ಧಾರವಾಡ: ಜೂನ್ 14 ರಂದು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಿಂದ ಶಿಂಗನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮಾರುತಿ ಗಂಗಪ್ಪ ಕಿಳ್ಳಿಕ್ಯಾತರಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ 5.5 ಅಡಿ ಯಿಂದ 8 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಹೊಸ ಪೋಲಿಯೋ ವೈರಸ್ ಪತ್ತೆ...ಮಕ್ಕಳಿಗೆ ಹೈಅಲರ್ಟ್..!


ಮಾರುತಿ ಗಂಗಪ್ಪ ಕಿಳ್ಳಿಕ್ಯಾತರನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದ್ದು, ಆತನ ವಿರುದ್ಧ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡ ಹಸಿ ಗಾಂಜಾ ಮೌಲ್ಯ ರೂ.15500/- ಗಳಾಗುತ್ತದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ : ಈ ಯೋಜನೆಯ ಮೂಲಕ ದೇಶ ಸೇವೆ ಅವಕಾಶ ನೀಡಿದ ಯೋಗಿ ಸರ್ಕಾರ


ಬೆಳಗಾವಿ ಕೇಂದ್ರಸ್ಥಾನದ ಅಬಕಾರಿ ಅಪರ ಆಯುಕ್ತ ಡಾ.ವೈ ಮಂಜುನಾಥ, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜ ಕಿಲ್ಲೆದಾರ ಹಾಗೂ ಧಾರವಾಡ ಜಿಲ್ಲೆಯ ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೈಸ್ ಆಗಿರುವ ಕೆ.ಪ್ರಶಾಂತಕುಮಾರ ಮಾರ್ಗದರ್ಶನದಲ್ಲಿ ಹಾಗೂ ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ  ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ,ಅಬಕಾರಿ ಉಪ ನಿರೀಕ್ಷಕ ಮಹೇಶ ಪಾಟೀಲ, ಪೇದೆಗಳಾದ ವಿಶಾಲ ಪಾಟೀಲ್ ಮತ್ತು ಆನಂದ ಮಿರಿಯಾಲ್ ಪಿಚ್ಚಯ್ಯ ಹಾಗೂ ಹಿರಿಯ ವಾಹನ ಚಾಲಕ ಎಸ್.ಹೆಚ್.ಕಟ್ಟಿಮನಿ ಹಾಗೂ ಧಾರವಾಡ ಉಪ ವಿಭಾಗದ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೋಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.