬದಿಯ ಲೈಟ್ ಕಂಬ ಕೂಡ ಹಾನಿಯಾಗುತ್ತೆ. ಮಾರಾಟಕ್ಕೆಂದು ಅಂಗಡಿ ಮುಂದೆ ಇರಿಸಿದ್ದ ಫರ್ನಿಚರ್‌ಗಳು ನುಚ್ಚು ನೂರಾಗಿವೆ. ಈ  ಭೀಕರ ಅಪಘಾತದ ನಡುವೆ ಬದುಕಿದೆಯಾ ಬಡ ಜೀವ ಅಂತ ಶ್ವಾನ ಒಂದು ತಪ್ಪಿಸಿಕೊಂಡು ಓಡುತ್ತೆ, ಅಯ್ಯಯ್ಯೋ ಇದೇನಾಯ್ತಪ್ಪ ಅಂತ ಸ್ಥಳೀಯರು ಬಂದು ನೋಡುವಷ್ಟರಲ್ಲಿ ಓರ್ವನ ಪ್ರಾಣಪಕ್ಷಿ ಹಾರಿ ಹೋಗಿದ್ರೆ ಮೂರು ಜನ ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ನರಳುತ್ತಿದ್ದರು. 

ಇದನ್ನೂ ಓದಿ- ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ

ಈ ಘನಘೋರ ಅಪಘಾತಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ನಗರದ ದಾಸರಹಳ್ಳಿಯ ಹೆಸರಘಟ್ಟ ಮುಖ್ಯ ರಸ್ತೆ 8 ನೇ ಮೈಲಿ ಜಂಕ್ಷನ್. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ 22 ವರ್ಷದ ಪ್ರಕ್ಯಾತ್ ಚಿನ್ನಪ್ಪ ಸ್ಥಳದಲ್ಲೆ ಸಾವನ್ನಪ್ಪಿದ್ದು, ಈತನ ಸ್ನೇಹಿತರಾದ ನಟರಾಜ್, ಬಸವಗೌಡ, ರಿಕ್ಕಿತ್ ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಪ್ರಕ್ಯಾತ್ ಮೂಲತಃ ಕೊಡುಗು ಜಿಲ್ಲೆಯವನಾಗಿದ್ದು ಪ್ರತಿಷ್ಠಿತ ಆಚಾರ್ಯ ಕಾಲೇಜ್‌ನಲ್ಲಿ ಬಿಜನೆಸ್ ಮ್ಯಾನೆಜ್‌ಮೆಂಟ್‌ ಓದುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ಗಾಯಾಳುಗಳು ಪ್ರಕ್ಯಾತ್‌ನ ಸ್ನೇಹಿತರಾಗಿದ್ದು, ಬೆಂಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿಕೇಂಡ್ ಹಿನ್ನಲೆ ನಿನ್ನೆ ಸ್ನೇಹಿತರೆಲ್ಲ ಸೇರಿ ತಡರಾತ್ರಿ ವರೆಗೂ ಪಾರ್ಟಿ ಮಾಡಿದ್ರು ಎನ್ನಲಾಗುತ್ತಿದೆ. ಪಾರ್ಟಿ ಮುಗಿದ ಬಳಿಕ ಸ್ನೇಹಿತರನ್ನ ಡ್ರಾಪ್ ಮಾಡಲು ಖಾಲಿ ರಸ್ತೆಯಲ್ಲಿ ಜೋರಾಗಿ ಕಾರು ಚಲಾಯಿಸುತ್ತ ಡಿಜೆ ಹಾಕಿಕೊಂಡು ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದಿದ್ದೆ ಅಪಘಾತಕ್ಕೆ ಕಾರಣ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ- ಚಾಕೊಲೆಟ್ ಗೆ ಹಣ ನೀಡಿಲ್ಲವೆಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ ಬಾಲಕಿಯರು: ಪೋಷಕರ ಪರದಾಟ.!

ಈ ದುರ್ಘಟನೆಯಿಂದ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ರೆ ಇನ್ನುಳಿದ ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News