ಕೋಲಾರ: ಫೇಸ್‍ಬುಕ್ ಸುಂದರಿಗಾಗಿ ಪತಿ ಮಹಾಶಯನೊಬ್ಬ ತನ್ನ ಪತ್ನಿಗೆ ವಿಷವಿಟ್ಟಿರುವ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಶಶಿಕುಮಾರ್ ಹೆಂಡತಿಗೆ ವಿಷವಿಟ್ಟ ಪತಿ ಮಹಾಶಯ.


COMMERCIAL BREAK
SCROLL TO CONTINUE READING

ಸದ್ಯ ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಾನಗಮಾಕಲಹಳ್ಳಿ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.


ಇದನ್ನೂ ಓದಿSHOCKING!: ನೇಣು ಬಿಗಿದ ಸ್ಥಿತಿಯಲ್ಲಿ ಬಾಡಿಬಿಲ್ಡರ್ ಶವ ಪತ್ತೆ..!


9 ವರ್ಷಗಳ ಹಿಂದೆ ಹಿರಿಯ‌ರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದ ಪತಿಗೆ ಸಾಮಾಜಿಕ ಜಾಲತಾಣ ಫೇಸ್‍ಬಯಕ್‍ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಫೇಸ್‍ಬುಕ್ ಸುಂದರಿಯ ಕಾಟದಿಂದ ಶಶಿಕುಮಾರ್ ತನ್ನ ಹೆಂಡತಿಯನ್ನೇ ಮರೆತುಬಿಟ್ಟಿದ್ದ.


ಯುವತಿ ಜೊತೆಗೆ ಲವ್ವಿಡವ್ವಿ ಶುರುವಿಟ್ಟುಕೊಂಡದ್ದ ಶಶಿಕುಮಾರ್ ತನ್ನ ಹೆಂಡತಿಯನ್ನು ತವರು ಮನೆಗೆ ಪತ್ನಿ ಕಳುಹಿಸಿದ್ದ. ಬಳಿಕ ಆಕೆಗೆ ತವರು ಮನೆಯಲ್ಲಿಯೇ ವಿಷವಿಟ್ಟಿದ್ದಾನೆ. ಪರಿಣಾಮ ತೀವ್ರ ಅಸ್ವಸ್ಥತೆಯಿಂದ ಪತ್ನಿ ಆಶಾರಾಣಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.


ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ನಿರ್ಮಾಣ ಕಂಪನಿ ಸೇರಿ BMRCLನ 8 ಜನರ ವಿರುದ್ಧ FIR!


ಸದ್ಯ ಆಶಾರಾಣಿಗೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.