ಬೆಂಗಳೂರು: ರಾಜಶೇಖರ್ ಎಂಬಾತ‌ ಕೊಲೆ ಮಾಡಿ ಶವದೊಂದಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಹೇಶಪ್ಪ ಕೊಲೆಯಾದ ವ್ಯಕ್ತಿ. ಮೃತ ಮಹೇಶಪ್ಪ ಮಹಿಳಾ ಸೊಸೈಟಿ ಸೇರಿದಂತೆ‌ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಲವು ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಎನ್ನಲಾಗಿದೆ. ಹೀಗಾಗಿ ಹಣ  ಕಳೆದುಕೊಂಡಿದ್ದ ರಾಜಶೇಖರ್ ಈತನನ್ನು ಕೊಲೆ ಮಾಡಿದ್ದಾನೆ. ಸದ್ಯ ರಾಜಶೇಖರ್ ಮರ್ಡರ್ ಮಾಡಿ ಶವವನ್ನು ಕಾರಿನ ಮುಖಾಂತರ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.


COMMERCIAL BREAK
SCROLL TO CONTINUE READING

ಹತ್ಯೆಗೊಳಗಾದ ಮಹೇಶಪ್ಪ ನಂಜನಗೂಡಿನ ಹಿಮನಗುಂಡಿ ಗ್ರಾಮದನಾಗಿದ್ದು, ಆರೋಪಿ ರಾಜಶೇಖರನಿಗೆ 13 ವರ್ಷಗಳಿಂದ ಪರಿಚಿತನಾಗಿದ್ದ. ರಾಜಶೇಖರ್ ರಾಮಮೂರ್ತಿನಗರದ ಜಯಂತಿನಗರ ನಿವಾಸಿಯಾಗಿದ್ದಾನೆ. ಮೃತ ಮಹೇಶಪ್ಪ‌ ಸಹಕಾರ-ಸಂಘ ಸೇರಿ ವಿವಿಧ ಬ್ಯಾಂಕ್ ಗಳಲ್ಲಿ ಹಲವು ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದಿದ್ದ. ಹಣ‌ ಪಡೆದು ತಿಂಗಳುಗಳು ಕಳೆದರೂ ಸಹ ಲೋನ್ ಹಣ ಕೊಡಿಸದೆ ತೆಗೆದುಕೊಂಡ ಹಣವನ್ನೂ ಸಹ ವಾಪಸ್ ನೀಡಿದೆ ವಂಚಿಸಿದ್ದ ಎನ್ನಲಾಗಿದೆ. 


ಇದನ್ನೂ ಓದಿ- ಮಂಗಳೂರು ಸ್ಪೋಟ ಪ್ರಕರಣದ ಜಾಲವನ್ನು ಸರ್ಕಾರ ಬೇಧಿಸಲಿದೆ : ಸಿಎಂ


ಆರೋಪಿ ರಾಜಶೇಖರ್  ಹಾಗೂ ಆತನ ತಾಯಿ ಮಹೇಶ್ವಪ್ಪನೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗಿದ್ದ‌ರು. ಆದರೆ ಲೋನ್ ಕೊಡಿಸದೆ ವಂಚಿಸಿದ್ದರಿಂದ ರಾಜಶೇಖರ್ ತಮ್ಮ ‌ಮನೆ ಮಾರಾಟ ಮಾಡಿ ಇತರರಿಗೆ ಹಣ ನೀಡಿದ್ದ. ಸ್ನೇಹಿತ ಮಾಡಿದ ವಂಚನೆಯಿಂದಾಗಿ ಕೋಟಿಗಟ್ಟಲೇ ಹಣ ಕಳೆದುಕೊಂಡಿರುವುದಾಗಿ ಪೊಲೀಸರ ಮುಂದೆ ರಾಜಶೇಖರ್ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ‌.


ಇದನ್ನೂ ಓದಿ- ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ : ನಕಲಿ ಆಧಾರ್ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ


ಹಣ ನೀಡುವುದಾಗಿ ಸಬೂಬು ಹೇಳಿಕೊಂಡು ಬಂದು ಊರು ಸೇರಿದ್ದ‌ ಮಹೇಶ್ವಪ್ಪನನ್ನ ನಿನ್ನೆ ಕಾರಿನಲ್ಲಿ ತೆರಳಿ ನಗರಕ್ಕೆ ರಾಜಶೇಖರ್ ಕರೆತಂದಿದ್ದ. ಆವಲಹಳ್ಳಿ ಬಳಿ ಕಾರಿನಲ್ಲೇ ಇಬ್ಬರ‌‌ ನಡುವೆ ಕಿತ್ತಾಟವಾಗಿದ್ದು  ಕೋಪದಿಂದ ರಾಡ್ ನಿಂದ‌‌ ಮಹೇಶಪ್ಪನ ತಲೆಗೆ ಥಳಿಸಿದ್ದ ಪರಿಣಾಮ ಕಾರಿನಲ್ಲೇ ಮೃತಪಟ್ಟಿರುವುದಾಗಿ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ‌ ನೀಡಿದ್ದಾರೆ. ಸದ್ಯ ಕೊಲೆ‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.