ಸಿದ್ದರಾಮಯ್ಯ ರಾಜಕೀಯ ಹೊಡೆತಕ್ಕೆ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ: ಬಿಜೆಪಿ

ಪದೇ ಪದೇ ನಿಮ್ಮ ನಿರ್ದೇಶನಗಳನ್ನು ಉಲ್ಲಂಘಿಸುವ ಸಿದ್ದರಾಮಯ್ಯ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅಂಜುವ ನೀವು #ಅಸಹಾಯಕಅಧ್ಯಕ್ಷರೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Apr 30, 2022, 12:42 PM IST
  • ಹುಬ್ಬಳ್ಳಿ ಗಲಭೆ ಆರೋಪಿಗಳಿಗೆ ಕಿಟ್ ನೀಡಿದ ಜಮೀರ್ ಅಹ್ಮದ್ ಪ್ರಶ್ನಿಸುವಷ್ಟೂ ಸಾಮರ್ಥ್ಯ ಡಿಕೆಶಿಗಿಲ್ಲವೇ?
  • ಜಮೀರ್‍ಗೆ ನೋಟಿಸ್ ನೀಡಿದ್ರೆ ಸಿದ್ದರಾಮಯ್ಯ ಬಣದಿಂದ ಆಕ್ರೋಶ ವ್ಯಕ್ತವಾಗುವ ಭಯ ಡಿಕೆಶಿಗಿದೆ
  • ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ ಎಂದ ಬಿಜೆಪಿ
ಸಿದ್ದರಾಮಯ್ಯ ರಾಜಕೀಯ ಹೊಡೆತಕ್ಕೆ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ: ಬಿಜೆಪಿ  title=
‘ಡಿಕೆಶಿ ಸದಾರಮೆ ನಾಟ ನಿಲ್ಲಿಸಿ’

ಬೆಂಗಳೂರು: ಸಿದ್ದರಾಮಯ್ಯರ ರಾಜಕೀಯ ಹೊಡೆತ ತಾಳಲಾರದೇ #ಅಸಹಾಯಕಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ. ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ, ಪಿಎಫ್‍ಐ ಷಡ್ಯಂತ್ರವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದೆ.

‘ಕೆಪಿಸಿಸಿ #ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ ಅವರಿಗೂ ನಮಗೂ ಸಂಬಂಧವಿಲ್ಲ ಎಂಬ ಸೋಗಲಾಡಿತನ ಬಿಡಿ. ಫುಡ್ ಕಿಟ್ ಹಂಚಲು ತಯಾರಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇದೆಯೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಈ ರೀತಿ ತಿಪ್ಪೆಸಾರಿಸುವ ಬದಲು ಸತ್ಯ ಒಪ್ಪಿಕೊಳ್ಳಿ’ ಎಂದು ಟೀಕಿಸಿದೆ.

ಇದನ್ನೂ ಓದಿ: Hindi Imposition: ‘ಹಿಂದಿ ಮಾತನಾಡಲು ಬಯಸದವರು ದೇಶ ಬಿಟ್ಟು ತೊಲಗಲಿ’

‘ಹುಬ್ಬಳ್ಳಿ ಗಲಭೆಯ ಆರೋಪಿಗಳಿಗೆ ಆರ್ಥಿಕ ಮತ್ತು ಆಹಾರ ಕಿಟ್ ಒದಗಿಸಲು ಹೊರಟ ಕಾಂಗ್ರೆಸ್‌ ಶಾಸಕರೊಬ್ಬರನ್ನು ಪ್ರಶ್ನಿಸುವಷ್ಟೂ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲವೇ? ಜಮೀರ್ ಅವರಿಗೆ ನೋಟಿಸ್ ನೀಡಿದರೆ ಸಿದ್ದರಾಮಯ್ಯ ಬಣದಿಂದ ಆಕ್ರೋಶ ವ್ಯಕ್ತವಾಗುವ ಭಯ ಡಿ.ಕೆ.ಶಿವಕುಮಾರ್ ಅವರನ್ನು ಕಾಡುತ್ತಿದೆಯೇ?’ ಎಂದು ಪ್ರಶ್ನಿಸಿದೆ.

‘ಡಿ.ಕೆ.ಶಿವಕುಮಾರ್ ಅವರೇ  ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ. ಹಿಜಾಬ್‌ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನೇರವಾಗಿ ಸಹಕರಿಸಿದಿರಿ. ಹರ್ಷ ಕೊಲೆಯಾದಾಗ ಅಂತರ ಕಾಯ್ದುಕೊಂಡ ನೀವು ಈಗ ಹುಬ್ಬಳ್ಳಿ ಗಲಭೆಕೋರರಿಗೆ ಆರ್ಥಿಕ ಸಹಾಯ ನೀಡಲು ಹೊರಟಿದ್ದೀರಿ. ಏನಿದೆಲ್ಲ?’ ಅಂತಾ ಟ್ವೀಟ್ ಮಾಡಿದೆ.

‘ಅಧಿಕಾರದಲ್ಲಿದ್ದಾಗ ಸಮಾಜ ಘಾತುಕ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿದಿರಿ. ಕಾಂಗ್ರೆಸ್‌ ಪಕ್ಷದ ಕೃಪಾಶೀರ್ವಾದದಿಂದ ಬೆಳೆದ ಅದೇ ಮತಾಂಧರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಈಗ ತೊಡಗಿಸಿಕೊಂಡಿದ್ದಾರೆ. ನೀವೇ ಬೆಳೆಸಿದ ಸಂಘಟನೆಗಳನ್ನು ಈಗ ನಿಷೇಧಿಸಿ ಎನ್ನುವುದಕ್ಕೆ ಅರ್ಥವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: PSI ನೇಮಕಾತಿ ಅಕ್ರಮ: ತಡರಾತ್ರಿವರಗೆ ನಿದ್ರೆ ಬರದೆ ಪರದಾಡಿದ ದಿವ್ಯಾ ಹಾಗರಗಿ

‘ಡಿಕೆಶಿಯವರೇ ಪಕ್ಷ ಮುನ್ನಡೆಸುವುದಕ್ಕೂ ಸಾಮರ್ಥ್ಯ ಬೇಕು. ಪದೇ ಪದೇ ನಿಮ್ಮ ನಿರ್ದೇಶನಗಳನ್ನು ಉಲ್ಲಂಘಿಸುವ ಸಿದ್ದರಾಮಯ್ಯ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅಂಜುವ ನೀವು #ಅಸಹಾಯಕಅಧ್ಯಕ್ಷರೇ? ಡಿಕೆಶಿ ನೋಟು, ಸಿದ್ದರಾಮಯ್ಯ ಸೂಟು!!! ಸಿದ್ದರಾಮಯ್ಯ ರಾಜಕೀಯ ಹೊಡೆತ ತಾಳಲಾರದೇ #ಅಸಹಾಯಕಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ? ಡಿಕೆಶಿಯವರೇ ಹುಬ್ಬಳ್ಳಿ ಗಲಭೆಕೋರರಿಗೆ ಫುಡ್ ಕಿಟ್ ಹಂಚಲು ಹೋದ ಜಮೀರ್ ಅವರಿಗೆ ನೊಟೀಸ್‌ ನೀಡುವುದು ಬಿಟ್ಟು ಅಂತರ ಕಾಯ್ದುಕೊಂಡಿದ್ದೇಕೆ? ಎಂದು ಬಿಜೆಪಿ ಕೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News