ಬೆಂಗಳೂರು: ಒಂದು ಕ್ಷಣದ ಮೋಹಕ್ಕೆ ಬಿದ್ದರೆ ಜೀವನದಲ್ಲಿ ಏನೆಲ್ಲಾ ಅನುಭವಿಸಬಹುದೆಂಬುದಕ್ಕೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿರುವ ಪ್ರಸಂಗವೇ ಸಾಕ್ಷಿ.ರವಿ ಜಯರಾಮ್ ಎಂಬಾತ ಸುಂದರಿಯೊಬ್ಬಳ ಮೋಹಕ್ಕೆ ಬಿದ್ದು ಅತಂತ್ರನಾಗಿದ್ದಾನೆ. ಹನಿಟ್ರ್ಯಾಪ್‌ಗೆ ಒಳಗಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!


2018 ರಲ್ಲಿ ಪಾರ್ಟಿಗೆ ಹೋಗಿದ್ದ ರವಿ ಜಯರಾಮ್ ಗೆ ಭವಾನಿ ಎಂಬಾಕೆಯ ಪರಿಚಯವಾತ್ತು. ಇಬ್ಬರ ನಡುವೆ ಬಹುಬೇಗ ಅಟ್ರಾಕ್ಷನ್ ಆಗಿ ನಂಬರ್ ಶೇರ್ ಮಾಡಿಕೊಂಡಿದ್ದರು. ನಂತರ ಒಬ್ಬರಿಗೊಬ್ಬರು ಆಪ್ತರಾಗುತ್ತಾ ಹೋಗಿದ್ದರು. ಭವಾನಿಗೆ ಆರೋಗ್ಯ ಸಮಸ್ಯೆ ಇದ್ದದ್ದರಿಂದ ಹಲವು ಬಾರಿ ರವಿ ಜಯರಾಮ್ ಸಹಾಯ ಮಾಡಿದ್ದ.ನಂತರ ಇಬ್ಬರಲ್ಲಿ ಆಪ್ತತೆ ಬೆಳೆದು ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು.ಮೊದಲಿಗೆ ಏನೂ ತೊಂದರೆ ಆಗೋದಿಲ್ಲ ಎಂದುಕೊಂಡಿದ್ದ ರವಿಗೆ ಭವಾನಿಯ ಅಸಲಿ ಚಹರೆ ಗೊತ್ತಾಗಿತ್ತು.ರವಿಯ ಖಾಸಗಿ ವಿಡಿಯೋ ಹಾಗೂ ಫೊಟೋಗಳನ್ನ ಇಟ್ಟುಕೊಂಡಿದ್ದ ಭವಾನಿ ಬ್ಲಾಕ್ ಮೇಲ್ ಗೆ ಇಳಿದಿದ್ದಾಳೆ.ಅಷ್ಡೇ ಅಲ್ಲಾ ಮೊದಲು ರವಿ ಜಯರಾಮ್ ನ ಪತ್ನಿಗೂ ಫೊಟೋಸ್ ಕಳುಹಿಸಿದ್ದಾಳೆ. ಇದರಿಂದ ರವಿ ಜಯರಾಮ್ ನಿಂದ ಆತನ ಪತ್ನಿ ಸಹ ದೂರವಾಗಿದ್ದಳು. ರವಿ ಹಣ ನೀಡದೆ ಇದ್ದಾಗ ಕೆಲಸದ ಜಾಗಕ್ಕೆ ಬಂದು ಭವಾನಿ ಕಿರಿಕ್ ಮಾಡಿದ್ದಾಳೆ. ಇದರಿಂದ ಮುಜುಗರಗೊಂಡ ಸಂಸ್ಥೆ ರವಿಯನ್ನ ಕೆಲಸದಿಂದ ತೆಗೆದು ಹಾಕಿದೆ.


ಇದನ್ನೂ ಓದಿ: ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್


ರವಿಯ ತಿಂಗಳ ಸಂಬಳ ಎರಡು ಲಕ್ಷ ತೊಂಬತ್ತು ಸಾವಿರ ರೂಪಾಯಿಗಳು ಇತ್ತು. ಆದರೆ ಭವಾನಿಯಿಂದ ರವಿಯ ಕೆಲಸವೂ ಹೋಯ್ತು.ಪತ್ನಿಯೂ ಕೈ ಬಿಟ್ಟು ಹೋಗಿದ್ದಳು. ಇಷ್ಟಕ್ಕೆ ಸುಮ್ಮನಾಗದ ಭವಾನಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲಾತಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ.ಇದರಿಂದ ಬೆದರಿದ್ದ ರವಿ ಹಂತ ಹಂತವಾಗಿ 20 ಲಕ್ಷದವರೆಗೂ ಹಣ ನೀಡಿದ್ದಾನೆ. ಭವಾನಿಯ ಈ ಆಟಕ್ಕೆ ಆಕೆಯ ಕುಟುಂಬವು ಸಹ ಸಾಥ್‌ ನೀಡಿತ್ತು ಎನ್ನಲಾಗಿದೆ. ಇನ್ನೂ ಭವಾನಿಗೆ ಎರಡು ಮದ್ವೆಯಾಗಿದ್ದು, ಒಂದು ಡಿವೋರ್ಸ್ ಆಗಿದೆ. ಸದ್ಯ ಎರಡನೇ ಮದುವೆ ಸಹ ನ್ಯಾಯಾಲಯದಲ್ಲಿ ವಿಚ್ಛೇಧನ ಅರ್ಜಿ ಬಾಕಿ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ವಿಚಾರಿಸಲು ಠಾಣೆಗೆ ಅಥವಾ ಕಚೇರಿಗೆ ಕರೆಸಿದರೆ ಹಿರಿಯ ಅಧಿಕಾರಿಗಳ ಮುಂದೆಯೇ ಭವಾನಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬೆದರಿಕೆ ಹಾಕಿದ್ದಾಳಂತೆ. ಸದ್ಯ ಈಕೆಯ ಕಾಟ್‌ ತಾಳಲಾರದೇ ರವಿ ಜಯರಾಮ್ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದಾನೆ .ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.