ಬೆಂಗಳೂರು: ಆಸ್ತಿ ವಿಚಾರಕ್ಕಾಗಿ ಪಾಪಿ ಅಣ್ಣನೊಬ್ಬ ತಮ್ಮನನ್ನೇ ಚಾಕುವಿನಿಂದ ಇರಿದು, ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 31 ವರ್ಷದ ವಿನಯ್ ಕೊಲೆಯಾದ ದುರ್ದೈವಿ. ಸತೀಶ್ ಎಂಬಾತನೇ ಒಡಹುಟ್ಟಿದ ತಮ್ಮನನ್ನು ಕೊಂದ ಕೊಲೆಗಡುಕ.


COMMERCIAL BREAK
SCROLL TO CONTINUE READING

ಕಾಮಾಕ್ಷಿಪಾಳ್ಯದ ಕಾವೇರಿಪುರಂನಲ್ಲಿ ಈ ಘಟನೆ ನಡೆದಿದ್ದು, ಇಬ್ಬರ ನಡುವೆ ಭಾಗವಾಗಬೇಕಿದ್ದ ಸ್ವಂತ ಮನೆ ಸೇರಿ ಆಸ್ತಿಯು ಸಹ ಇತ್ತು. ಇತ್ತ ಅಣ್ಣ ಸತೀಶ್ ಮದುವೆಯಾಗಿ ಹೆಂಡತಿ ಜೊತೆ ವಾಸವಿದ್ದ. ಕೊಲೆಯಾದ ವಿನಯ್ ಕುಮಾರ್ ತಂದೆ-ತಾಯಿ ಜೊತೆ ಇದ್ದುಕೊಂಡು ಅವರನ್ನು ನೋಡಿಕೊಳ್ಳುತ್ತಿದ್ದ. ಸತೀಶ್ ಬೇರೆ ಮನೆ ಮಾಡಿದ ಮೇಲೆ ಆಸ್ತಿ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ಆದರೆ, ತಂದೆ-ತಾಯಿ ಬುದ್ದಿ ಹೇಳಿ ಇಬ್ಬರನ್ನು ಸುಮ್ಮನಾಗಿಸುತ್ತಿದ್ದರು.‌ ಇತ್ತಿಚೇಗೆ ವಿನಯ್‍ಗೆ ಯುವತಿಯೊಬ್ಬಳ ಜೊತೆ ನಿಶ್ಚಿತಾರ್ಥವಾಗಿ ಮುಂದಿನ ತಿಂಗಳು ಮದುವೆ ತಯಾರಿಯಲ್ಲಿದ್ದ.


ಇದನ್ನೂ ಓದಿ: 'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'


ಇದು ಸತೀಶನ ಕಣ್ಣು ಕೆಂಪಗಾಗಿಸಿತ್ತು. ವಿನಯ್ ಮದುವೆಯಾದರೆ ಗಂಡ-ಹೆಂಡತಿ ಸೇರಿ ಆಸ್ತಿ ಕೇಳುತ್ತಾರೆ. ಆಗ ಆಸ್ತಿ ಭಾಗ ಮಾಡಿ ತಮ್ಮನಿಗೂ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತೆ ಅಂತಾ ಸತೀಶ ಯೋಚಿಸತೊಡಗಿದ್ದ. ಹೇಗಾದ್ರೂ ಮಾಡಿ ವಿನಯ್ ನನ್ನು ಕೊಂದರೆ ಇಡೀ ಆಸ್ತಿಯನ್ನು ತಾನೇ ಅನುಭವಿಸಬಹುದು ಅಂತಾ ಪ್ಲಾನ್ ಮಾಡಿದ್ದ. ಹೀಗಾಗಿ ಮಂಗಳವಾರ ವಿನಯ್ ಬಳಿ ತೆರಳಿದ ಸತೀಶ್ ಜಗಳ ತೆಗೆದಿದ್ದಾನೆ. ಜಗಳದ ಭರದಲ್ಲಿ ಮೊದಲೇ ಪ್ಲಾನ್ ಮಾಡಿದ ಹಾಗೆ ಚೂರಿಯಿಂದ ಇರಿದು ವಿನಯ್ ನನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.‌ ಇನ್ನೂ ವಿನಯ್‍ನನ್ನು ಸತೀಶ್ ಕೊಂದಿದ್ದಾನೆ ಎಂದು ತಾಯಿ ಜಯಮ್ಮ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಸತೀಶನನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Food Poisoning: ಹುಟ್ಟುಹಬ್ಬದ ಹಳಸಿದ ಬಿರಿಯಾನಿ ಸೇವಿಸಿ 24 ಜನ ಅಸ್ವಸ್ಥ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.