SHOCKING News: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯೇ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಪುಣೆಯ ನಗರ ರಸ್ತೆ ಬಳಿಯ ಲೋನಿಕಂಡ್ ಪ್ರದೇಶದಲ್ಲಿ ಪುತ್ರನನ್ನು ತಾಯಿ ಮತ್ತು ಆಕೆಯ ಪ್ರೇಮಿ ಸೇರಿ ಕೊಲೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಬುಧವಾರ(ಅಕ್ಟೋಬರ್‌ ೯) ತಡರಾತ್ರಿ ಈ ಅಪರಾಧ ಕೃತ್ಯ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಅನಿಲ್ ಲಾಲ್ಸಿಂಗ್ ಠಾಕೂರ್ (30) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆತನ ತಾಯಿ ಸುಮಿತ್ರಾ ಲಾಲ್ಸಿಂಗ್ ಠಾಕೂರ್ (55) ಮತ್ತು ಆಕೆಯ ಪ್ರಿಯಕರ ಪ್ರಫುಲ್ ಪುಂಡಲೀಕ್ ರಾಥೋಡ್ (34) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಪ್ರಫುಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬಿಸಿದ್ದಾರೆ.


ಇದನ್ನೂ ಓದಿ: ಕಣ್ಣಿನ ದೃಷ್ಟಿ ಪರೀಕ್ಷೆ..!! ಈ ಫೋಟೋದಲ್ಲಿ ʼ88' ಸಂಖ್ಯೆ ಎಲ್ಲಿದೆ ಅಂತ ಕಂಡುಹಿಡಿಯುವಿರಾ..?


ವರದಿಗಳ ಪ್ರಕಾರ ಅನಿಲ್ ಸಹೋದರ ಸುನಿಲ್ ಠಾಕೂರ್ (32) ಲೋಣಿಕಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ಅನಿಲ್ ಠಾಕೂರ್ ಕುಟುಂಬ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪೆರ್ನೆ ಫಾಟಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಪ್ರಫುಲ್ ಜೊತೆ ಸುಮಿತ್ರಾ ಅಕ್ರಮ ಸಂಬಂಧ ಬೆಳಕಿಗೆ ಬಂದ ನಂತರ ಅನಿಲ್ ಹಾಗೂ ಆತನ ತಾಯಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.


ಅಪರಾಧ ನಡೆದ ರಾತ್ರಿ ಅನಿಲ್, ಆಕೆಯ ತಾಯಿ ಮತ್ತು ಆಕೆಯ ಪ್ರಿಯಕರ ಪ್ರಫುಲ್‌ ನಡುವೆ ಜಗಳವಾಗಿತ್ತು. ಕೋಪದ ಭರದಲ್ಲಿ ಪ್ರಫುಲ್‌ ಮತ್ತು ಸುಮಿತ್ರಾ ಸೇರಿಕೊಂಡು ಅನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಬಳಿಕ ದೊಡ್ಡ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಸಾವನ್ನಪ್ಪಿದ್ದಾನೆ. 


ಇದನ್ನೂ ಓದಿ: 600 ಜನರ ಜೊತೆ S*X.. ಮಾಡಿದ್ರೂ ಇನ್ನೂ ಈಕೆ ಆಸೆ ಈಡೇರಿಲ್ಲ..! ಒಂದೇ ದಿನಕ್ಕೆ 22 ಮಲಗಿ ದಾಖಲೆ ಬರೆದ ಸುಂದರಿ..


ಘಟನೆ ಬಗ್ಗೆ ಮಾಹಿತಿ ಪಡೆದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಡಿತ್ ರೆಜಿತ್ವಾಡ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುಮಿತ್ರಾಳನ್ನು ಬಂಧಿಸಿದರು. ಆದರೆ ಪ್ರಫುಲ್‌ ಸದ್ಯ ಎಸ್ಕೇಪ್‌ ಆಗಿದ್ದಾನೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.