9.10 ಕ್ಕೆ ಜೈಲಿಂದ ರಿಲೀಸ್… 9.30 ಕ್ಕೆ ಮಟ್ಯಾಷ್! ರೌಡಿ ಶೀಟರ್ ಸಿದ್ದಾಪುರ ಮಹೇಶನ ಬರ್ಬರ ಹತ್ಯೆ
Karnataka Crime News: ಮಹೇಶ ಜಯನಗರದಲ್ಲಿ ವಿಲ್ಸನ್ ಗಾರ್ಡನ್ ನಾಗನ ಆಪ್ತನಾಗಿದ್ದ ಫೈನಾನ್ಶಿಯರ್ ಮದನ್ ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬೇಲ್ ಪಡೆದು ಬಾಡಿಗೆ ಬಿಲ್ಡಪ್ ತಗೊಂಡು ಬಂದವನು ನಾಗನ ಕೆಂಗಣ್ಣಿಗೆ ಗುರಿಯಾಗಿದ್ದ.
ಬೆಂಗಳೂರು: ಬೆಂಗಳೂರಿನ ಅಂಡರ್ ವಲ್ಡ್ ಇತಿಹಾಸದಲ್ಲಿ ಇದುವರೆಗೂ ಕಂಡು ಕೇಳರಿಯದ ರಣ ಭೀಕರ ಹತ್ಯೆಯೊಂದು ನಡೆದು ಹೋಗಿದೆ. ಬೆಂಗಳೂರು ಕಬ್ಜ ಮಾಡಲು ಹೊರಟಿದ್ದ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಎದುರು ಹಾಕ್ಕೊಂಡಿದ್ದ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ ಬೀದಿ ಹೆಣವಾಗಿದ್ದಾನೆ.
ಇದನ್ನೂ ಓದಿ: ಗೋಲ್ಡ್ ಕ್ರೌನ್ ಸಬಲೈಮ್ ಬಿಲ್ಡರ್ಸ್ ಗೆ ದಂಡ ಮತ್ತು ಪರಿಹಾರದ ಆದೇಶ
ಮಹೇಶ ಜಯನಗರದಲ್ಲಿ ವಿಲ್ಸನ್ ಗಾರ್ಡನ್ ನಾಗನ ಆಪ್ತನಾಗಿದ್ದ ಫೈನಾನ್ಶಿಯರ್ ಮದನ್ ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬೇಲ್ ಪಡೆದು ಬಾಡಿಗೆ ಬಿಲ್ಡಪ್ ತಗೊಂಡು ಬಂದವನು ನಾಗನ ಕೆಂಗಣ್ಣಿಗೆ ಗುರಿಯಾಗಿದ್ದ. ಇದೇ ವಿಲ್ಸನ್ ಗಾರ್ಡನ್ ನಾಗನಿಗೆ ಹೆದರಿ ಹಳೇ ವಾರೆಂಟ್ ಮೇಲೆ ಮಹೇಶ ಮತ್ತೆ ಜೈಲು ಸೇರಿದ್ದ. ಆದರೆ ನಾಗ ಮಾತ್ರ ಮಹೇಶನ ಮೇಲೆ ಪ್ರತಿಕಾರದ ಕತ್ತಿ ಮಸಿಯುತ್ತಲೇ ಇದ್ದ.
ನಿನ್ನೆ ರಾತ್ರಿ 9.10 ಕ್ಕೆ ಮಹೇಶ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದ. ಮಹೇಶನಿಗಾಗಿ ಕಾದು ಕುಳಿತಿದ್ದ ಹಂತಕರ ಪಡೆ ಎರಡು ಕಾರುಗಳಲ್ಲಿ ಫಾಲೋ ಮಾಡಿ ಜೈಲಿನಿಂದ ಹೊರ ಬಂದು ಮೈನ್ ರೋಡ್ ಎಂಟ್ರಿ ಆಗುತ್ತಿದ್ದಂತೆ ಕಾರನ್ನು ಅಡ್ಡ ಹಾಕಿದ್ದಾರೆ. ಮಹೇಶ ಎಸ್ಕೇಪ್ ಆಗಲು ಪ್ರಯತ್ನಿಸಿದರು ಸಹ ಹಂತಕ ಬೀಸಿದ ಮಚ್ಚಿನೇಟಿಗೆ ನೆಲಕ್ಕೆ ಬಿದ್ದು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಎರಡೇ ವರ್ಷಗಳಲ್ಲಿ ಮೆಟ್ರೋ ರೈಲಿಗೆ ಹೊಸ ತಂತ್ರಜ್ಞಾನ..!
ಸದ್ಯ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ಕಡೆ ಭೂಗತ ಪಾತಕದಲ್ಲಿ ಮಹೇಶ ರಿವೇಂಜ್ ಮರ್ಡರ್ ಗೆ ರೌಡಿ ಪಾಳಯವೇ ಬೆಚ್ಚಿ ಬಿದ್ದಿದ್ದು, ಸಿದ್ದಾಪುರ ಮಹೇಶ್ ಹತ್ಯೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಸೇರಿ, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಐಪಿಸಿ ಸೆಕ್ಷನ್ 302, 120ಬಿ, 143,147, 148, 343, 327 149ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ