Bomb Threat Call : ಮುಂಬೈನ ಸುಪ್ರಸಿದ್ಧ ಹೋಟೆಲ್‌ಗೆ ಬಂತು ಬಾಂಬ್ ಬೆದರಿಕೆ ಕರೆ
Bomb Threat Call : ಮುಂಬೈನ ಪ್ರಸಿದ್ಧ ಲಲಿತ್ ಹೋಟೆಲ್‌ಗೆ ಮಂಗಳವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ. ಬೇಡಿಕೆ ಇಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್‌ಗೆ ಕರೆ ಮಾಡಿ, ಹೋಟೆಲ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸಬೇಕೆಂದರೆ 5 ಕೋಟಿ ರೂ. ನೀಡಿ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈ: ಮುಂಬೈನ ಪ್ರಸಿದ್ಧ ಲಲಿತ್ ಹೋಟೆಲ್‌ಗೆ ಮಂಗಳವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ. ಬೇಡಿಕೆ ಇಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್‌ಗೆ ಕರೆ ಮಾಡಿ, ಹೋಟೆಲ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸಬೇಕೆಂದರೆ 5 ಕೋಟಿ ರೂ. ನೀಡಿ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 336, 507 ರ ಅಡಿಯಲ್ಲಿ ಸಹಾರ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸರಿಗೆ ಪಾಕಿಸ್ತಾನಿ ಸಂಖ್ಯೆಯಿಂದ 26/11 ತರಹದ ಭಯೋತ್ಪಾದಕ ದಾಳಿ ಬೆದರಿಕೆ ಬಂದ ಕೆಲವೇ ದಿನಗಳಲ್ಲಿ ಈ ಬೆದರಿಕೆ ಕರೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ತಕ್ಷಣವೇ ಕ್ರೈಂ ಬ್ರಾಂಚ್‌ನ ಮೂರು ತಂಡಗಳನ್ನು ರಚಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಅಲ್ಲದೇ, ಇತರ ರಾಜ್ಯ ಮತ್ತು ಕೇಂದ್ರೀಯ ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ನಗರ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಹೇಳಿದ್ದಾರೆ.
ಇದನ್ನೂ ಓದಿ :
ನಾವು ಬೆದರಿಕೆಯನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ನಾವು ಯಾವುದೇ ಕರೆ ಸ್ವೀಕರಿಸಿದರು, ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಹೇಳಿದ್ದಾರೆ. ಈ ಹಿಂದೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 26/11 (2008) ರ ಪರಿಣಾಮವನ್ನು ಮೀರಿದ 'ಸ್ಫೋಟ'ದ ಎಚ್ಚರಿಕೆ, ಬೆದರಿಕೆಗಳು ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ವಾಟ್ಸಾಪ್ ಚಾಟ್‌ನಲ್ಲಿ ಸ್ವೀಕರಿಸಲ್ಪಟ್ಟವು. ಶುಕ್ರವಾರ, ಶನಿವಾರ ಮುಂಜಾನೆ ನಗರದ ಭದ್ರತಾ ಉಪಕರಣವನ್ನು ಹೈ-ಅಲರ್ಟ್ ಮಾಡಲಾಯಿತು.
ಮುಂಬೈ ಜನರು ಗಾಬರಿಯಾಗಬಾರದು. ನಾವು ಎಲ್ಲಾ ಕೋನಗಳಿಂದ ಸಮಸ್ಯೆಯನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಏನೂ ಆಗುವುದಿಲ್ಲ, ನಾವು ನಗರವನ್ನು ಸುರಕ್ಷಿತವಾಗಿರಿಸುತ್ತೇವೆ ಎಂದು ಫನ್ಸಾಲ್ಕರ್ ಮಾಧ್ಯಮಗಳಿಗೆ ತಿಳಿಸಿದರು. ವಾಟ್ಸಾಪ್ ಚಾಟ್ ಸಂದೇಶಗಳಲ್ಲಿನ ಒಂದು ಸಂಖ್ಯೆಯು ಪಾಕಿಸ್ತಾನದ್ದಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ ಮತ್ತು ಸಂವಹನದಲ್ಲಿ ಇತರ ಆರು ಭಾರತೀಯ ಸಂಖ್ಯೆಗಳನ್ನು ತನಿಖಾ ತಂಡಗಳು ಟ್ರ್ಯಾಕ್ ಮಾಡುತ್ತಿವೆ.
ಇದನ್ನೂ ಓದಿ :
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.