ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ದರಸಗುಪ್ಪೆ ಹೋಟೇಲ್ ಶಿವಪ್ಪ ನಿಧನ

ಚಿತ್ರ ನಟರು ಸೇರಿ ಹಲವು ಪ್ರಮುಖರು ಈ ಹೋಟೇಲ್‍ನ‌ ಇಡ್ಲಿ ರುಚಿಗೆ ಮಾರು ಹೋಗಿದ್ದರು. ಪ್ರತಿದಿನ‌ ಜನರು ಈ ಹೋಟೆಲ್‍ಗೆ ಬಂದು ಬೆಣ್ಣೆ ಇಡ್ಲಿಗೆ ಕ್ಯೂ ನಿಲ್ಲುತ್ತಿದ್ದರು.

Written by - Zee Kannada News Desk | Last Updated : Oct 21, 2022, 02:37 PM IST
  • ಮಂಡ್ಯ ಜಿಲ್ಲೆಯ ಬೆಣ್ಣೆ ಇಡ್ಲಿ ಖ್ಯಾತಿಯ ಶಿವಪ್ಪ ನಿಧನ ಹೊಂದಿದ್ದಾರೆ
  • ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಶಿವಪ್ಪ ನಿಧನ
  • ಶ್ರೀರಂಗಪಟ್ಟಣದ ದರಸಗುಪ್ಪೆ ಗ್ರಾಮದಲ್ಲಿ ಚಿಕ್ಕ ಹೋಟೆಲ್ ನಡೆಸ್ತಿದ್ದ ಶಿವಪ್ಪ
ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ದರಸಗುಪ್ಪೆ ಹೋಟೇಲ್ ಶಿವಪ್ಪ ನಿಧನ title=
ಬೆಣ್ಣೆ ಇಡ್ಲಿ ಶಿವಪ್ಪ ನಿಧನ

ಮಂಡ್ಯ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬೆಣ್ಣೆ ಇಡ್ಲಿ  ಎಂದೇ ಖ್ಯಾತಿಯಾಗಿದ್ದ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಇಡ್ಲಿ ಶಿವಪ್ಪ ನಿಧನರಾಗಿದ್ದಾರೆ.

ಸ್ಕೂಟರ್‍ನಲ್ಲಿ ರಾಮನಗರಕ್ಕೆ ಹೋಗುತ್ತಿದ್ದಾಗ ರಸ್ತೆ ಮಧ್ಯೆ ನಾಯಿ ಅಡ್ಡ ಬಂದ ಪರಿಣಾಮ ಕೆಳಕ್ಕೆ ಬಿದ್ದು ಶಿವಪ್ಪ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುರುವಾರ ತೀವ್ರ ನೋವಿನಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Farmer Protest : ತಾಕ್ಕತ್ತ್ ಇದ್ರೆ ಕಿತ್ತೂರ ಉತ್ಸವಕ್ಕೆ ಬರ್ರಿ : ಸಿಎಂಗೆ ರೈತ ಮುಖಂಡ ಸವಾಲು

ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದಲ್ಲಿ ಚಿಕ್ಕ ಹೋಟೆಲ್ ನಡೆಸ್ತಿದ್ದ ಶಿವಪ್ಪನವರು ತುಂಬಾ ಫೇಮಸ್ ಆಗಿದ್ದರು. ಈ ಹೋಟೆಲ್‍ನಲ್ಲಿ ರುಚಿ ರುಚಿಯಾದ ಬೆಣ್ಣೆ ಇಡ್ಲಿ ದೊರೆಯತ್ತಿದ್ದವು. ಈ ಹೋಟೆಲ್‍ನ ಬೆಣ್ಣೆ ಇಡ್ಲಿ ಸವಿಯಲು ಜನರು ಮಾರುದ್ದ ಕ್ಯೂನಲ್ಲಿ ನಿಲ್ತಿದ್ದರು.

ಕೇವಲ 30 ರೂ.ಗೆ 8 ಇಡ್ಲಿ ಮತ್ತು ಒಂದು ಬೆಣ್ಣೆ ಹಾಗೂ ಚಟ್ನಿ ಗ್ರಾಹಕರಿಗೆ ಸಿಗುತ್ತಿತ್ತು. ಚಿತ್ರ ನಟರು ಸೇರಿದಂತೆ ಹಲವು ಪ್ರಮುಖರು ಈ ಹೋಟೇಲ್‍ನ‌ ಇಡ್ಲಿ ರುಚಿಗೆ ಮಾರು ಹೋಗಿದ್ದರು. ಪ್ರತಿದಿನ‌ ಜನರು ಈ ಹೋಟೆಲ್‍ಗೆ ಬಂದು ಬೆಣ್ಣೆ ಇಡ್ಲಿಗೆ ಕ್ಯೂ ನಿಲ್ಲುತ್ತಿದ್ದರು.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ

ಎಲ್ಲರ ಬಾಯಲ್ಲೂ ಬೆಣ್ಣೆ ಇಡ್ಲಿ ಶಿವಪ್ಪ ಎಂದೇ ಖ್ಯಾತಿ ಪಡೆದಿದ್ದರು. ತಮ್ಮ ಮನೆಯಲ್ಲಿಯೇ ಜೀವನೋಪಾಯಕ್ಕೆ ಶಿವಪ್ಪನವರು ಸಣ್ಣ ಟೀ ಅಂಗಡಿ ಪ್ರಾರಂಭಿಸಿ ಪ್ರಸಿದ್ಧರಾಗಿದ್ದರು. ಶುಚಿ-ರುಚಿಗೆ ಖ್ಯಾತರಾಗಿದ್ದ ಇವರ ಹೋಟೆಲ್‍ನಲ್ಲಿ ಟೀ ಕುಡಿಯಲು ಸಾವಿರಾರು ಜನರು ಆಗಮಿಸುತ್ತಿದ್ದರು.  

ಮೃತ ಶಿವಪ್ಪನವರು ಪತ್ನಿ, ಪುತ್ರ ಸೇರಿದಂತೆ ಸಾವಿರಾರು ಮಂದಿ ಇಡ್ಲಿ ಪ್ರಿಯರನ್ನು ಅಗಲಿದ್ದಾರೆ. ಶಿವಪ್ಪನವರ ಅಂತ್ಯಕ್ರಿಯೆ ದರಸಗುಪ್ಪೆ ಗ್ರಾಮದ ಬಳಿ ನಡೆಯಲಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News