ಬೆಂಗಳೂರು: ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ವಿದ್ಯುತ್ ಕಂಬ ಟಚ್‌ ಆಗಿ ಕರೆಂಟ್ ಶಾಕ್‌ನಿಂದ ಯುವತಿ ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ರಾತ್ರಿ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ‌. 23 ವರ್ಷದ ಅಖಿಲಾ ಮೃತ ದುದೈರ್ವಿ. ನಿನ್ನೆ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ‌.


COMMERCIAL BREAK
SCROLL TO CONTINUE READING

ಮಾರತ್ ಹಳ್ಳಿ ಹಾಗೂ ವರ್ತೂರು ಮಧ್ಯಭಾಗದಲ್ಲಿರುವ ಸಿದ್ದಾಪುರದ ಮನೆಯೊಂದರಲ್ಲಿ ತಂದೆ-ತಾಯಿ ಜೊತೆ ವಾಸವಾಗಿದ್ದ ಅಖಿಲಾ ಬಿಕಾಂ ಪದವೀಧರೆಯಾಗಿದ್ದಳು. ಖಾಸಗಿ ಶಾಲೆಯೊಂದರಲ್ಲಿ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ನಿಮಿತ್ತ ನಿನ್ನೆ ರಾತ್ರಿ ಸ್ಕೂಟರ್ ನಲ್ಲಿ ಮನೆಗೆ ಹೋಗುವಾಗ ಧಾರಾಕಾರ ಮಳೆ ಸುರಿದಿದ್ದರಿಂದ ಮಂಡಿಯವರೆಗೂ ನೀರು ತುಂಬಿದೆ. 


ಇದನ್ನೂ ಓದಿ: Viral Video: ಊ ಅಂಟವಾ ಹಾಡಿಗೆ ಸೀರೆಯುಟ್ಟು ಬೆಲ್ಲಿ ಡ್ಯಾನ್ಸ್‌ ಮಾಡಿದ ನೀರೆಯರು


ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಅಖಿಲಾ ಮಳೆ ನೀರಿನಲ್ಲಿ ನಿಯಂತ್ರಣ ಸಿಗದೆ ಸಹಾಯಕ್ಕಾಗಿ ಪಾದಚಾರಿ ಮಾರ್ಗದ ವಿದ್ಯುತ್ ಕಂಬ ಮುಟ್ಟಿದ್ದಾಳೆ. ನೀರಿನಲ್ಲಿ ಬಿದ್ದಿದ್ದ ವೈಯರ್ ಮೂಲಕ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ಹೊಡೆದಿದೆ‌. ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.


ಘಟನೆಗೆ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದಿರುವುದೇ ಕಾರಣ ಆರೋಪಿಸಲಾಗುತ್ತಿದೆ. ಇಷ್ಟಾದರೂ ಘಟನಾ ಸ್ಥಳಕ್ಕೆ  ಬಿಬಿಎಂಪಿ,ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ಶಿಫ್ಟ್  ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: POCSO Case: ಮುರುಘಾ ಶ್ರೀಗಳಿಗೆ 9 ದಿನಗಳ ನ್ಯಾಯಾಂಗ ಬಂಧನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.