ಬೆಂಗಳೂರು:  ಲೈಟರ್ ವಾಪಸ್ ಕೊಡಲಿಲ್ಲ ಎಂದಿದ್ದಕ್ಕೆ ಲಾಂಗ್ ನ್ನೇ ಕೈಗೆತ್ತಿಕೊಂಡಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.ಜೂನ್ 5ರಂದು ಇಲ್ಲಿನ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟಿನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ


COMMERCIAL BREAK
SCROLL TO CONTINUE READING

ಇದನ್ನೂ ಓದಿ: Spirulina Health Benefits: ಆರೋಗ್ಯ ಸಂಜೀವನಿ 'ಸ್ಪಿರುಲಿನಾ' ಬಗ್ಗೆ ನಿಮಗೆಷ್ಟು ಗೊತ್ತು?


ಆರಂಭದಲ್ಲಿ ಸಿಗೆರೇಟ್ ಹೊತ್ತಿಸಲು ಗ್ರಾಹಕರು ಲೈಟರ್ ನ್ನು ವಿನಿಮಯಮಾಡಿಕೊಂಡಿದ್ದಾರೆ.ಆದರೆ ಕುಡಿದ ಅಮಲಿನಲ್ಲಿದ್ದ ಸಂದರ್ಭದಲ್ಲಿ ಲೈಟರ್ ಪಡೆದಿದ್ದ ವ್ಯಕ್ತಿ ವಾಪಸ್ ಕೊಡಲು ನಿರಾಕರಿಸಿದ್ದಕ್ಕೆ, ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ.


ಇದನ್ನೂ ಓದಿ: Juice For Bad Cholesterol Control: ನಿತ್ಯ ಈ ಜ್ಯೂಸ್ ಸೇವಿಸಿ ಕೇವಲ 90 ದಿನಗಳಲ್ಲಿ ಕೊಲೆಸ್ಟ್ರಾಲ್ ಗೆ ಗುಡ್ ಬೈ ಹೇಳಿ


ಇದೆ ವೇಳೆ ನೆರೆಯ ಅಂಗಡಿಯವರು ಗಲಾಟೆಗೆ ನಿಂತ ಇಬ್ಬರು ವ್ಯಕ್ತಿಗಳನ್ನು ಬೈದು ಸಮಾಧಾನಪಡಿಸಿದ್ದಾರೆ, ಆದರೆ ಸ್ವಲ್ಪ ಸಮಯದಲ್ಲೇ ಲೈಟರ್ ಕೊಟ್ಟಿದ್ದ ವ್ಯಕ್ತಿ ಮಾರಾಕಾಸ್ತ್ರ ಸಮೇತ ವಾಪಸ್ಸಾಗಿ ಲೈಟರ್ ಕೊಡಲ್ಲ ಎಂದವನ ಮೇಲೆ ಲಾಂಗ್ ಬೀಸಿದ್ದಾನೆ.ಈಗ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಚಾರವಾಗಿ ಬಸವೇಶ್ವರ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.