ಲಕ್ನೋ: ಡ್ರಿಪ್‍ನಲ್ಲಿ ರಕ್ತದ ಬದಲಿಗೆ ಮೊಸಂಬಿ ಜ್ಯೂಸ್ ಹಾಕಿದ್ದರಿಂದ ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಕ್ತದ ಡ್ರಿಪ್ ಬದಲಿಗೆ ಮೊಸಂಬಿ ಜ್ಯೂಸ್ ಹಾಕಿರುವುದನ್ನು ಕಾಣಬಹುದಾಗಿದೆ. ಮೃತನ ಕುಟುಂಬಸ್ಥರ ಆರೋಪದ ಮೇರೆಗೆ ಇದೀಗ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾತನಾಡಿರುವ ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಸಿಂಗ್, ‘ಪ್ರಯಾಗ್‍ರಾಜ್‍ನ ಝಲ್ವಾ ಪ್ರದೇಶದಲ್ಲಿ ಡೆಂಗ್ಯೂ ರೋಗಿಗಳಿಗೆ ನಕಲಿ ಪ್ಲಾಸ್ಮಾ ಸರಬರಾಜು ಮಾಡಲಾಗುತ್ತಿದೆ ಅನ್ನೋದರ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡ ರಚಿಸಲಾಗಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ದರಸಗುಪ್ಪೆ ಹೋಟೇಲ್ ಶಿವಪ್ಪ ನಿಧನ


ಸಲಿಂಗಕಾಮಿ ವಿದ್ಯಾರ್ಥಿನಿಯರ ನಡುವೆ ಫೈಟ್; ಬ್ಲೇಡ್​ನಿಂದ ಕತ್ತು ಕೊಯ್ದ ಗೆಳತಿ..!


ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ‘ಡೆಂಗ್ಯೂ ರೋಗಿಗೆ ನಕಲಿ ಪ್ಲಾಸ್ಮಾ ಪೂರೈಕೆ ಪ್ರಕರಣ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಾವು ಈಗಾಗಲೇ ತನಿಖೆ ನಡೆಸಲು ತಂಡವನ್ನು ರಚಿಸಿದ್ದು, ಸ್ಥಳಕ್ಕೆ ಕಳುಹಿಸಿದ್ದೇವೆ. ಕೆಲವೇ ಗಂಟೆಗಳಲ್ಲಿ ವರದಿ ಸಲ್ಲಿಕೆಯಾಗಲಿದೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಅಂತಾ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ