ಮೂರನೇ ದಿನವೂ ED ವಿಚಾರಣೆಗೆ ರಾಹುಲ್‌ ಹಾಜರು : ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು!

ಇಡಿ ಇಕ್ಕಳದಲ್ಲಿ ಸಿಲಿಕೊಕೊಂಡಿರೊ ರಾಷ್ಟ್ರ ನಾಯಕ ರಾಹುಲ್‌ ಗಾಂಧಿಗೆ ಮೂರನೇ ದಿನವೂ ಜಾರಿ ನಿರ್ದೇಶನಾಲಯ ಫುಲ್‌ ಡ್ರಿಲ್‌ ನಡೆಸಿದೆ. ಅತ್ತ ರಾಹುಲ್‌ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿದ್ರೆ, ಇತ್ತ ಕಾಂಗ್ರೆಸ್‌ ನಾಯಕರು ರಾಷ್ಟ್ರ ರಾಜ್ಯಧಾನಿಯಲ್ಲಿ ಮತ್ತೆ ದೊಡ್ಡ ಹೈಡ್ರಾಮವೇ ಸೃಷ್ಟಿಸಿದ್ದಾರೆ.

Written by - ANANTHA UPPAR | Last Updated : Jun 15, 2022, 04:03 PM IST
  • ಇಡಿ ಇಕ್ಕಳದಲ್ಲಿ ಸಿಲಿಕೊಕೊಂಡಿರೊ ರಾಷ್ಟ್ರ ನಾಯಕ ರಾಹುಲ್‌ ಗಾಂಧಿ
  • ರಾಹುಲ್‌ ಗಾಂಧಿಗೆ ಮೂರನೇ ದಿನವೂ ಜಾರಿ ನಿರ್ದೇಶನಾಲಯ ಫುಲ್‌ ಡ್ರಿಲ್‌ ನಡೆಸಿದೆ
  • ಕಾಂಗ್ರೆಸ್‌ ನಾಯಕರು ರಾಷ್ಟ್ರ ರಾಜ್ಯಧಾನಿಯಲ್ಲಿ ಮತ್ತೆ ದೊಡ್ಡ ಹೈಡ್ರಾಮ
ಮೂರನೇ ದಿನವೂ ED ವಿಚಾರಣೆಗೆ ರಾಹುಲ್‌ ಹಾಜರು : ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು! title=

ನವದೆಹಲಿ : ಇಡಿ ಇಕ್ಕಳದಲ್ಲಿ ಸಿಲಿಕೊಕೊಂಡಿರೊ ರಾಷ್ಟ್ರ ನಾಯಕ ರಾಹುಲ್‌ ಗಾಂಧಿಗೆ ಮೂರನೇ ದಿನವೂ ಜಾರಿ ನಿರ್ದೇಶನಾಲಯ ಫುಲ್‌ ಡ್ರಿಲ್‌ ನಡೆಸಿದೆ. ಅತ್ತ ರಾಹುಲ್‌ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿದ್ರೆ, ಇತ್ತ ಕಾಂಗ್ರೆಸ್‌ ನಾಯಕರು ರಾಷ್ಟ್ರ ರಾಜ್ಯಧಾನಿಯಲ್ಲಿ ಮತ್ತೆ ದೊಡ್ಡ ಹೈಡ್ರಾಮವೇ ಸೃಷ್ಟಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸ್‌ನ ಇಡಿ ಇಕ್ಕಳದಲ್ಲಿ ಸಿಲುಕಿಕೊಂಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸತತ ಮೂರನೇ ದಿನವೂ ವಿಚಾರಣೆಗೆ ಒಳಪಡಿಸಿರೋದಕ್ಕೆ ಕೈ ಪಡೆ ರೊಚ್ಚಿಗೆದ್ದು ಕೆಂಡ ಕಾರುತ್ತಿದೆ. ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ದೊಡ್ಡ ಹೈಡ್ರಾಮವೇ ಸೃಷ್ಟಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು, ಇಂದು ಮತ್ತೆ ದೆಹಲಿ ಎಐಸಿಸಿ ಕಚೇರಿ ಎದರು ಬೃಹತ್‌ ಪ್ರತಿಭಟನೆ ನಡೆಸಿ ದೊಡ್ಡು ಹಂಗಾಮ ಸೃಷ್ಟಿಸಿದ್ದಾರೆ. ಈ ವೇಳೆ ಪ್ರತಿಭಟನೆ ನಿರತ ಕೈ ನಾಯಕರನ್ನು ವಶಕ್ಕೆ ಪಡೆಯಲು ಬಂದ ಪೊಲೀಸರೊಂದಿಗೆ ನೂಕಟ ತಳ್ಳಾಟ, ಮಾತಿನ ಚಕಮಕಿ ನಡೆದಿದೆ. ಇನ್ನು ಇದೇ ವೇಳೆ ಸಂಸದ ಡಿ.ಕೆ. ಸುರೇಶ್‌ರನ್ನು ಪೊಲೀಸರು ವಶಕ್ಕೆ ಪಡೆಯಲು ಬಂದಾಗ ರಸ್ತೆಯಲ್ಲಿ ಬಿದ್ದು ಒದ್ದಾಡಿ, ಬಿಜೆಪಿ ವಿರುದ್ಧ ಕಿಡಿ ಕಾರಿದ್ರು. ಕಾಂಗ್ರೆಸ್‌ ಕಚೇರಿಯಿಂದ ನಾಯಕರು ಹೊರಗೆ ಕಾಲಿಟ್ಟರೇ ಪೊಲೀಸರು ನಮ್ಮನ್ನು ಎಳೆದಾಡುತ್ತಿದ್ದಾರೆ. ವಶಕ್ಕೆ ಪಡೆಯುವಾಗ ಬಲವಂತವಾಗಿ ತಳ್ಳುವ ಮೂಲಕ  ಹಿಟ್ಟರ್‌ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಂತಹ ಆಡಳಿತ ಎದ್ದು ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಂತ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಕೊನೆಗೂ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್‌ನ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನು ಅತ್ತ ದೆಹಲಿಯಲ್ಲಿ ಕೈ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ರೆ, ಇತ್ತ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇಂದೂ ಕೂಡ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. 

ಇದನ್ನೂ ಓದಿ : ಹೊಸ ಪೋಲಿಯೋ ವೈರಸ್ ಪತ್ತೆ...ಮಕ್ಕಳಿಗೆ ಹೈಅಲರ್ಟ್..!

ಇನ್ನು ರಾಹುಲ್ ಗಾಂಧಿಗೆ ಸತತ ಮೂರನೇ ದಿನದ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಸಿಎಂ ಸೇರಿದಂತೆ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸಚಿವರು ಯಾತ್ರೆ, ಮೆರವಣಿಗೆಗಳು ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ಏನೇ ಮಾಡಿದರೂ ನಾವು ನಮ್ಮ ಜನಪರ ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದ್ರು. ಅಲ್ಲದೇ ರಾಷ್ಟ್ರ ಮಟ್ಟದಲ್ಲಿ ನಮ್ಮ ನಾಯಕರು ಯಾವುದೇ ತಪ್ಪು ಮಾಡದಿದ್ದರೂ ಸುಳ್ಳು ಕೇಸ್ ದಾಖಲಿಸಲಾಗಿದೆ ಅತ ಕಿಡಿ ಕಾರಿದ್ರು. 

ಇತ್ತ ಬೆಂಗಳೂರಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ, ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗ್ತಿದೆ. ಐಟಿ, ಇಡಿ ಎಲ್ಲವನ್ನ ಕೇಂದ್ರ ಸರ್ಕಾರ ತನ್ನ ಕೈಗೊಂಬೆ ಮಾಡಿಕೊಂಡಿದ್ದಾರೆ. 8 ವರ್ಷಗಳಿಂದಲೂ ಇದನ್ನ ಮಾಡ್ಕೊಂಡು ಬರ್ತಿದ್ದಾರೆ. ಈಗ ಇದು ಅತಿರೇಖಕ್ಕೆ ಬಂದಿದೆ ಅಂತ ವಗ್ದಾಳಿ ನಡೆಸಿದ್ರು. ಅಲ್ಲದೇ ದೆಹಲಿ ಪೊಲೀಸರು ಗೂಂಡಾಗಳ ರೀತಿ ವರ್ತಿಸಿದ್ದಾರೆ. ಸಂಸದರ ಮೇಲೆ ಗೂಂಡಾ ವರ್ತನೆ ಮಾಡಿದ್ದಾರೆ. ಕಾನೂನು ಉಲ್ಲಂಘನೆಯಾದರೆ ಕೇಸ್ ಹಾಕಲಿ. ನೆಲಕ್ಕೆ ಬೀಳಿಸೋದು, ತಳ್ಳೋದು ನಾಚಿಕಿಯಾಗ್ಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ರು. 

ರಾಜಕೀಯ ದ್ವೇಷದಿಂದ ರಾಹುಲ್‌ ಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಹೊಸ ಪ್ರಕರಣವಲ್ಲ, ಹಿಂದೆಯೇ ಈ ಬಗ್ಗೆ ತನಿಖೆಯಾಗಿದೆ, ಮತ್ತೆ ಕೇಸನ್ನು ರೀಒಪನ್‌ ಮಾಡಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ರಾಜಕೀಯ ಕಿರುಕುಳ ನೀಡಲು ಷಡ್ಯಂತ್ರ ಮಾಡುತ್ತಿದ್ದಾರೆ ಅಂತ ಶಿವಮೊಗ್ಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು. 

ಇಡಿಯಿಂದ ಮೂರನೇ ದಿನ ರಾಹುಲ್‌ ಗಾಂಧಿ ವಿಚಾರಣೆ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಯಾವ ಕೇಸ್ ನಲ್ಲಿ ವಿಚಾರಣೆ ಮಾಡ್ತಿದ್ದಾರೆ ಅಂತ ಬಿಜೆಪಿಯವರಿಗೂ ಗೊತ್ತಿಲ್ಲ, ಇಡಿಯವರಿಗೂ ಗೊತ್ತಿಲ್ಲ. ಅವರು 90 ಕೋಟಿ ಸಾಲ ನ್ಯಾಷನಲ್ ಹೆರಾಲ್ಡ್ ಗೆ ಕೊಟ್ಟಿದ್ದಾರೆ ಅಂತ ಹೇಳ್ತಿದ್ದಾರೆ. ಕೋಡಬಾರದು ಅಂತಾ ಎಲ್ಲಾದ್ರು ಕಾನೂನು ಇದೆಯಾ..?,   ಇದು ಬರಿ ಟಾರ್ಚರ್ ಕೊಡೊದಕ್ಕೆ ವಿಚಾರಣೆ ಮಾಡ್ತಿದ್ದಾರೆ ಅಂತ ಕಿಡಿ ಕಾರಿದ್ರು. 

ಇದನ್ನೂ ಓದಿ : ಈ ಯೋಜನೆಯ ಮೂಲಕ ದೇಶ ಸೇವೆ ಅವಕಾಶ ನೀಡಿದ ಯೋಗಿ ಸರ್ಕಾರ

ಇತ್ತ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮಾತನಾಡಿ, ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತೋ ಅವರನ್ನು ತನಿಖೆ ಮಾಡ್ತಾರೆ. ಸತ್ಯಾಸತ್ಯತೆಗಳು ತನಿಖೆ‌ ಬಳಿಕ ಗೊತ್ತಾಗುತ್ತೆ. ಕಾನೂನಿಗೆ ರಾಹುಲ್ ಗಾಂಧಿ ಬೇರೆ, ಯಡಿಯೂರಪ್ಪ ಬೇರೆ, ಮತ್ತೊಬ್ಬ ಬೇರೆ ಅನ್ನೋ ಪ್ರಶ್ನೆಯಿಲ್ಲ ಅಂತ ಬಿಎಸ್‌ವೈ ಸಮರ್ಥನೆ ಮಾಡಿಕೊಂಡರು. 

ಒಟ್ನಲ್ಲಿ ಒಂದು ಕಡೆ ರಾಹುಲ್‌ ಗಾಂಧಿಯನ್ನ ಇಡಿ ಲಾಕ್‌ ಮಾಡಲು ಮುಂದಾಗಿದ್ರೆ, ಇನ್ನೊಂದು  ಕಡೆ ಕೈ ನಾಯಕರು ರೊಚ್ಚಿಗೆದ್ದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಇದು ಎಲ್ಲಿ ಹೋಗಿ ನಿಲ್ಲುತ್ತೋ ಅಂತ ಕಾದು ನೋಡಬೇಕು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News