ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಜನಪ್ರಿಯ ಮಾಲ್‌ನಲ್ಲಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ಅವರ ವಿಡಿಯೋಗಳನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ಬಿ.ಟೆಕ್ ಪದವೀಧರನಾದ 23 ವರ್ಷದ ಐಟಿ ವೃತ್ತಿಪರ ಅಭಿಮನ್ಯು ಬಂಧಿತ ಆರೋಪಿ. ಈ ವ್ಯಕ್ತಿಯನ್ನು ಅದೇ ದಿನ ಐಪಿಸಿಯ ಸೆಕ್ಷನ್ 354 (C) (Voyeurism), 419 (Impersonation) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 E ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಲಮಸ್ಸೆರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಲೋಕಸಭಾದಿಂದ ಕಾಂಗ್ರೆಸ್‌ನ ಅಧೀರ್ ಚೌಧರಿ ಅಮಾನತು


ಕೊಚ್ಚಿಯ ಲುಲು ಮಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇನ್ಫೋಪಾರ್ಕ್ ಮೂಲದ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿಯು 'ಬುರ್ಖಾ' ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ತನ್ನ ಮೊಬೈಲ್ ಅನ್ನು ಅಲ್ಲಿ ಇರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ತನ್ನ ಫೋನ್ ಅನ್ನು ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ, ದೃಶ್ಯಗಳನ್ನು ರೆಕಾರ್ಡ್ ಮಾಡಲು ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ನಂತರ ಅಲ್ಲಿಂದ ಹೊರಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದ. ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್‌ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಮುಂದುವರೆದ ಗದ್ದಲ ಗಲಾಟೆ


ವಿಚಾರಣೆ ವೇಳೆ ಆರೋಪಿ ಮಹಿಳೆಯ ವೇಷ ಧರಿಸಿದ್ದು, ವಾಶ್‌ರೂಮ್‌ನಲ್ಲಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ನಂತರ ಆರೋಪಿಯ ಬುರ್ಖಾ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.