ತುಮಕೂರು : ಮಂಗಳೂರು ಸ್ಪೋಟ ಪ್ರಕರಣದಲ್ಲಿ ನಕಲಿ ಆಧಾರ ಕಾರ್ಡ್ ಬಳಕೆ ಹಿನ್ನಲೆ ಅಸಲಿ ವ್ಯಕ್ತಿ ತುಮಕೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ಹುಟಗಿಯನ್ನು ತುಮಕೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರೇಮ್ ರಾಜ್ ಹುಟಗಿ ಎಂಬ ವ್ಯಕ್ತಿಯ ಆಧಾರ ಕಾರ್ಡ್ ಬಳಕೆ ಸ್ಫೋಟ ಪ್ರಕರಣದಲ್ಲಿ‌ಬಳಕೆ ಮಾಡಲಾಗಿತ್ತು. ಅಸಲಿ ಪ್ರೇಮ್ ರಾಜ್ ಹುಟಗಿ, ಹುಬ್ಬಳ್ಳಿ ಮೂಲದ ವ್ಯಕ್ತಿಯಾಗಿದ್ದಾರೆ. ರೈಲ್ವೇ ಇಲಾಖೆಯಲ್ಲಿ ಟ್ರಾಕ್ ಮ್ಯಾನ್ ಆಗಿ‌ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ 6 ತಿಂಗಳಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಒಂದು ಬಾರಿ ಧಾರವಾಡ -ಹುಬ್ಬಳಿಗೆ ಹೋಗುವ ವೇಳೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ. ಮತ್ತೊಮ್ಮೆ ಹುಬ್ಬಳ್ಳಿ- ಹಾವೇರಿಗೆ ಬರುವ ವೇಳೆ ಮತ್ತೊಂದು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಧಾರವಾಡ ಹಾಗೂ ಹಾವೇರಿ ಪ್ರಯಾಣಿಸಿದ್ದರು.


ಇದನ್ನೂ ಓದಿ : ಮಂಗಳೂರು ಆಟೋ ಸ್ಫೋಟ ಉಗ್ರರ ಕೃತ್ಯ: ಡಿಜಿಪಿ ಪ್ರವೀಣ್ ಸೂದ್


ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬೆಳಗ್ಗೆ ಪ್ರೇಮ್ ರಾಜ್ ಗೆ ಕರೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್ ತುಮಕೂರು ಎಸ್ಪಿ ಭೇಟಿ ಮಾಡಲು ಸೂಚಿಸಿದ್ದಾರೆ. ಅದರಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಭೇಟಿಯಾದ. ಪ್ರೇಮ್ ಕುಮಾರ್ ನ ವಿಚಾರಣೆ ನಡೆಸಿದ್ದಾರೆ. ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ. ಪೊಲೀಸರ ವಿಚಾರಣೆಗೆ ಸ್ಪಂದಿಸುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.


ಇದನ್ನೂ ಓದಿ : Mangaluru Blast: ರಾಜ್ಯ ಗುಪ್ತಚರ ವಿಭಾಗ & ಗೃಹ ಇಲಾಖೆಯ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.