‘Udta Punjab’ ಆಗುವ ಅಂಚಿನಲ್ಲಿ ಬೆಂಗಳೂರು; ಡ್ರಗ್ಸ್ ಮಾರಾಟದಲ್ಲಿ ಪೊಲೀಸರು ಭಾಗಿ!
ಪರಿಷತ್ ಕಲಾಪದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಲಭ್ಯತೆ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ಮಾತಾನಾಡಿದ ರಾಠೋಡ್, ಬಿಬಿಎಂಪಿಯ ತ್ಯಾಜ್ಯ ಸುರಿಯುವ ಸ್ಥಳ, ಖಾಲಿ ನಿವೇಶನಗಳು, ಖಾಲಿ ಮೈದಾನಗಳು, ಕೆಂಗೇರಿ, ಜಾಲಹಳ್ಳಿ, ಕೊಡಿಗೇನಹಳ್ಳಿ ಎಲ್ಲಾ ಕಡೆ ಡ್ರಗ್ಸ್ ಸೇವನೆ ಮಿತಿ ಮೀರುತ್ತಿದೆ ಎಂದು ತಿಳಿಸಿದರು.
ಬೆಂಗಳೂರು: ಸಿಲಿಕಾನ್ ನಗರ ಬೆಂಗಳೂರು ಡ್ರಗ್ಸ್ ವಿಚಾರದಲ್ಲಿ ಪಂಜಾಬ್ ರೀತಿ ಆಗುವ ಸ್ಥಿತಿಯಲ್ಲಿದೆ ಎಂದು ನಗರದಲ್ಲಿ ಹೆಚ್ಚುತ್ತಿರುವ ಮಾದಕ ಪ್ರಕರಣಗಳ ಬಗ್ಗೆ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಕಳವಳ ವ್ಯಕ್ತಪಡಿಸಿದರು.
ಪರಿಷತ್ ಕಲಾಪದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಲಭ್ಯತೆ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ಮಾತಾನಾಡಿದ ರಾಠೋಡ್, ಬಿಬಿಎಂಪಿಯ ತ್ಯಾಜ್ಯ ಸುರಿಯುವ ಸ್ಥಳ, ಖಾಲಿ ನಿವೇಶನಗಳು, ಖಾಲಿ ಮೈದಾನಗಳು, ಕೆಂಗೇರಿ, ಜಾಲಹಳ್ಳಿ, ಕೊಡಿಗೇನಹಳ್ಳಿ ಎಲ್ಲಾ ಕಡೆ ಡ್ರಗ್ಸ್ ಸೇವನೆ ಮಿತಿ ಮೀರುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Pitru Paksha: ನಿಮ್ಮಿಂದ ಶ್ರಾದ್ಧ ನೆರವೇರಿಸಲು ಆಗುತ್ತಿಲ್ಲ ಎಂದಾದಲ್ಲಿ ಈ ಉಪಾಯಗಳನ್ನು ಅನುಸರಿಸಿ
"ಡ್ರಗ್ಸ್ ಮಾಫಿಯಾ ಬೆಂಗಳೂರಲ್ಲಿ ಅತಿ ಹೆಚ್ಚು ಇದೆ. ಗುಜರಾತ್, ಕೊಲ್ಕತ್ತಾ, ಪುಣೆ, ದೆಹಲಿ ಮೊದಲಾದ ಊರಿಂದ ಡ್ರಗ್ಸ್ ಬರ್ತಾ ಇದೆ. ವಿಕ್ ಮಿ ಆಪ್, ಕೋಡ್ ವರ್ಡ್ ಗಳನ್ನ ಬಳಸಿ ಮಾರಾಟ, ಖರೀದಿ ನಡೀತಿದೆ ಎಂದು ವಿವರಿಸಿದರು.
ಮಧ್ಯಪ್ರವೇಶಿಸಿ ಮಾತಾನ್ನಾಡಿದ ಸದಸ್ಯ ಸಲೀಂ ಅಹ್ಮದ್, ಪೊಲೀಸರ ಗಮನಕ್ಕೆ ಇದ್ದೇ ಈ ಡ್ರಗ್ಸ್ ಮಾರಾಟ ನಡೆಯುತ್ತಿದೆ, ಕೆಲವು ಪೊಲೀಸ್ ಅಧಿಕಾರಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ. ಪೊಲೀಸ್ ಇಲಾಖೆಗೆ ಕಡಿವಾಣ ಹಾಕಬೇಕು. ಶಾಲೆ ಮಕ್ಕಳು ಡ್ರಗ್ಸ್ ತೆಗೆದುಕೊಳ್ಳುವಂತಾಗಿದೆ, ಎಂದು ಆರೋಪಿಸಿದರು.
ಕಾಂಗ್ರೆಸ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಗಂಭೀರ ಪ್ರಕರಣದ ಮೇಲೆ ಎಲ್ಲಾ ಸದಸ್ಯರು ಧ್ವನಿ ಎತ್ತಿದ್ದಾರೆ. ಪಕ್ಷ ಮೀರಿ ಈ ಜನ ಜಾಗೃತಿ ಹುಟ್ಟಿದೆ, ಪೊಲೀಸರೇನು ದೇವರಲ್ಲ, ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಜನರು ಜಾಗೃತವಾಗಿದ್ದರೆ ನಿಯಂತ್ರಣಕ್ಕೆ ಬರಲಿದೆ ಎಂದರು
ಇದನ್ನೂ ಓದಿ: IOCLನಲ್ಲಿ ಉದ್ಯೋಗಾವಕಾಶ: ತಿಂಗಳಿಗೆ ರೂ 1 ಲಕ್ಷ ಸಂಬಳ! ಇಂದೇ ಅರ್ಜಿ ಸಲ್ಲಿಸಿ
ಇನ್ನು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ತಿಳಿಸಿದ ಜ್ಞಾನೇಂದ್ರ, ಡ್ರಗ್ಸ್ ಪೆಡ್ಲರ್ ಗಳ ಆಸ್ತಿ ಜಪ್ತಿ ಮಾಡಲು ಹೊರಟಿದ್ದೇವೆ. ಹುಕ್ಕಾ ಬಾರ್ ಗೆ ಗೃಹ ಇಲಾಖೆ ಅಲ್ಲ ಬಿಬಿಎಂಪಿ ಕೊಡುತ್ತಿದೆ. ಬಹಳಷ್ಟು ಸಾರಿ ರೈಡ್ ಆದಾಗ ಮಾದಕ ವಸ್ತು ಸಿಗಲಿಲ್ಲ. ಪ್ರಕರಣ ಹೆಚ್ಚಾಗಿರುವ ಅಂಕಿ ಅಂಶ ಇದೆ ಅಂದ್ರೆ ಪೊಲೀಸರ ಆಕ್ಷನ್ ಹೆಚ್ಚಾಗಿದೆ ಎಂದರ್ಥ. ಕೆಲವು ಪ್ರಕರಣದಲ್ಲಿ ಪೊಲೀಸರ ಮೇಲೆಯೇ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳು, ಸೆಲೆಬ್ರಿಟಿಗಳನ್ನೂ ಅರೆಸ್ಟ್ ಮಾಡಲಾಗಿದೆ. ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳ ನಂತರ ಸಿಕ್ಕಿದ್ರೂ ರಕ್ತ- ಮೂತ್ರ ಪರೀಕ್ಷೆ ಮಾಡಿ, ಇಂತದ್ದೇ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ವಿವರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.