Pitru Paksha 2022: ನಿಮ್ಮಿಂದ ಶ್ರಾದ್ಧ ನೆರವೇರಿಸಲು ಆಗುತ್ತಿಲ್ಲ ಎಂದಾದಲ್ಲಿ ಈ ಉಪಾಯಗಳನ್ನು ಅನುಸರಿಸಿ ಅಗಲಿದವರನ್ನು ಸಂತೋಷಪಡಿಸಿ

Shradh 2022: ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾದ್ಧ ನೆರವೇರಿಸಿದ ಬಳಿಕ ಪೂರ್ವಜರು ಕುಟುಂಬದ ಆರೋಗ್ಯ, ಸುಖ-ಸಮೃದ್ಧಿ ಹಾಗೂ ವಂಶವೃದ್ಧಿಗಾಗಿ ಆಶೀರ್ವದಿಸುತ್ತಾರೆ ಎನ್ನಲಾಗಿದೆ. ಪಿತೃರ ಶ್ರಾದ್ಧ ಕರ್ಮವನ್ನು ಸಂಪೂರ್ಣ ವಿಧಿವಿಧಾನಗಳಿಂದ ನೆರವೇರಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದೆ. ಪದ್ಮ ಪುರಾಣದಲ್ಲಿ ಶ್ರಾದ್ಧವನ್ನು ನೆರವೇರಿಸುವ ವಿದಿಧ ವಿಧಾನಗಳನ್ನು ಹೇಳಲಾಗಿದೆ. ಆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Sep 13, 2022, 06:23 PM IST
  • ಶ್ರಾದ್ಧಕ್ಕಾಗಿ ಹಸುವಿಗಾಗಿ ಹುಲ್ಲು ಕೂಡ ಸಿಗಲಿಲ್ಲ ಎಂದಾದಲ್ಲಿ ಅದಕ್ಕೂ ಕೂಡ ಶಾಸ್ತ್ರಗಳಲ್ಲಿ ಉಪಾಯ ಹೇಳಲಾಗಿದೆ.
  • ಶ್ರಾದ್ಧ ನೆರವೇರಿಸಲು ಯಾವುದೇ ಓರ್ವ ವ್ಯಕ್ತಿಯ ಬಳಿ ಧನ ಅಥವಾ ಸಾಮಗ್ರಿ ಇಲ್ಲ ಎಂದಾದಲ್ಲಿ.
  • ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಸಂಪೂರ್ಣ ಶ್ರದ್ಧೆಯ ಭಾವನೆಯಿಂದ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಬೇಕು.
Pitru Paksha 2022: ನಿಮ್ಮಿಂದ ಶ್ರಾದ್ಧ ನೆರವೇರಿಸಲು ಆಗುತ್ತಿಲ್ಲ ಎಂದಾದಲ್ಲಿ ಈ ಉಪಾಯಗಳನ್ನು ಅನುಸರಿಸಿ ಅಗಲಿದವರನ್ನು ಸಂತೋಷಪಡಿಸಿ title=
Pitru Paksha 2022

Pitru Paksha 2022: ಹಿಂದೂ ಧರ್ಮದಲ್ಲಿ ಶ್ರಾದ್ಧ ಕರ್ಮಕ್ಕೆ ವಿಶೇಷ ಮಹತ್ವವಿದೆ. ಪೂರ್ವಜರಿಗೆ ಶ್ರಾದ್ಧ ಮಾಡುವುದು ಪ್ರತಿಯೊಬ್ಬ ಸನಾತನಿಯ ಕಡ್ಡಾಯ ಕರ್ತವ್ಯವೆಂದು ಪರಿಗಣಿಸಲಾಗಿದೆ. ಶ್ರಾದ್ಧವನ್ನು ಮಾಡಿದ ನಂತರ, ಪೂರ್ವಜರು ತೃಪ್ತರಾಗುತ್ತಾರೆ ಮತ್ತು ಕುಟುಂಬದ ಸಂತೋಷ, ಆರೋಗ್ಯ ಮತ್ತು ಸಂತತಿಯ ವೃದ್ಧಿಗಾಗಿ  ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ, ಆದರೆ ಪೂರ್ವಜರು ಶ್ರಾದ್ಧವನ್ನು ಮಾಡದಿದ್ದರೆ, ವ್ಯಕ್ತಿಯು ಪಿತ್ರದೋಷದಿಂದ ಬಳಲುತ್ತಾನೆ ಮತ್ತು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ಹೇಳಲಾಗಿದೆ. ಹೀಗಿರುವಾಗ ಒಬ್ಬ ವ್ಯಕ್ತಿಯು ತನ್ನ ಪೂರ್ವಜರಿಗೆ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ, ಅವನು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ? ವಿವಿಧ ಧರ್ಮಗ್ರಂಥಗಳಲ್ಲಿ ನೀಡಿರುವ ಅಭಿಪ್ರಾಯಗಳ ಆಧಾರದ ಮೇಲೆ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡೋಣ ಬನ್ನಿ.

ಶಾಕ್ ತರಕಾರಿಯೊಂದಿಗೆ ಮಾಡಿದ ಶ್ರಾದ್ಧ ಹಲವು ಪಟ್ಟು ಫಲಗಳನ್ನು ನೀಡುತ್ತದೆ
ಜೋತಿಷ್ಯ ಪಂಡಿತರ ಪ್ರಕಾರ, ಪೂರ್ವಜರ ಶ್ರಾದ್ಧ ಆಚರಣೆಗಳನ್ನು ಸಂಪೂರ್ಣ ವಿಧಿ-ವಿಧಾನಗಳಿಂದ ನೆರವೇರಿಸಬೇಕು. ಇವುಗಳಲ್ಲಿ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುವುದರಿಂದ ಹಿಡಿದು ಅನ್ನ ದಾನವನ್ನು ಕೂಡ  ಮಾಡಬೇಕು ಎನ್ನಲಾಗಿದೆ, ಆದರೆ ಒಬ್ಬ ವ್ಯಕ್ತಿಗೆ ಶ್ರಾದ್ಧ ನಡೆಸುವ ಸಾಮರ್ಥ್ಯ ಇಲ್ಲ ಎಂದಾದಲ್ಲಿ, ಪದ್ಮ ಪುರಾಣದ ಪ್ರಕಾರ, ಅಂತಹ ವ್ಯಕ್ತಿಯೂ ಸಹ ಶ್ರಾದ್ಧವನ್ನು ನಡೆಸಬಹುದು.ಶಾಕ್ ವ್ರತ ಅನುಸರಿಸುವ ಮೂಲಕ ಕೂಡ ಶ್ರಾದ್ಧವನ್ನು ನೆರವೇರಿಸಿ ಪೂರ್ವಜರನ್ನು ಸಂತೋಷಪಡಿಸಬಹುದು.

ಈ ಕುರಿತು ಪದ್ಮ ಪುರಾಣದಲ್ಲಿ,  'ತಸ್ಮಾಚ್ಛ್ರದಂ ನರೋ ಭಕ್ತ್ಯಾ ಶಾಕರ್ಪಿ ಯಥಾವಿಧಿ' ಎಂದು ಬರೆಯಲಾಗಿದೆ. ಅಂದರೆ, ಶ್ರಾದ್ಧವನ್ನು ನೆರವೇರಿಸಲು ಆಗದೆ ಇರುವ ವ್ಯಕ್ತಿಯು ಪೂರ್ವಜರ ಶ್ರಾದ್ಧವನ್ನು ತರಕಾರಿಗಳನ್ನು ತಯಾರಿಸುವ ಮೂಲಕ ಕೂಡ ನೆರವೇರಿಸಬಹುದು. ಒಂದು ವೇಳೆ ತರಕಾರಿ ತರಲೂ ಕೂಡ  ಹಣವಿಲ್ಲದಿದ್ದರೆ ಹುಲ್ಲು, ಕಟ್ಟಿಗೆ ಅಥವಾ ಇತರೆ ವಸ್ತುಗಳನ್ನು ಮಾರಾಟ ಮಾಡಿ ತರಕಾರಿ ಖರೀದಿಸಿ ಅದರಿಂದಲೇ ಶ್ರಾದ್ಧ ಮಾಡಬೇಕು ಎಂದು ಬರೆಯಲಾಗಿದೆ. ಪದ್ಮ ಪುರಾಣದ ಪ್ರಕಾರ, ಇಂತಹ ಕಠಿಣ ಪರಿಶ್ರಮದಿಂದ ಮಾಡಿದ ಶ್ರಾದ್ಧದ ಫಲವು ಲಕ್ಷ ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ಈ ಕುರಿತು ಪದ್ಮ ಪುರಾಣದಲ್ಲಿ  'ತೃಣಕಷ್ಟಾರ್ಜನಂಕೃತ್ವಾ, ಪಾರ್ಥಯಿತ್ವಾ ವರಾಟಕಂ. ಕರೋತಿ ಪಿತೃಕಾರ್ಯಾಣಿ, ತತೋ ಲಕ್ಷಗುಣಂ ಭವೇತ್''.

ಹುಲ್ಲನ್ನು ಕತ್ತರಿಸಿ ಹಸುವಿಗೆ ತಿನ್ನಿಸಿ
ಪದ್ಮ ಪುರಾಣದ ಪ್ರಕಾರ ಒಂದು ವೇಳೆ ವ್ಯಕ್ತಿಯ ಬಳಿ ತರಕಾರಿ ತರುವ ಸಾಮರ್ಥ್ಯ ಇಲ್ಲದಿದ್ದಾಗಲು ಕೂಡ, ಹುಲ್ಲನ್ನು ಕತ್ತರಿಸಿ ಅದನ್ನು ಪೂರ್ವಜರ ಹೆಸರಿನಲ್ಲಿ ಹಸುವಿಗೆ ತಿನ್ನಲು ಕೊಡಬೇಕು. ಇದರಿಂದಲೂ ಕೂಡ ಪೂರ್ವಜರು ಪ್ರಸನ್ನರಾಗುತ್ತಾರೆ.

ಯಾವುದು ನಿಮ್ಮಿಂದ ಸಾಧ್ಯವಿಲ್ಲ ಎಂದಾದಲ್ಲಿ ಈ ಉಪಾಯ ಮಾಡಿ 
ಶ್ರಾದ್ಧಕ್ಕಾಗಿ ಹಸುವಿಗಾಗಿ ಹುಲ್ಲು ಕೂಡ ಸಿಗಲಿಲ್ಲ ಎಂದಾದಲ್ಲಿ ಅದಕ್ಕೂ ಕೂಡ ಶಾಸ್ತ್ರಗಳಲ್ಲಿ ಉಪಾಯ ಹೇಳಲಾಗಿದೆ. ಶ್ರಾದ್ಧ ನೆರವೇರಿಸಲು ಯಾವುದೇ ಓರ್ವ ವ್ಯಕ್ತಿಯ ಬಳಿ ಧನ ಅಥವಾ ಸಾಮಗ್ರಿ ಇಲ್ಲ ಎಂದಾದಲ್ಲಿ. ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಸಂಪೂರ್ಣ ಶ್ರದ್ಧೆಯ ಭಾವನೆಯಿಂದ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಬೇಕು.
ನ ಮೇಸ್ತಿ ವಿತಂ ಧನಂ ಚ ನಾನ್ಯಚ್ಛಧ್ಯೋಪಯೋಗ್ಯಂ ಸ್ವಪಿತೃಣನ್ತೋಸ್ಮಿ।
ತೃಪ್ಯಂತು ಭಕ್ತ್ಯಾ ಪಿತ್ರೋ ಮಯಿತೌ ಕೃತೌ ಭುಜೌ ವತ್ರ್ಮಣಿ ಮರುತಸ್ಯ॥”

ಇದನ್ನೂ ಓದಿ-Horoscope 2022: ಸೆಪ್ಟೆಂಬರ್ 13 ರಿಂದ ಸೂರ್ಯನ ಹಾಗೆ ಬೆಳಗಲಿದೆ ಈ ರಾಶಿಗಳ ಜನರ ಭಾಗ್ಯ

ಅರ್ಥಾತ್..! ಓ ನನ್ನ ತಂದೆ! ನನ್ನ ಬಳಿ ಶ್ರಾದ್ಧಕ್ಕೆ ಯೋಗ್ಯವಾದ ಹಣ, ಆಹಾರ ಇತ್ಯಾದಿಗಳಿಲ್ಲ. ನಿಮ್ಮ ಮೇಲೆ ನನಗೆ ನಂಬಿಕೆ ಮತ್ತು ಭಕ್ತಿ ಮಾತ್ರ ಇದೆ. ಅದರ ಮೂಲಕ ನಾನು ನಿಮ್ಮನ್ನು ತೃಪ್ತಿಪಡಿಸಲು ಬಯಸುತ್ತೇನೆ, ಆದ್ದರಿಂದ ನೀವು ತೃಪ್ತರಾಗಬಹುದು. ನಾನು ಶಾಸ್ತ್ರಗಳ ಆದೇಶದಂತೆ ಆಕಾಶದಲ್ಲಿ ಎರಡೂ ತೋಳುಗಳನ್ನು ಎತ್ತಿದ್ದೇನೆ ಎಂದರ್ಥ.

ಇದನ್ನೂ ಓದಿ-Mangal Gochar 2022: ಶೀಘ್ರದಲ್ಲಿಯೇ ಮಿಥುನ ರಾಶಿಗೆ ಮಂಗಳನ ಪ್ರವೇಶ, ಈ 3 ರಾಶಿಗಳ ಜನರಿಗೆ ಭಾರಿ ಲಾಭ

ಶಾಸ್ತ್ರಗಳ ಪ್ರಕಾರ ನೀವು ಶ್ರಾದ್ಧ ಕರ್ಮವನ್ನು ಯಾವ ರೀತಿ ಬೇಕಾದರೂ ನೆರವೇರಿಸಬಹುದು. ಆದರೆ, ಎಲ್ಲಾ ಪರಿಸ್ಥಿತಿಯಲ್ಲಿ ನೆರವೇರಿಸುವುದು ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಅದನ್ನು ಬಿಡಬಾರದು ಎಂದು ಹೇಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News