3 ವರ್ಷ ಪ್ರೀತಿಗೆ ಎಳ್ಳುನೀರು ಬಿಟ್ಟ ಯುವತಿ..! ಹೊಸ ವರ್ಷಕ್ಕೆ ಬಾಳಿಗೆ ಬೆಳಕಾಗುತ್ತಾಳೆ.. ಅಂದುಕೊಂಡಿದ್ದ ಪ್ರೇಮಿ ಆತ್ಮಹತ್ಯೆ..
ಅವನು ಆಕೆಯನ್ನು ಮೂರು ವರ್ಷದಿಂದ ಪ್ರಾಣಕ್ಕಿಂತ ಹೆಚ್ಚಾಗಿ ಲವ್ ಮಾಡಿದ್ದ. ಮಧ್ಯದಲ್ಲಿ ಗಲಾಟೆಯಾಗಿ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅವತ್ತಿಂದ ಸುಮ್ಮನಿದ್ದವನಿಗೆ ಹೊಸವರ್ಷ ಆಕೆಯನ್ನ ಮತ್ತೆ ಮರಳಿ ಕೊಡುತ್ತೆ ಎಂದುಕೊಂಡಿದ್ದ. ಆದ್ರೆ ಪ್ರೇಯಸಿಯ ಮಾತಿನಿಂದ ದುಡುಕಿನ ನಿರ್ಧಾರಕ್ಕೆ ಬಿದ್ದವ ಪ್ರಾಣ ಕಳೆದುಕೊಂಡಿದ್ದಾನೆ.
ಬೆಂಗಳೂರು : ತಾಯಿಯ ಗೋಳು ನೋಡೋಕಾಗ್ತಿಲ್ಲ. ಸಂಬಂಧಿಕರ ಆಕ್ರಂದನ ಕೇಳೋಕಾಗ್ತಿಲ್ಲ. ಇದ್ದೊಬ್ಬ ಮಗನನ್ನ ಕಳೆದುಕೊಂಡು ಹೆತ್ತಮ್ಮ ಗೋಳಾಡ್ತಿದ್ರೆ ಸಂಬಂಧಿಕರು ರೋಧಿಸ್ತಿದ್ದಾರೆ. ಇವರ ಈ ಆಕ್ರಂದನಕ್ಕೆ ಕಾರಣ ಸತೀಶ್ ಎಂಬ 25 ವರ್ಷದ ಯುವಕನ ಆತ್ಮಹತ್ಯೆ.
ಮೃತ ಸತೀಶ್ ಬೆಳ್ಳಂದೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ತಂದೆಯನ್ನು ಕಳೆದುಕೊಂಡಿದ್ದ ಈತ ತಾಯಿಯ ಆರೈಕೆಯಲ್ಲಿ ಬೆಳೆದಿದ್ದ. ಬಾಣಸವಾಡಿಯ ಕನಕದಾಸ ಲೇಔಟ್ ನಲ್ಲಿ ವಾಸವಾಗಿದ್ದ. ಜನವರಿ 2 ಅಂದ್ರೆ ನಿನ್ನೆ ಸಂಜೆ ಸ್ವಲ್ಪ ಸುಸ್ತಾಗಿದೆ ಅಂತಾ ರೂಮಿಗೆ ಹೋದವನಿಗೆ ಅದ್ಯಾವ ನೆನಪು ಕಾಡಿತ್ತೋ ಏನೋ.. ರೂಮಿನಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವನ ಈ ನಿರ್ಧಾರಕ್ಕೆ ಕಾರಣ ಈತನ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಈತನ ಪ್ರೇಯಸಿ ಅನ್ನೋದೇ ನಿಜಕ್ಕೂ ವಿಪರ್ಯಾಸ.
ಇದನ್ನೂ ಓದಿ:ಮಾರ್ಕೋʼ ಚೆಲುವೆಯ ಅಂದಕ್ಕೆ ಫ್ಯಾನ್ಸ್ ಫಿದಾ..! ಅಬ್ಬಬ್ಬಾ.. ಸೌಂದರ್ಯಕ್ಕೆ ಅಂದ್ರೆ ಇದಲ್ವಾ.. ಫೋಟೋಸ್ ನೋಡಿ..
ಹೌದು, ಪ್ರೀತಿ ಮಾಯೆ ಹುಷಾರ್ ಎಂಬ ಮಾತಿದೆ. ಆದ್ರೆ ಕಾಲೇಜಿನಲ್ಲಿ ಇದ್ದಾಗಲೇ ಸತೀಶನಿಗೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ಜೊತೆ ಪ್ರೀತಿ ಹುಟ್ಟಿತ್ತು. ಒಂದೇ ಕಾಲೇಜಿನಲ್ಲಿ ಓದ್ತಾ ಇದ್ರು ಆದ್ರೆ ಬ್ರಾಂಚ್ ಮಾತ್ರ ಬೇರೆ ಬೇರೆಯಾಗಿತ್ತು. ಒಂದೇ ಹಾಲ್ ನಲ್ಲಿ ಪರೀಕ್ಷೆ ಬರೆಯುವ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿದ್ದು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಮೂರು ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು. ಆದ್ರೆ ಪ್ರೀತಿ ವಿಚಾರ ಯುವತಿ ಮನೆಯವರಿಗೆ ಗೊತ್ತಾಗ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ ಕಳೆದ ನಾಲ್ಕೈದು ತಿಂಗಳ ಹಿಂದೆ ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ಸತೀಶ್ ವಿರುದ್ಧ ದೂರು ನೀಡಿದ್ರು. ಯುವತಿಯನ್ನ ಫಾಲೋ ಮಾಡಿ ಪೀಡಿಸ್ತಿರೋದಾಗಿ ಆರೋಪಿಸಿದ್ರು. ಠಾಣೆಗೆ ಕರೆಸಿಕೊಂಡಿದ್ದ ಇನ್ಸ್ ಪೆಕ್ಟರ್ ಬುದ್ಧಿ ಹೇಳಿ ಯುವತಿ ತಂಟೆಗೆ ಹೋಗದಂತೆ ವಾರ್ನ್ ಕೂಡ ಮಾಡಿದ್ರು.
ಅಂದಿನಿಂದ ಸುಮ್ಮನಿದ್ದ ಸತೀಶ್ 2025 ರ ಹೊಸ ವರ್ಷ ಜೀವನದಲ್ಲಿ ಹೊಸಬೆಳಕು ತರಬಹುದು ಅಂದುಕೊಂಡಿದ್ದ. ಮತ್ತೆ ಯುವತಿಯನ್ನ ಡಿಸೆಂಬರ್ 31 ರಿಂದ ನಿರಂತರವಾಗಿ ಸಂಪರ್ಕ ಮಾಡಿದ್ದಾನೆ. ಯುವತಿ ಮತ್ತೆ ಒಂದಾಗಬಹುದು ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಯಾಕಂದ್ರೆ ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ. ಆದ್ರೆ ಈತನ ಮಾತಿಗೆ ಆಕೆಯಿಂದ ಬಂದ ಉತ್ತರ ನೋ ಅಂತಾ. ಇದರಿಂದ ನೊಂದಿದ್ದ ಸತೀಶ್ ಜನವರಿ 2 ರಂದು ಸಂಜೆ ಮನೆಗೆ ಬಂದು ತಾಯಿ ಬಳಿ ಯಾಕೋ ತುಂಬಾ ಬೇಜಾರಾಗ್ತಿದೆ.. ರೆಸ್ಟ್ ಮಾಡ್ತಿನಿ ಅಂತಾ ಹೇಳಿ ಸಾವಿನ ಮನೆ ಸೇರಿದ್ದಾನೆ.
ಇದನ್ನೂ ಓದಿ:ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಅನುಮಾನಸ್ಪದ ಸಾವು: ಪ್ರಾಂಶುಪಾಲ ಸೇರಿ ಇಬ್ಬರು ಅಮಾನತು
ಸದ್ಯ ಅಸಜಹ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದೇನೆ ಹೇಳಿ ಲವ್ ಫೆಲ್ಯೂರ್ ಆದ್ರೆ ಸಾವು ಒಂದೇ ಪರಿಹಾರವಲ್ಲ. ಆದ್ರೆ ಸತೀಶನ ನಿರ್ಧಾರ ಆತನ ತಾಯಿಯನ್ನು ಒಬ್ಬಂಟಿ ಮಾಡಿದ್ದಂತು ದುರಂತವೇ ಸರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.