ಬೆಂಗಳೂರು: ನಗರದ ಕಾಟನ್ ಪೇಟೆಯಲ್ಲಿರುವ ಗಜಾನನ ಲಾಡ್ಜ್ ನಲ್ಲಿ ಪಾಗಲ್ ಪ್ರೇಮಿಯೊಬ್ಬ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಸವನಬಾಗೇವಾಡಿ ಮೂಲದ ಶಶಿಧರ್, ಲಾಡ್ಜ್ ನ ರೂಮಿನಲ್ಲಿ ಫ್ಯಾನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿದ್ದ ಶಶಿಧರ್  ಮೇಲೆ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದರು. ಪ್ರಕರಣ ಹಿನ್ನೆಲೆ ಬಸವನಬಾಗೇವಾಡಿ ಪೊಲೀಸ್ರು ಶಶಿಧರ್ ಬಂಧನಕ್ಕೆ ಮುಂದಾಗಿದ್ರು. ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದು ಹೆದರಿದ ಶಶಿಧರ್ ಬೆಂಗಳೂರಿಗೆ ಬಂದಿದ್ದ. ಕಳೆದ ಎರಡು ದಿನಗಳಿಂದ ಗಜಾನನ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ.  ಆದರೆ ನಿನ್ನೆ ರಾತ್ರಿಯೇ ರೂಮ್ ನಲ್ಲಿರೋ ಫ್ಯಾನ್ ಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ- ಪಕ್ಕದ‌ ಮನೆ ಅಂಕಲ್ ಕಾಮದ ಕಣ್ಣಿಗೆ ಯುವತಿ ಬಲಿ : ಪಾದದ ಧೂಳಿನಿಂದ ಆರೋಪಿ ಪತ್ತೆ


ಇಂದು ಲಾಡ್ಜ್ ಸಿಬ್ಬಂದಿ ರೂಮ್ ಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೂ ಮುನ್ನ ಇನ್ಸ್ಟಾಗ್ರಾಂ  ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಶಶಿಧರ್ ಆರು ವರ್ಷ ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾಳೆ. ಈಗ ಜಾತಿ ಹೆಸರಲ್ಲಿ ನನ್ನ ಹೆಂಡತಿ ಕುಟುಂಬದವರು ದೂರು ನೀಡಿದ್ದಾರೆ. ನನ್ನ ಸಾವಿಗೆ ಬಾಲಕಿ ಅಪ್ಪ, ಅಮ್ಮ ಮತ್ತು ಅವರ ಕಾಕಾ, ಅವರಜ್ಜಿ ಕಾರಣ ಅಂತಾ ವಿಡಿಯೋ ಹಾಕಿದ್ದಾನೆ. ಸಾಲದಕ್ಕೆ ಯುವತಿಯೊಂದಿಗಿನ ಖಾಸಗಿ ಫೋಟೋ ಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಪಾಗಲ್ ಪ್ರೇಮಿ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ.


ಇದನ್ನೂ ಓದಿ- ಜೆಡಿಎಸ್ ಮುಖಂಡನ ಹತ್ಯೆ ಸಂಚಿನ ಆರೋಪಿಗಳು ಅಂದರ್..! ʼಸುಫಾರಿ ಕಿಲ್ಲರ್ಸ್ʼ ರೋಚಕ ಕಥೆ ಬಯಲು


ಜೊತೆಗೆ ಪೊಲೀಸರ ಮೇಲೂ ಆರೋಪ ಮಾಡಿದ್ದು, ಪೊಲೀಸರು ನನ್ನ ಕಂಪ್ಲೇಂಟ್ ತಗೊಂತಿಲ್ಲ, ಅವರ ವಿರುದ್ಧವೂ ತನಿಖೆ ಮಾಡುವಂತೆ ವಿಡಿಯೋ ಮಾಡಿದ್ದಾನೆ. ಅದೆನೇ ಇರ್ಲಿ.. ಈ ಪ್ರಕರಣದಲ್ಲಿ ಬಾಲಕಿಯನ್ನು ವಿವಾಹವಾದ ಯುವಕನ ತಪ್ಪೋ ಅಥವಾ ಜಾತಿ ಹೆಸರಲ್ಲಿ ದೂರು ನೀಡಿ ಯುವಕನ ಸಾವಿಗೆ ಕಾರಣರಾದ ಬಾಲಕಿಯ ಕುಟುಂಬದವರ ತಪ್ಪೋ ಎಂಬ ಸತ್ಯ ಪೊಲೀಸ್ ತನಿಖೆ ನಂತರ ಬಯಲಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.