ಚಿಕ್ಕಪ್ಪನ ಕೊಲೆ ಮಾಡಿ ಅಜ್ಞಾತ ಸ್ಥಳದಲ್ಲಿದಿಂದ ವಿಡಿಯೋ ಹರಿ ಬಿಟ್ಟ ಮತೀನ್

ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಅಯೂಬ್ ಖಾನ್ ಹತ್ಯೆ ಕೇಸ್ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ಕೊಲೆ ಆರೋಪಿ ಮತೀನ್ ಖಾನ್ ವೀಡಿಯೋ ಹರಿಬಿಟ್ಟಿದ್ದಾನೆ.
ಬೆಂಗಳೂರ:ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಅಯೂಬ್ ಖಾನ್ ಹತ್ಯೆ ಕೇಸ್ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ಕೊಲೆ ಆರೋಪಿ ಮತೀನ್ ಖಾನ್ ವೀಡಿಯೋ ಹರಿಬಿಟ್ಟಿದ್ದಾನೆ.
ಈ ವಿಡಿಯೋದಲ್ಲಿ ಮತೀನ್ ಖಾನ್ "ನನ್ನ ಮೇಲೆ ಹಲ್ಲೆ ಮಾಡಲು ಅವರೇ ಬಂದ್ರು, ನನ್ನ ಚಿಕ್ಕಪ್ಪ ಅಯೂಬ್ ಖಾನ್ ಹಾಗೂ ಅವರ ಮಗ ಹಲ್ಲೆಗೆ ಮಾಡಿದ್ದಾರೆ.ಜೊತೆಗೆ ಅಯೂಬ್ ಖಾನ್ ಮಗನೇ ಮೊದಲಿಗೆ ಲಾಂಗ್ ನಲ್ಲಿ ಹಲ್ಲೆ ಮಾಡಲು ಬಂದ. ಏರಿಯಾದಲ್ಲಿ ಇರಬೇಡ ಅಂತ ಅಯೂಬ್ ಖಾನ್ ಯಾವಾಗಲೂ ಬೈತಿದ್ರು.ಸುಖಾಸುಮ್ಮನೇ ನನ್ನ ಮೇಲೆ ಪೊಲೀಸರಿಗೆ ದೂರು ಕೊಡ್ತಿದ್ರು.ಹಲವು ಬಾರಿ ಸ್ಟೇಷನ್ ಗೆ ಕರೆಸಿ ವಾರ್ನ್ ಮಾಡಿಸಿದ್ದಾರೆ.ಮೊನ್ನೆ ಘಟನೆ ನಡೆದಾಗ ನಾನು ನಮಾಜ್ ಮುಗಿಸಿ ಬರ್ತಿದ್ದೆ, ಅವರು ಹಾಗೂ ಅವರ ಮಗ ಸಹ ನಮಾಜ್ ಮುಗಿಸಿ ಬರ್ತಿದ್ರು ಎಂದು ಹೇಳಿದ್ದಾನೆ.
ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ
ಇನ್ನೂ ಮುಂದುವರೆದು 'ಬೇಕರಿ ಬಳಿ ನಿಂತಿದ್ದ ನನಗೆ ಮೊದಲಿಗೆ ಅವರೇ ಬೈದ್ರು,ಅವರು ಬೈತಿದ್ದಾಗೆ ಅವರ ಮಗ ನನ್ನ ಮೇಲೆ ಹಲ್ಲೆ ಮಾಡಲು ಎಂಬುದಾಗಿ ಮತೀನ್ ವಿಡಿಯೋ ಹೇಳಿಕೆ ನೀಡಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ