ಮೆಟ್ರೋ ಪಿಲ್ಲರ್ ದುರಂತ: ನಿರ್ಮಾಣ ಕಂಪನಿ ಸೇರಿ BMRCLನ 8 ಜನರ ವಿರುದ್ಧ FIR!

Metro Pillar Collapse Case: ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈಗಲೇ ಯಾರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Jan 11, 2023, 01:20 PM IST
  • ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟ ಪ್ರಕರಣ
  • ಸಾವಿಗೆ ಕಾರಣವಾದ ಆರೋಪದಡಿ 8 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ FIR
  • ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್
ಮೆಟ್ರೋ ಪಿಲ್ಲರ್ ದುರಂತ: ನಿರ್ಮಾಣ ಕಂಪನಿ ಸೇರಿ BMRCLನ 8 ಜನರ ವಿರುದ್ಧ FIR! title=
8 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ FIR

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವಿಗೆ ಕಾರಣವಾದ ಆರೋಪದಡಿ 8 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ FIR ದಾಖಲಾಗಿದೆ.

ನಿರ್ಮಾಣದ ಹೊಣೆ ಹೊತ್ತಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್ಸ್ ಕಂಪನಿ ಮತ್ತದರ ಜ್ಯೂನಿಯರ್ ಇಂಜಿನಿಯರ್ ಪ್ರಭಾಕರ್, ನಿರ್ದೇಶಕ ಚೈತನ್ಯ, ಸ್ಪೆಷಲ್  ಪ್ರಾಜೆಕ್ಟ್ ಮ್ಯಾನೇಜರ್ ಮಥಾಯ್, ಪ್ರಾಜೆಕ್ಟ್ ಮ್ಯಾನೇಜರ್ ವಿಕಾಸ್ ಸಿಂಗ್, ಸೂಪರ್ವೈಸರ್ ಲಕ್ಷ್ಮೀಪತಿ, BMRCLನ ವೆಂಕಟೇಶ್ ಶೆಟ್ಟಿ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್ ಬೆಂಡೆಕೇರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೀದಿಗಿಳದ ಶೋಷಿತ ಸಮುದಾಯ : ಅವಾಸ್ತವಿಕ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಾಕ್ಕೆ ಆಗ್ರಹ

ಈ ಬಗ್ಗೆ ಮಾತನಾಡಿರುವ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್, ‘ಮೃತಳ ಪತಿ ಲೋಹಿತ್ ನೀಡಿರುವ ದೂರಿನನ್ವಯ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಐವರ ಹೆಸರುಗಳನ್ನು ಅವರು ಉಲ್ಲೇಖಿಸಿದ್ದಾರೆ. ನಾವು ಪ್ರಕರಣದಲ್ಲಿ ಯಾರ ಹೆಸರೂ ಉಲ್ಲೇಖಿಸಿಲ್ಲ. ಈಗಾಗಲೇ ತನಿಖೆ ಮುಂದುವರೆಸಲಾಗಿದ್ದು, ಕನ್‌ಸ್ಟ್ರಕ್ಷನ್ ಕಂಪನಿ, BMRCL ಅಧಿಕಾರಿಗಳಿಗೆ ನೊಟೀಸ್ ನೀಡಿದ್ದೇವೆ. ಈಗಾಗಲೇ BMRCL ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ’ ಎಂದಿದ್ದಾರೆ.

ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈಗಲೇ ಯಾರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮತ್ತಷ್ಟು ವಿಚಾರಣೆಯ ಅಗತ್ಯವಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡೈಗರ್ ಹವಾ: ಈ ಊರಲ್ಲಿ ನಾಯಿಯಾಯಿತು ಹುಲಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News