ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್  ಅವರ ವಿರುದ್ದ ವಕೀಲ ಎಸ್.ನಟರಾಜ ಶರ್ಮಾ  ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ. ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. 

Written by - Ranjitha R K | Last Updated : Jul 13, 2022, 10:07 AM IST
  • ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ದೂರು
  • ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ
  • ಶೀಘ್ರ ಕ್ರಮಕ್ಕೆ ಆಗ್ರಹ
 ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್  ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ  title=
complaint againt acb adgp

ಬೆಂಗಳೂರು : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ಸಿಎಂಗೆ ಮನವಿ ಮಾಡಲಾಗಿದೆ.  ವಕೀಲ ಎಸ್.ನಟರಾಜ ಶರ್ಮಾ ಎಂಬವರು ಸೀಮತ್ ಕುಮಾರ್ ಸಿಂಗ್ ವಿರುದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರಿಗೆ ದೂರು ನೀಡಿದ್ದಾರೆ. ಎಸಿಬಿಗೆ ತಾವು ನೀಡಿದ್ದ ಪ್ರಕರಣಗಳ ಮಾಹಿತಿ ಸಮೇತ ಸಿಎಂಗೆ ದೂರು  ಸಲ್ಲಿಸಿದ್ದಾರೆ. 

ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್  ಅವರ ವಿರುದ್ದ ವಕೀಲ ಎಸ್.ನಟರಾಜ ಶರ್ಮಾ  ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ. ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. 

ಇದನ್ನೂ ಓದಿ : Bangalore Crime : ಬೆಂಗಳೂರಿನಲ್ಲಿ ಮಾಜಿ ಶಾಸಕ ಮನೆ ಹಿಂದೆಯೇ ಗಾಂಜಾ ಬೆಳೆದ ಕಿಡಿಗೇಡಿಗಳು!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಎಸಿಬಿಗೆ ತಾವು ನೀಡಿದ್ದ ಪ್ರಕರಣಗಳ ಮಾಹಿತಿಯನ್ನು ಎಸ್.ನಟರಾಜ ಶರ್ಮಾ ನೀಡಿದ್ದಾರೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ ,   
ಸಿದ್ಧರಾಮಯ್ಯರ 70 ಲಕ್ಷದ ಹ್ಯೂಬ್ಲೋಟ್ ವಾಚ್ ಪ್ರಕರಣ, 2018-19ರ ಎಂಬಿಬಿಎಸ್ ಸೀಟು ಹಂಚಿಕೆ ಹಗರಣ, ಶಾಪೂರ್ ಜಿ ಪಾಲ್ಲೊಂಜಿ ಗ್ರೂಪಿಗೆ ಕೆಪಿಸಿಎಲ್ ಟೆಂಡರ್ ಹಂಚಿಕೆ ಪ್ರಕರಣ, ಹೀಗೆ ಇದುವರೆಗೂ ಎಸಿಬಿಯಲ್ಲಿ ಅನೇಕ ಪ್ರಭಾವಿಗಳು ರಾಜಕಾರಣಿಗಳ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳು ಇನ್ನು ಕೂಡಾ ಪೆಂಡಿಂಗ್ ನಲ್ಲಿವೆ ಎಂದು ದೂರಿನಲ್ಲಿ ಹೇಳಿದ್ದಾರೆ. 

ಎಲ್ಲಾ ಪ್ರಕರಣಗಳ ತನಿಖೆ ಅಪೂರ್ಣವಾಗಿರುವುದು  ತನಿಖಾ ಸಂಸ್ಥೆಯ ಬೇಜಾವಾಬ್ಧಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಎಸ್.ನಟರಾಜ ಶರ್ಮಾ ಆರೋಪಿಸಿದ್ದಾರೆ. ನ್ಯಾಯಮೂರ್ತಿಗಳೇ ಎಸಿಬಿ ಎಡಿಜಿಪಿಯವರ ಸರ್ವಿಸ್ ರೆಕಾರ್ಡ್ ಕೇಳಿದ್ದಾರೆ. ಹೀಗಿರುವಾಗ ಇನ್ನೂ ಅವರನ್ನ ಹುದ್ದೆಯಲ್ಲಿ ಮುಂದುವರೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 
ಎಸಿಬಿ ತನ್ನ ಕಾರ್ಯಕ್ಷಮತೆ ಕಳೆದುಕೊಂಡಿದ್ದು, ಸರ್ಕಾರ ಆದಷ್ಟು ಬೇಗ ಈ‌ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. 

ಇದನ್ನೂ ಓದಿ : Kota Srinivas Poojary : ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್‌ ವಾಹನ ಪಲ್ಟಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News