ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್

ಬಿಗ್‌ಬಾಸ್‌ ಸ್ಪರ್ಧಿಗಳು ದಿನವೂ ಟಾಸ್ಕ್‌ ಟಾಸ್ಕ್‌ ಅಂತ ತಲೆಕೆಡಿಸಿಕೊಂಡು ದೊಡ್ಮನೆ ತುಂಬಾ ಓಡಾಡಿ ಧಣಿಯುತ್ತಿದ್ದರು. ಕೆಲವೊಂದು ಬಾರಿ ರುಚಿ ರುಚಿ ಊಟಕ್ಕೂ ಸಹ ಟಾಸ್ಕ್‌ ಕಂಪ್ಲೀಟ್‌ ಮಾಡ್ಬೇಕಾಗಿತ್ತು. ಇದೀಗ ಸ್ವತಃ ಕಿಚ್ಚ ಸುದೀಪ್‌ ಅವರೇ ದೊಡ್ಮನೆ ಮಂದಿಗೆ ತಮ್ಮ ಕೈಯಾರೆ ಅಡುಗೆ ಮಾಡಿದ ಕಳುಹಿಸಿ ಕೊಟ್ಟಿದ್ದಾರೆ. 

Written by - Krishna N K | Last Updated : Nov 19, 2022, 03:23 PM IST
  • ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಅಡುಗೆ ಮಾಡಿ ಉಣಬಡಿಸಿದ ಕಿಚ್ಚ
  • ಸುದೀಪ್‌ ಕೈರುಚಿ ಸವಿದ ದೊಡ್ಮನೆ ಮಂದಿ
  • ಟಾಸ್ಕ್‌ ಟಾಸ್ಕ್‌ ಅಂತಿದ್ದ ಮಂದಿ ಕಿಚ್ಚನ ಕೈರುಚಿ ಸವಿದು ಕೂಲ್‌
ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್ title=

BBK9 : ಬಿಗ್‌ಬಾಸ್‌ ಸ್ಪರ್ಧಿಗಳು ದಿನವೂ ಟಾಸ್ಕ್‌ ಟಾಸ್ಕ್‌ ಅಂತ ತಲೆಕೆಡಿಸಿಕೊಂಡು ದೊಡ್ಮನೆ ತುಂಬಾ ಓಡಾಡಿ ಧಣಿಯುತ್ತಿದ್ದರು. ಕೆಲವೊಂದು ಬಾರಿ ರುಚಿ ರುಚಿ ಊಟಕ್ಕೂ ಸಹ ಟಾಸ್ಕ್‌ ಕಂಪ್ಲೀಟ್‌ ಮಾಡ್ಬೇಕಾಗಿತ್ತು. ಇದೀಗ ಸ್ವತಃ ಕಿಚ್ಚ ಸುದೀಪ್‌ ಅವರೇ ದೊಡ್ಮನೆ ಮಂದಿಗೆ ತಮ್ಮ ಕೈಯಾರೆ ಅಡುಗೆ ಮಾಡಿದ ಕಳುಹಿಸಿ ಕೊಟ್ಟಿದ್ದಾರೆ. 

ಹೌದು.. ಸದಾ ಟಾಸ್ಕ್‌ ಅಂತ ಒಬ್ಬರ ಮೇಲೆ ಒಬ್ಬರು ಹೊಡೆದಾಡಿಕೊಂಡು, ಬೈದುಕೊಂಡು ಚೀರಾಡುತ್ತಿದ್ದ ಮನೆ ಮಂದಿ ಸದ್ಯ ಕೂಲಾಗಿದ್ದಾರೆ. ಇದಕ್ಕೆ ಕಾರಣ ಕಿಚ್ಚ ಸುದೀಪ್‌ ಅವರು. ಪ್ರತಿ ಬಿಗ್‌ಬಾಸ್‌ ಸೀಸನ್‌ಗಳಲ್ಲಿ ಕಿಚ್ಚ ಈ ರೀತಿ ರುಚಿ ರುಚಿಯಾದ ಅಡುಗೆ ಮಾಡಿ ಸ್ಪರ್ಧಿಗಳಿಗೆ ಉಣಬಡಿಸುತ್ತಾರೆ. ಇದೀಗ ಮತ್ತೊಮ್ಮೆ ಕಿಚ್ಚ್‌ ಕಿಚನ್‌ ಹೊಕ್ಕು ಸೂಪರ್‌ ಟೇಸ್ಟಿ ಫುಡ್‌ ರೆಡಿಮಾಡಿ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. 

ಇದನ್ನೂ ಓದಿ:  ಮಲೈಕಾ ಅರೋರಾ ಜೊತೆ ಅರ್ಜುನ್‌ ಕಪೂರ್‌ ʼಬೇಬಿ ಡೇ ಔಟ್..!

ಈ ಕುರಿತು ಕಲರ್ಸ್‌ ಕನ್ನಡ ವಿಡಿಯೋ ಒಂದು ಹಂಚಿಕೊಂಡಿದೆ. ವಿಡಿಯೋದಲ್ಲಿ ಸುದೀಪ್ ಕಿಚನ್​ನಲ್ಲಿ ಅಡುಗೆ ಮಾಡುತ್ತಿದ್ದರೆ, ಇತ್ತ ಮನೆ ಮಂದಿ ಯಾವಾಗಪ್ಪಾ ಕಿಚ್ಚನ ಕೈ ರುಚಿಯ ಅಡುಗೆ ತಿನ್ನುತ್ತೇವೆ ಅಂತ ಕಾಯುತ್ತಿದ್ದರು. ಕೊನೆಗೆ ಸ್ಪರ್ಧಿಗಳ ಫೇವರಿಟ್‌ ಫುಡ್‌ ರೆಡಿಮಾಡಿ ಬಾಕ್ಸ್‌ನಲ್ಲಿಟ್ಟು ಅದರ ಮೇಲೆ ಸ್ಪರ್ಧಿಗಳ ಹೆಸರು ಬರೆದು ಬಿಗ್‌ಹೌಸ್‌ಗೆ ಕಳುಹಿಸಿಕೊಟ್ಟರು. ಇನ್ನು ಮನೆಮಂದಿ ಓಡಿ ಹೋಗಿ ತಮ್ಮ ತಮ್ಮ ಬಾಕ್ಸ್‌ ತೆಗೆದುಕೊಂಡು ಬಗೆ ಬಗೆ ಅಡುಗೆಯನ್ನು ಮನಸಾಸೆ ಸವಿದರು.

ಇನ್ನು ಕಿಚ್ಚನ ಕೈ ರುಚಿ ಸವಿದ ಸ್ಪರ್ಧಿಗಳು ಸಂತೃಪ್ತರಾಗಿ ಸುದೀಪ್‌ ಅವರಿಗೆ ಮನಸಾರೆ ಧನ್ಯವಾದಗಳನ್ನು ಹೇಳಿದರು. ಕೆಲವರು ಹಾರ್ಟ್‌ ಸಿಂಬಲ್‌ ತೋರಿಸಿ ಲವ್‌ ಯೂ ಕಿಚ್ಚ ಸರ್‌ ಅಂದ್ರು. ಒಟ್ಟಾರೆಯಾಗಿ ಟಾಸ್ಕ್‌ನಲ್ಲಿ ಆಟವಾಡಿ ದಣಿದು ಎಲ್ಲಿ ಅಡುಗೆ ಮಾಡೋದಪ್ಪಾ ಅಂತ ಕೂಡುತ್ತಿದ್ದ ಮನೆಮಂದಿ ತರತರನಾದ ಅಡುಗೆ ತಿಂದು ತೆಗಿದರು. ಇನ್ನು ಕಿಚ್ಚನ ಕೈರುಚಿ ಬೇರೆ ಕೇಳ್ಬೇಕೆ ನಟನೆಯಲ್ಲಿ ಹೇಗೆ ವಿಧ ವಿಧವಾದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರೋ ಹಾಗೇ ಅಡುಗೆಯಲ್ಲಿಯೂ ಸಹ ಅಭಿನಯ ಚಕ್ರವರ್ತಿ ಒಂದು ಕೈ ಮೇಲೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News