Bengaluru Crime : ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
31 ವರ್ಷದ ದೀಪಾ ಹಾಗೂ ಮೂರುವರೆ ವರ್ಷದ ಮಗು ರಿಯಾ ಮೃತಪಟ್ಟವರು. ಬ್ರಹ್ಮಾವರ ಮೂಲದ ದೀಪಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆದರ್ಶ್ ಜೊತೆ 2017 ರಲ್ಲಿ ಮದುವೆಯಾಗಿತ್ತು. ವಿವಾಹದ ಬಳಿಕ ಆರ್ ಆರ್ ನಗರದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.
ಬೆಂಗಳೂರು : ಮಗುವನ್ನು ಕೊಂದು ಡೆತ್ ನೋಟ್ ಬರೆದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
31 ವರ್ಷದ ದೀಪಾ ಹಾಗೂ ಮೂರುವರೆ ವರ್ಷದ ಮಗು ರಿಯಾ ಮೃತಪಟ್ಟವರು. ಬ್ರಹ್ಮಾವರ ಮೂಲದ ದೀಪಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆದರ್ಶ್ ಜೊತೆ 2017 ರಲ್ಲಿ ಮದುವೆಯಾಗಿತ್ತು. ವಿವಾಹದ ಬಳಿಕ ಆರ್ ಆರ್ ನಗರದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.
ಇದನ್ನೂ ಓದಿ : ಬಿಬಿಎಂಪಿ ಚುನಾವಣೆ ಹತ್ತಿರುವಾಗ ರೌಡಿ ಶೀಟರ್ ಗಳು ಆ್ಯಕ್ಟೀವ್ : ಬಿಸಿ ಮುಟ್ಟಿಸಿದ ಸಿಸಿಬಿ
ಕಳೆದ ಒಂದು ವಾರದಿಂದ ದೀಪಾಗೆ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತಿದ್ದ ದೀಪಾ ಚಿಕಿತ್ಸೆ ಪಡೆದರೂ ಕಡಿಮೆಯಾಗಿರಲಿಲ್ಲ. ಇದರಿಂದ ಜಿಗುಪ್ಸೆಗೊಳಗಾಗಿದ್ದ ದೀಪಾ ನಿನ್ನೆ ರಾತ್ರಿ ಮೂರುವರೆ ವರ್ಷದ ರಿಯಾಳ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿ ಬಳಿಕ ತಾನು ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಾಯುವ ಮುನ್ನ ಡೆತ್ ನೋಟ್ ನಲ್ಲಿ" Nobody is responsible for it i just felt life is full of shits i am sorry mom and divya Love you shona ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಹಿತಿ ಮೇರೆಗೆ ಆರ್ ಆರ್ ನಗರ ಠಾಣಾ ಪೊಲೀಸ್ರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಳ್ಳತನದ ಹಾದಿ ಹಿಡಿದ ಗುರು: ತೊಗರಿ ಬೇಳೆ ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.