'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ‘ಮೈಸೂರು ದಸರಾ-2022’ ಉನ್ನತ ಮಟ್ಟದ ಸಭೆ ನಡೆಯಿತು

Written by - Puttaraj K Alur | Last Updated : Jul 19, 2022, 08:13 PM IST
  • ದಸರಾ ಪೂರ್ವಭಾವಿ ಸಭೆ ಕಾರ್ಯಸೂಚಿ ಪಟ್ಟಿಯಲ್ಲಿ ಹಿಂದಿನ ವರ್ಷದ ದಿನಾಂಕ ಮುದ್ರಣ
  • ರಾಜ್ಯದ ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದಿದೆ ಎಂದ ಸಿದ್ದರಾಮಯ್ಯ
  • ಸರ್ಕಾರ ‘ಟೇಕ್ ಆಫ್’ ಆಗಿಲ್ಲವೆನ್ನುವುದಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೇ? ಎಂದು ಪ್ರಶ್ನೆ
'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ' title=
ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ‘ಮೈಸೂರು ದಸರಾ-2022’ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಪ್ರಸಕ್ತ ಸಾಲಿನ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು. ಆದರೆ ದಸರಾ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಹಿಂದಿನ ವರ್ಷದ ದಿನಾಂಕ ಮುದ್ರಿಸಿರುವುದು ದೊಡ್ಡ ಎಡವಟ್ಟಾಗಿತ್ತು. ಅಲ್ಲಿ 2022ರ ಬದಲು 2021 ಎಂದು ಮುದ್ರಿಸಲಾಗಿತ್ತು.  

ಇದನ್ನೂ ಓದಿ: ಸೋನಿಯಾ ಪರ ಕಾಂಗ್ರೆಸ್ ಹೋರಾಟ: ಇಟಲಿವರೆಗೆ ಪಾದಯಾತ್ರೆ ಮಾಡಿ ಎಂದ ಬಿಜೆಪಿ

ಇಸವಿ ದೋಷವಾಗಿರುವ ದಸರಾ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪಟ್ಟಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ ‘ರಾಜ್ಯದ ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ. ಸರ್ಕಾರ ‘ಟೇಕ್ ಆಫ್’ ಆಗಿಯೇ ಇಲ್ಲ ಎನ್ನುವುದಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ  ಬೇಕೇ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ

ಇತ್ತೀಚೆಗಷ್ಟೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಿ ಹೊರಡಿಸಿದ್ದ ಆದೇಶ ಪ್ರತಿಯಲ್ಲಿ ಅನೇಕ ಕನ್ನಡ ಅಕ್ಷರಗಳನ್ನು ತಪ್ಪು ತಪ್ಪಾಗಿ ಟೈಪಿಸಲಾಗಿತ್ತು. ಇದು ರಾಜ್ಯ ಸರ್ಕಾರವನ್ನು ನಗೆಪಾಟಲಿಗೆ ಈಡುಮಾಡಿತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News