ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣ ಸಂಬಂಧ ಸದ್ಯ ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆರೋಪಿಯ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರೆಸಿದ್ದಾರೆ. ಜೊತೆಗೆ ಇಂದು ಆರೋಪಿಯ ಸಹೋದರನನ್ನು ಸಹ ಬಂಧಿಸಿದ್ದು, ಕೆಲವು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಸಿದ್ದರಾಮಯ್ಯ ರಾಜಕೀಯ ಹೊಡೆತಕ್ಕೆ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ: ಬಿಜೆಪಿ


ಪಾಗಲ್ ಪ್ರೇಮಿ ನಾಗೇಶ್ ಸಹೋದರ ಹಾಗೂ ಪೋಷಕರನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಗೇಶ್‌ ಅಣ್ಣ ಸುರೇಶ್‌ ಬಾಬು ವಿಚಾರಣೆ ವೇಳೆ ಈ ರೀತಿ ಹೇಳಿಕೆ ನೀಡಿದ್ದಾನೆ: "ಆಸಿಡ್‌ ದಾಳಿ ನಡೆಸಿದ ಬಳಿಕ ಫೋನ್‌ ಮಾಡಿ ನಾಗೇಶ್‌ ವಿಷಯ ತಿಳಿಸಿದ. ಇದರಿಂದ ನಾವು ಭಯಬಿದ್ದು, ಮನೆಬಿಟ್ಟು ಓಡಿಹೋದೆವು" ಎಂದಿದ್ದಾರೆ. ಸದ್ಯ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿಗಳು ತಿಳಿದುಬರಲಿವೆ. 


ಸಂತ್ರಸ್ತೆ ಭೇಟಿ ಮಾಡಿದ ಸಚಿವ ಸುಧಾಕರ್‌: 
ಆಸಿಡ್‌ ದಾಳಿಗೆ ತುತ್ತಾದ ಸಂತ್ರಸ್ತೆ ಸದ್ಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಅವರು, "ಸಂತ್ರಸ್ತೆಯ ಚಿಕಿತ್ಸಾ ವೆಚ್ಚವನ್ನು  ಸರ್ಕಾರ ಭರಿಸುತ್ತದೆ. ಶ್ರೀಘ್ರದಲ್ಲಿ ಆರೋಪಿ ನಾಗೇಶ್‌ನನ್ನು ಬಂಧಿಸಲಾಗುತ್ತದೆ. ವೈಯಕ್ತಿಕವಾಗಿ ಯುವತಿಗೆ 5 ಲಕ್ಷ ರೂ. ಧನಸಹಾಯ ಮಾಡುತ್ತೇನೆ. ಮುಂದೆ ಆಕೆಗೆ ಸರ್ಕಾರಿ ಉದ್ಯೋಗ ಕೊಡುವ ಚಿಂತನೆಯೂ ಇದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ" ಎಂದರು. 


ಇದನ್ನು ಓದಿ: ನಿಮ್ಮ ಅಧಿನಾಯಕಿ ಮತ್ತು ಯುವರಾಜ ಕನ್ನಡ ಮಾತನಾಡುತ್ತಾರೆಯೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ


"ಯುವತಿಗೆ ಸ್ಕಿನ್‌ ಬ್ಯಾಂಕ್‌ನಿಂದ ಸ್ಕಿನ್‌ನೀಡಲಾಗುವುದು. ಆಸಿಡ್‌ ದಾಳಿಯಿಂದ ಶೇ.35ರಷ್ಟು ದೇಹದ ಭಾಗಗಳು ಸುಟ್ಟುಹೋಗಿವೆ. ಸಂತ್ರಸ್ತೆಯ ಸ್ಥಿತಿ ಸ್ಪಲ್ಪ ಕ್ಲಿಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಾಗಿದೆ. ಪೂರ್ಣ ಚೇತರಿಕೆ ಕಾಣಲು 2 ತಿಂಗಳು ಸಮಯಬೇಕು. ಸುಧಾರಿಸುವ ಬಗ್ಗೆ ವೈದ್ಯರು ಭರವಸೆ ನೀಡಿದ್ದಾರೆ" ಎಂದು ಹೇಳಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.