ಆಟೋ ರಿಕ್ಷಾದೊಳಗೆ ಸ್ಪೋಟ ನಡೆದಿದ್ದು ಆಕಸ್ಮಿಕವಲ್ಲ, ಇದೊಂದು ಉಗ್ರ ಕೃತ್ಯ : ಡಿಜಿಪಿ ಪ್ರವೀಣ್ ಸೂದ್

Mangaluru Auto Explosion : ಮಂಗಳೂರು ನಗರದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದೊಳಗೆ ಸ್ಪೋಟವುಂಟಾದ ಘಟನೆಗೆ ಸಂಬಂಧಿಸಿದಂತೆ, ಈ ಸ್ಫೋಟವು ಆಕಸ್ಮಿಕವಲ್ಲ. ಆದರೆ ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸೆಗಲಾಗಿದೆ. ಇದೊಂದು ಉಗ್ರ ಕೃತ್ಯವಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. 

Written by - Chetana Devarmani | Last Updated : Nov 20, 2022, 10:53 AM IST
  • ಮಂಗಳೂರು ನಗರದ ಆಟೋ ರಿಕ್ಷಾದೊಳಗೆ ಸ್ಪೋಟ ಪ್ರಕರಣ
  • ಇದು ಆಕಸ್ಮಿಕವಲ್ಲ, ಇದೊಂದು ಉಗ್ರ ಕೃತ್ಯವಾಗಿದೆ
  • ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ
ಆಟೋ ರಿಕ್ಷಾದೊಳಗೆ ಸ್ಪೋಟ ನಡೆದಿದ್ದು ಆಕಸ್ಮಿಕವಲ್ಲ, ಇದೊಂದು ಉಗ್ರ ಕೃತ್ಯ : ಡಿಜಿಪಿ ಪ್ರವೀಣ್ ಸೂದ್  title=
ಡಿಜಿಪಿ ಪ್ರವೀಣ್ ಸೂದ್

ದಕ್ಷಿಣ ಕನ್ನಡ : ಮಂಗಳೂರು ನಗರದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದೊಳಗೆ ಸ್ಪೋಟವುಂಟಾದ ಘಟನೆಗೆ ಸಂಬಂಧಿಸಿದಂತೆ, ಈ ಸ್ಫೋಟವು ಆಕಸ್ಮಿಕವಲ್ಲ. ಆದರೆ ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸೆಗಲಾಗಿದೆ. ಇದೊಂದು ಉಗ್ರ ಕೃತ್ಯವಾಗಿದೆ. ಈ ಬಗ್ಗೆ ರಾಜ್ಯ ಪೊಲೀಸರು ಕೇಂದ್ರ ತನಿಖಾ ತಂಡದೊಂದಿಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. 

ಇದನ್ನೂ ಓದಿ : Ration Cardನಲ್ಲಿ ʻದತ್ತಾʼ ಬದಲು ʻಕುತ್ತಾʼ.! ಸಿಟ್ಟಿಗೆದ್ದ ವ್ಯಕ್ತಿ, ಅಧಿಕಾರಿ ಎದುರು ಗಲಾಟೆ

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಆಕಸ್ಮಿಕ ಸ್ಫೋಟವಲ್ಲ. ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಮಾಡಿದ ಭಯೋತ್ಪಾದನೆಯ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.

 

 

ಕಂಕನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್‌ವೆಲ್‌ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್‌ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗಗಳು ಸುಟ್ಟು ಹೋಗಿತ್ತು.

ಇದನ್ನೂ ಓದಿ : ಇಂದು ಮತ್ತೆ ಏರಿಕೆಯಾಗಿದೆಯೇ ತರಕಾರಿ ಬೆಲೆ: ಇಲ್ಲಿದೆ ನೋಡಿ ಸಂಪೂರ್ಣ ದರ ಪಟ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News