Kalburgi News: ಪಿಎಸ್ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತ ಕಳ್ಳ..!
ಕಳ್ಳನು ಪಿಎಸ್ ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತಿರುವ ಘಟನೆ ಕಲಬುರಗಿಯ ಅಫಜಲಪೂರದಲ್ಲಿ ನಡೆದಿದೆ.
ಕಲಬುರಗಿ:ಕಳ್ಳನು ಪಿಎಸ್ ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತಿರುವ ಘಟನೆ ಕಲಬುರಗಿಯ ಅಫಜಲಪೂರದಲ್ಲಿ ನಡೆದಿದೆ.
ಗನ್ ಕಿತ್ತುಕೊಂಡು ಹೋಗಿರುವ ವ್ಯಕ್ತಿಯನ್ನು ಖಾಜಪ್ಪ ಎಂದು ಗುರುತಿಸಲಾಗಿದೆ,ಆತನ ವಿರುದ್ಧ ಬೆಂಗಳೂರು, ಕಲಬುರಗಿ, ಅಫಜಲಪೂರ ಸೇರಿ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಿವೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ ಕೆಲವು ದಿನಗಳ ಮಟ್ಟಿಗೆ ನಿಮ್ಮ ಕಲೆಕ್ಷನ್ ವ್ಯವಹಾರ ನಿಲ್ಲಿಸಿ: ಬಿಜೆಪಿ ಟೀಕೆ
ಅಫಜಲಪೂರ ಪೊಲಿಸ್ ಠಾಣೆ ಪಿಎಸ್ ಐ ಭೀಮರಾಯ್ ಬಂಕಲಿ ಎಂಬುವವರ ನಗ್ ಕಿತ್ತು ಪರಾರಿಯಾಗಿದ್ದಾನೆ. ಅಫಜಲಪೂರ ತಾಲ್ಲೂಕಿನ ಸೊನ್ನ ಬಳಿ ಬಂದಿಸಲು ಹೋದಾಗ ಈ ಘಟನೆ ನಡೆದಿದೆ.ಆರೋಪಿಯ ಕಾರಿನ ಗ್ಲಾಸ್ ಒಡೆದು ಬಂಧಿಸಲು ಯತ್ನಸುವಾಗ ಪಿಎಸ್ ಐ ಗನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಪುಲ್ ಲೋಡೆಡ್ ಗನ್ ಕಿತ್ತುಕೊಂಡು ಪರಾರಿಯಾಗಿದ್ದರಿಂದ ಸ್ಥಳದಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿತ್ತು.
ಇದನ್ನೂ ಓದಿ-ಕೊಟ್ಟ ಮಾತಿನಂತೆ PTCL ಕಾಯ್ದೆ ತಿದ್ದುಪಡಿ ತರಲು ಮುಂದಾಗಿದ್ದೇವೆ: ಸಿದ್ದರಾಮಯ್ಯ
ಅಫಜಲಪುರ ಪಟ್ಟಣದ ದುದನಿ ರಸ್ತೆಯಲ್ಲಿರುವ ಲಕ್ಷ್ಮಿ ದೇವಸ್ಥಾನದ ಹತ್ತಿರ ಇರುವ ಮರವೇರಿ ಆರೋಪಿ ಕುಳಿತಿದ್ದಾನೆ.ತದನಂತರ ಕಲಬುರಗಿ ಎಸ್ಪಿ ಕಲಬುರಗಿ ಎಸ್ ಪಿ ಇಶಾಪಂತ ಸ್ಥಳಕ್ಕೆ ಭೇಟಿ ಕಳ್ಳನ ಮನವೊಲಿಸಿ ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳನು ಮರದಿಂದ ಕೆಳಗೆ ಇಳಿದ ನಂತರ ತಕ್ಷಣ ವಶಕ್ಕೆ ತೆಗೆದುಕೊಂಡ ಪೋಲಿಸ್ ಸಿಬ್ಬಂದಿಯು ಆತನನ್ನು ಅಫಜಲಪುರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.